ಕುಂದಾಪುರ: ಇಲ್ಲಿನ ತ್ರಾಸಿ ಬೀಚ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭಾರಿ ಅಪಘಾತದಲ್ಲಿ ಟ್ರಕ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದರೇ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏನಾಯ್ತು? ಭಟ್ಕಳ ಕುಂದಾಪುರಕ್ಕೆ ವೇಗಗಾಗಿ ಚಲಿಸುತ್ತಿದ್ದ ಖಾಸಗಿ ಎಂಪಿಎಂ ಬಸ್ಸು ಮತ್ತು ಕುಂದಾಪುರ ಕಡೆಯಿಂದ ಭಟ್ಕಳದೆಡೆಗೆ ಸಾಗುತ್ತಿದ್ದ ಟ್ರೇಲರ್ ಲಾರಿ ತ್ರಾಸಿ ಬೀಚ್ ಸಮೀಪ ಮುಖಾಮುಖಿ ಡಿಕ್ಕಿಯಾಗಿತ್ತು, ಎರಡೂ ವಾಹನಗಳು ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ ಬಸ್ ಹಾಗೂ ಟ್ರಕ್ಕಿನ ಮುಂಭಾಗ ಸಂಪೂರ್ಣ ಪುಡಿಯಾಗುತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಲಾರಿ ಚಾಲಕನ್ನು ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿ ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯದ ವರೆಗೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸ್ಥಳಕ್ಕಾಗಿಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಖಾಸಗಿ ವೇಗದೂತ ಬಸ್ಸು ಚಾಲಕರು ಮನಬಂದಂತೆ ಬಸ್ಸು ಚಲಾಯಿಸುವುದು
Author: Editor Desk
ಕುಂದಾಪುರ: ಸಮುದಾಯದ ನೆರವಿನಿಂದ ಉತ್ಕರ್ಷ ಸಾಧಿಸಿರುವುದಕ್ಕೆ ಪ್ರತಿಯಾಗಿ ಅದರ ಋಣ ಸಂದಾಯ ಮಾಡಬೇಕಾದುದು ವ್ಯಕ್ತಿಯ ಕರ್ತವ್ಯ. ಅದೇ ರೀತಿ ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಿದ ವ್ಯಕ್ತಿಯ ಋಣ ತೀರಿಸುವ ಹೊಣೆ ಸಮುದಾಯದ ಮೇಲಿದೆ. ಪ್ರಕಾಶ ರಾವ್ ಅವರಿಗೆ ಸಲ್ಲಿಸಿದ ಸನ್ಮಾನ ಅಂತಹ ಋಣ ಸಂದಾಯದ ಪ್ರತೀಕ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮಹಾ ಪ್ರಬಂಧಕ ಕೆ. ಎಸ್. ಪ್ರಕಾಶ ರಾವ್ ಅವರ ೭೫ನೆ ಜನ್ಮದಿನದ ಸಂದರ್ಭ ಶಾಲೆಯ ಶಿಕ್ಷಕ, ಸಿಬಂದಿ, ವಿದ್ಯಾರ್ಥಿ, ಪೋಷಕರ ವತಿಯಿಂದ ಶನಿವಾರ ಶಾಲೆಯಲ್ಲಿ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಾದ ಧರ್ಮಶ್ರೀ, ಮಲ್ಲಿಕಾ, ನೀರಜ್, ಅನುಷಾ ಪೈ, ಶಿಕ್ಷಕರಾದ ರಾಜೇಶ್, ಜ್ಯೋತಿ ಮಯ್ಯ, ಶ್ರೀನಿವಾಸ ಪ್ರಭು, ಪೋಷಕರ ಪ್ರತಿನಿಧಿ ಡಾ. ಜಿ. ಪ್ರಕಾಶ ಕೊಡಂಚ, ಬಿ. ಜಗನ್ನಾಥ ಶೆಟ್ಟಿ, ಸುಬ್ಬಣ್ಣ ಶೆಟ್ಟಿ ಪ್ರಕಾಶ ರಾವ್ ಅವರ…
ಕುಂದಾಪುರ: ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಆತ್ಮಗೌರವ ಮತ್ತು ಪ್ರೇರಣೆಯಿಂದ ಸಮಾಜದ ಗೌರವಕ್ಕೆ ಪಾತ್ರರಾಗಿ ಆತ್ಮ ಸಂತೃಪ್ತಿ ಸಾಧಿಸಲು ಸಾದ್ಯ ಎಂದು ಬಾರ್ಕೂರು ಶ್ರೀ ಬೃಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಸಿ.ಪುರುಷೋತ್ತಮ ಶೆಟ್ಟಿಗಾರ ಹೇಳಿದರು. ಅವರು ಇತ್ತೀಚೆಗೆ ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ 29ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಮಾಜ ಸಂಘದ ಅಧ್ಯಕ್ಷ ಜನಾರ್ದನ ಶೆಟ್ಟಿಗಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಿವಿಲ್ ಇಂಜಿನಿಯರ್ ನಾರಾಯಣ ಶೆಟ್ಟಿಗಾರ, ದಕ., ಉಡುಪಿ ಹಿಂದುಳಿದ ಜಾತಿಗಳ ಒಕ್ಕೂಟದ ಉಪಕಾರ್ಯದರ್ಶಿ ಎಮ್.ಸಂಜೀವ ಶೆಟ್ಟಿಗಾರ, ಕುಂದಾಪುರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಪ್ತಿ ಸತೀಶ್ ಶೆಟ್ಟಿಗಾರ, ಮಹಿಳಾ ವೇದಿಕೆಯ ಪ್ರೇಮ ಶೆಟ್ಟಿಗಾರ, ನಿವೃತ್ತ ಶಿಕ್ಷಕಿ ಇಂದಿರಾ ಸಭೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸಂಘದ ಗೌರವಾಧ್ಯಕ್ಷ ಕೆ. ಗೋವಿಂದ ಶೆಟ್ಟಿಗಾರ ಮಹಿಳಾ…
ಮರವಂತೆ: ನಡುಬೆಟ್ಟಿನ ಅಂತೋನಿ ಡಿ’ಸೋಜ ಅವರ ಮನೆಯ ಪಕ್ಕದ ಹಾಡಿಯಲ್ಲಿ ಅರಣ್ಯದಿಂದ ಬಂದಿದ್ದ ಅತಿಥಿ ಹೆಬ್ಬಾವು ಕಾಣಸಿಕ್ಕಿತು. ಅವರು ಅಲ್ಲಿ ರಾಶಿಯಾಗಿದ್ದ ತರಗೆಲೆ, ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಕಂಡುಬಂದ ಹತ್ತು ಅಡಿ ಉದ್ದದ ಮಹೋರಗದಿಂದ ಬೆಚ್ಚಿದರು. ಸುದ್ದಿ ಕೇಳಿ ನೂರಾರು ಜನ ನೆರೆದರು. ಆದರೆ ಯಾರಿಗೂ ಹತ್ತಿರ ಹೋಗುವ ಧೈರ್ಯವಾಗಲಿಲ್ಲ. ಅಷ್ಟುಹೊತ್ತಿಗೆ ಕಾರ್ಯನಿಮಿತ್ತ ಅಲ್ಲಿಗೆ ಬಂದಿದ್ದ ತಾಲೂಕು ಪಂಚಾಯತ್ ಸದಸ್ಯ ಎಸ್. ರಾಜು ಪೂಜಾರಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಶೀಘ್ರ ಸ್ಥಳಕ್ಕೆ ಬಂದ ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸ್ಥಳೀಯರ ನೆರವಿನಿಂದ ಅದನ್ನು ಹಿಡಿದು ಚೀಲಕ್ಕೆ ಹಾಕಿ ಅದನ್ನು ಕಾಲ್ತೋಡಿನ ಕೂರ್ಸೆಯ ರಕ್ಷಿತಾರಣ್ಯದಲ್ಲಿ ಬಿಡುವ ಮೂಲಕ ಈ ಅತಿಥಿಯನ್ನು ಅದರ ಸಹಜ ನೆಲೆಗೆ ತಲಪಿಸುವುದಾಗಿ ತಿಳಿಸಿ ಒಯ್ದರು.
ಕುಂದಾಪುರ: ನಾವುಂದದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ಅಲ್ಲಿನ ಮಹಾಗಣಪತಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ’ಪ್ರಸ್ತುತ ಜೀವನ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು. ಉಪನಿಷತ್ತು ಮನುಷ್ಯರನ್ನು ಅಮೃತ ಪುತ್ರರು ಎಂದು ಪರಿಗಣಿಸಿದೆ. ಮನುಷ್ಯರು ಅದಕ್ಕೆ ಅರ್ಹವಾಗುವಂತೆ ಬದುಕಬೇಕಾದರೆ ನಮ್ಮ ಪರಂಪರೆಯಿಂದ ಬಂದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನ ಪಯಣದಲ್ಲಿ ಸುಲಭದ, ಪತನದತ್ತ ಒಯ್ಯುವ ಜಾರುದಾರಿಯನ್ನು ಬಳಸದೆ, ಸವಾಲುಗಳಿಂದ ಕೂಡಿದ ಸಾಧನಾ ಮಾರ್ಗವಾದ ಏರುದಾರಿಯನ್ನು ಹಿಡಿಯಬೇಕು. ವಿದ್ಯಾರ್ಥಿಗಳು ಬೆಂಕಿಯ ಕಿಡಿಗಳಾಗದೆ ಬೆಳಕಿನ ಕುಡಿಗಳಾಗಬೇಕು ಎಂದು ಮುದ್ರಾಡಿ ಹೇಳಿದರು. ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್ ಅಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಕಾಂತಿ ಹೆಬ್ಬಾರ್ ಸ್ವಾಗತಿಸಿದರು, ಪ್ರಾಂಶುಪಾಲ ಎಸ್. ನಾರಾಯಣ ರಾವ್ ಪ್ರಸ್ತಾವನೆಗೈದರು. ಉಪನ್ಯಾಸಕಿ ಸುಮಲತಾ ಅತಿಥಿಯನ್ನು ಪರಿಚಯಿಸಿದರು. ರೇಣುಕಾ ನಿರೂಪಿಸಿದರು.
ಬೈಂದೂರು: ನುಕ್ಯಾಡಿಯ ಕೊರಗರ ಕಾಲೋನಿಗೆ ಸಮರ್ಪಕವಾದ ರಸ್ತೆ, ವಿದ್ಯುತ್ ಹಾಗೂ ನೀರಿನ ಸೌಕರ್ಯದ ಅಗತ್ಯತೆಯ ಬಗ್ಗೆ ಗಮನಕ್ಕೆ ಬಂದಿದ್ದು, ಕಾಲೋನಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಮಹತ್ಮಾಜ್ಯೋತಿಬಾ ಪುಲೆ ಕೊರಗರ ಯುವ ಕಲಾವೇದಿಕೆಯ ಆಶ್ರಯದಲ್ಲಿ ಬೈಂದೂರು ಗ್ರಾಮದ ನುಕ್ಯಾಡಿಯಲ್ಲಿ ವನಮಹೋತ್ಸವ ಹಾಗೂ ಶ್ರಮದಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯವನ್ನು ಮಾಡುವುದರೊಂದಿಗೆ ಪರಿಸರದ ಸ್ವಚ್ಚತೆಯ ಬಗ್ಗೆಯೂ ಗಮನ ಹರಿಸಿರುವುದು ಶ್ಲಾಘನಾರ್ಹ ಎಂದವರು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ತಾಲೂಕು ಕೊರಗ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಕೊರಗ, ಮರವಂತೆ ಕೊರಗ ತನಿಯ ಯುವ ವೇದಿಕೆಯ ಶೇಖರ ಮರವಂತೆ, ಬಾರ್ಕೂರು ಹುಭಾಶಿಕ ಕೊರಗ ಯುವ ಕಲಾವೇದಿಕೆಯ ಗಣೇಶ್ ಬಾರ್ಕೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊರಗ ಕಾಲೋನಿಯ ನಡೆದ ಶ್ರಮದಾನ ಹಾಗೂ ಗೀಡ ನೆಡುವ ಕಾರ್ಯಕ್ರಮದ ಸಾರಥ್ಯವನ್ನು…
ಗಂಗೊಳ್ಳಿ: ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಕೃಷ್ಣ ಸ್ಪರ್ಧೆಯು ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಾಲೆಯ ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್, ಶಿಕ್ಷಕ-ರಕ್ಷಕ ಸಮಿತಿಯ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ, ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್, ತೀರ್ಪುಗಾರರುಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ: ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯು ಗುರು-ಶಿಷ್ಯ ಸಂಬಂಧವನ್ನು ಶಿಥಿಲಗೊಳಿಸುತ್ತಿದೆಯೆಂದು ಎಷ್ಟೋ ಬಾರಿ ಅನ್ನಿಸುತ್ತದೆ. ಅಧ್ಯಾಪನ ವೃತ್ತಿ ಕೈಗೊಂಡ ನಂತರ ನಮ್ಮ ವಿದ್ಯಾರ್ಥಿಗಳು ನಮ್ಮ ಜತೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೇನೋ, ನಮ್ಮ ಬಗ್ಗೆ ಅವರಿಗೆ ಪ್ರೀತಿ-ಕೃತಜ್ಞತೆಗಳಂಥ ಭಾವನೆಗಳೇ ಇಲ್ಲವೇನೋ ಅನ್ನಿಸುತ್ತಿತ್ತು. ಆದರೆ ಇದು ಸುಳ್ಳು ಅಂತ ಅನ್ನಿಸುವ ಸನ್ನಿವೇಶಗಳು ಹಲವು ಬಾರಿ ಎದುರಾದದ್ದೂ ಇದೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಡಾ. ಪಾರ್ವತಿ ಜಿ. ಐತಾಳ್ ಹೇಳಿದರು. ಅವರು ಇತ್ತಿಚಿಗೆ ಅವರದೇ ನಿವಾಸದಲ್ಲಿ ಪತಿ ಗಂಗಾಧರ ಐತಾಳರರೊಂದಿಗೆ ತಮ್ಮ ಹಳೆ ವಿದ್ಯಾರ್ಥಿಗಳಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. 25 ವರ್ಷಗಳ ಹಿಂದೆ ಕುಂದಾಪುರದ ಸಂತಮೇರಿ ಪ್ರೌಢಶಾಲೆಯಲ್ಲಿ ಕಲಿತು ತೇರ್ಗಡೆಯಾಗಿ ಮುಂದೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರಿಸಿದ ಈ ವಿದ್ಯಾರ್ಥಿಗಳು ಈಗ ಬೆಂಗಳೂರು, ಹುಬ್ಬಳ್ಳಿ, ಕಾರವಾರ, ದುಬೈ, ಲಂಡನ್ ಮೊದಲಾದ ವಿವಿಧೆಡೆಗಳಲ್ಲಿ ನೆಲೆಸಿರುವ ಸುಮಾರು 25 ಮಂದಿ ಅವರ ವಿದ್ಯಾರ್ಥಿಗಳು ಪಾರ್ವತಿ ಜಿ. ಐತಾಳ್ ಅವರ ಸ್ವಗೃಹಕ್ಕೆ ಬಂದು ಸನ್ಮಾನಿಸಿದ್ದರು.
ಕುಂದಾಪುರ: ಖಂಬದಕೋಣೆಯ ಆರ್. ಕೆ. ಸಂಜೀವ ರಾವ್ ತಮ್ಮ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ, ನೀಡಿದ ಕೊಡುಗೆಗಳಿಗಾಗಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದವರು. ಅವರ ಜನ್ಮಶತಾಬ್ದಿ ಸಂದರ್ಭದಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ಕೆಲಸ ನಡೆಯಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಖಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ ಆರ್. ಕೆ. ಸಂಜೀವ ರಾವ್ ಸ್ಮಾರಕ ಸಭಾಭವನದಲ್ಲಿ ಶನಿವಾರ ಆರ್. ಕೆ. ಸಂಜೀವ ರಾವ್ ಜನ್ಮಶತಾಬ್ದಿ ಉದ್ಘಾಟಿಸಿ ಅವರು ಮಾತನಾಡಿದರು. ಸಂಜೀವ ರಾವ್ ಸಂಸ್ಮರಣ ನುಡಿಗಳನ್ನಾಡಿದ ಮಾಜಿ ಶಾಸಕ ಎ. ಜಿ. ಕೊಡ್ಗಿ ಸಂಜೀವ ರಾವ್ ದೂರದರ್ಶಿತ್ವ ಹೊಂದಿದ್ದ ರಾಜಕಾರಣಿಯಾಗಿದ್ದರು. ತಾವು ಉನ್ನತ ಅಧಿಕಾರಕ್ಕೆ ಹಾತೊರೆಯದೆ ಸ್ಥಾನ ಬಯಸಿದ ಇತರ ನಾಯಕರ ಬೆಂಬಲಕ್ಕೆ ನಿಂತರು. ತೀರ ಹಿಂದುಳಿದಿದ್ದ ಬೈಂದೂರು ಪ್ರದೇಶದಲ್ಲಿ ಶಿಕ್ಷಣ, ಸಂಪರ್ಕ ಸೌಲಭ್ಯ ಕಲ್ಪಿಸಲು ಶ್ರಮಿಸಿದರು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಇನ್ನೋರ್ವ ಮಾಜಿ ಶಾಸಕ, ಸಂಜೀವ ರಾವ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ…
ಬೈಂದೂರು: ಡಾ. ಬಿ.ಆರ್ ಅಂಬೇಡ್ಕರ್ ದಲಿತರ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೇ ರಾಜಕೀಯವಾಘಿ ಬೆಳೆಯಬೇಖು ಎಂದು ಮನಗಂಡ ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ಕೇಳಿದ್ದರೇ ಹೊರತು ಮೀಸಲಾತಿಯನ್ನಲ್ಲ, ಆದರೆ ಅದನ್ನು ಮೇಲ್ವರ್ಗದವರು ಕಸಿದುಕೊಂಡಿದ್ದಾರೆ, ದಲಿತರಿಗೆ ಪ್ರತ್ಯೇಕ ಮತದಾನವನ್ನೇ ನಿಡಿದ್ದರೇ, ನಾವೇ ದೇಶದ ಆಡಳಿತ ನಡೆಸುತ್ತಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಜಯನಾಂದ ಮಲ್ಪೆ ಹೇಳಿದರು. ಯಡ್ತರೆ ಪಂಚಾಯತ್ ಸಭಾಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಬೈಂದೂರು ವಲಯದ ಶಾಖೆ ಉದ್ಘಾಟನೆ ಹಾಗೂ ವಲಯ ಮಟ್ಟದ ಗ್ರಾಮ ಶಾಖೆಗಳ ಪಧಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋಧಿಸಿ ಮಾತನಾಡಿದರು. ತಲೆತಲಾಂತರಗಳಿಂದ ತುಳಿತಕ್ಕೆ ಒಳಗಾಗಿದ್ದ ದಲಿತ ಸಮುದಾಯ ಸ್ವಾಭಿಮಾನದ ಬದುಕನ್ನು ನಡೆಸುವಂತಾಗಬೇಕೆಂದು ಹೋರಾಟ ನಡೆಸಿದರು, ಆದರೆ ಈಗ ನಾವು ಅಂಬೇಡ್ಕರ್ ಅವರನ್ನು ಮರೆಯುತ್ತಿದ್ದೇವೆ. ಇದು ವಿಷಾಧನೀಯ ಸಂಗತಿಯಾಗಿದ್ದು, ಅಂಬೇಡ್ಕರ್ ಆಶಯ ಮರೆತರೆ ಸಮಾಜಕ್ಕೆ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು, ಆದರೆ ಈಗ…
