ನೀರ್ ಬೆಲ್ಲ ಹಾಕಿದ್ ಕಾಫಿ ರುಚಿನೇ ಒಂಥರಾ ಬ್ಯಾರೆ ಇರತ್. ಈ ಕಾಫಿ ಅಂಬುದ್ ಇತ್ತಲೆ, ಇದು ಇತ್ಲಾಯಿ ನಮ್ಮ ಊರಿಗೆ ಬಂದದ್, ಮೊದಲ್ ಕಾಫಿ ಇರ್ಲಿಲ್ಲೆ. ಕಾಫಿನಾ, ಗೀಫಿನಾ, ಬರೀ ಬೆಲ್ಲ ಹಾಕಿದ್ ಜೀರಿಗೆ ಕಷಾಯ ಕುಡ್ಕಂಡ್ ನಾವೆಲ್ಲ ಬೆಳಗಿನ ಕೆಲ್ಸು ಶುರು ಮಾಡ್ಕಿತ್. ಬರೀ ಜೀರಿಗೆ ಕಷಾಯ ಕುಡಿದ್ರೆ ಬೆಳ್ಗ ಮುಂಚೆಯೇ ಬಾಯಿ ಒಂಥರಾ ಆತಿಲ್ಯಾ? ಅಂತ ನಾವ್ ಕೇಂಡ್ರೆ, ನಿಮ್ಗೆ ಮಕ್ಕಳಿಗೆ ಒಳ್ಳೆ ಬಾಯಿರುಚಿ ಈಗ. ಕಾಫಿನಾ ಮತ್ತೆಂತದಾ? ಅಂದ್ಕಂಡ ನಮ್ಗೆ ಮೊದಲೆಲ್ಲ ಬೈತಿದ್ರ್. ಈ ಕಾಫಿ ಪುಡಿ ಇತ್ತಲೆ, ಇದ್ ನಮ್ಮ ಪೇಟೇಲಿ ಅಂಗಡಿಗೆ ಹೊಸ್ತಾಯಿ ಮಾರಟಕ್ಕೆ ಬಂದ ಸಮಯದಲ್ಲಿ ಗಂಡಸ್ರ್, ದೊಡ್ಡವ್ರ್ ಮಾತ್ರ ಕಾಫಿ ಕುಡೀಲಿಕ್ಕಿದ್ದಿತ್. ನಮ್ಗೆಲ್ಲ. ಹೆಂಗಸ್ರು, ಮಕ್ಕ್ಳಿಗ್ ಜೀರಿಗೆ ಬಿಸ್ನೀರ್ ಅಥ್ವಾ ನೇರ್ಲ ಕುಡಿ ಕಷಾಯ. ಅದ್ಕ್ ಹಾಲ್ ಸಮೇತ ಸರಿ ಹಾಕ್ತಿರಲ್ಲೆ…. ಅಂತ ನೆನಪ್ ಮಾಡ್ಕಂತಿದ್ರ್. ಅಜ್ಜಿ ಎದ್ದ್ ಕೂಡ್ಲೇ ಒಂದ್ ಕಾಫಿ ಬೇಕೇ ಬೇಕ್ ಕಾಣಿ, ಕಾಫಿ ಕುಡ್ದ್…
Author: Editor Desk
ಕೆಲವ್ರ್ ಸ್ವಭಾವನೇ ಹಾಂಗೇ ಇದ್ದಿತ್ ಕಾಣಿ. ಬೇಕು ಬೇಕು ಎಂದೇಳಿರತ್ತ್ ಆರೆ ಕೇಂಬುಕ್ ಶಡ ಬಿಡ್ತಿಲ್ಲೆ ಅಲ್ದಾ? ಅದ್ ತಿಂಬು ವಿಷ್ಯದಲ್ಲಾರೂ ಅಕ್ಕ್, ಬೇರೆ ವಿಷ್ಯದಾಗಾರೂ ಅಕ್ಕ್. ಶಡ ಇದ್ರೆ ಅದನ್ ಉಳಿಸ್ಕಂಬ್ದೇ ದೊಡ್ಡದಾತ್ತ್. ಅದ್ಕೆ ಕುಂದಾಪ್ರ ಬದಿಯಾಂಗೆ ಒಂದ್ ಕತಿ ಇತ್ತ್ ಕೇಣಿ. ಹೊಸದಾಯಿ ಮದ್ವಿ ಆದ ಅಳಿಯ ಚೌತಿ ಹಬ್ಬುಕೆ ಅಂದೇಳಿ ಅತ್ತಿ ಮನಿಗ್ ಬಂದೀನಂಬ್ರು. ಅತ್ತಿ ಅಳಿಯಂಗಂದೇಳಿ ತಂಬಿಟ್ಟ್ ಮಾಡೀಳ್. ತಂಬಿಟ್ಟೂ ರುಚಿ ರುಚಿ ಆಗಿತ್ತ್. ಅಳಿಯಂಗ್ ತಂಬಿಟ್ಟ್ ಅಂದ್ರೆ ಬಾಳಾ ಇಷ್ಟ ಆಗಿತ್ತ್. ಒಂದೆರಡ್ ತಂಬಿಟ್ಟ್ ತಿಂದ ಅನ್ನಿ, ಆರೆ ಅಂವಂಗ್ ಅದ್ ಸಾಕಾಗಿತ್ತಿಲ್ಲೆಂಬ್ರ್. ಆರೆ ಬೇಕು ಅಂದೇಳ್ರೆ ಮಾವ್ನ ಮನೆಯವ್ರ್ ಎನಾರು ಅಂದ್ರೆ ಅಂದ್ಕಂಡ್ ದಾಕ್ಷಿಣ್ಯಕ್ ಬೇಡ ಬೇಡ ಅಂದ್ ಕೈ ತೊಳ್ಕಂಡ್ ಕೂಕಂಡಂಬ್ರ್. ಆರೆ ಅವ್ನ ಮನಸೆಲ್ಲಾ ತಂಬಿಟ್ಟೇ ತುಂಬ್ಕಂಡಿತ್ತ್. ಮತ್ತೂ ಬೇಕ್ ಬೇಕ್ ಅಂದ್ ತೊwu ಆತಿತ್ತ್. ರಾತ್ರಿ ಎಲ್ಲರೂ ಮನ್ಗದ್ ಮೇಲೆ ಹೆಂಡತಿಗೂ ನಿದ್ರಿ ಹತ್ತ್ದ್…
ಅಲ್ಲಾ . . . ಮರ್ರೆ, ನಮ್ ದೇಶ, ಭಾಸಿ, ಸಂಸ್ಕ್ರತಿ ಅಂದೆಲ್ಲಾ ಹೇಳೂದ್ ಸುಮ್ನೆ ಮರ್ರೆ. ಎಂತಾಕ್ ಗೊಯಿತಾ? ಇದೆಲ್ಲಾ ಮಾಡ್ತಾ ಕೂಕಂಡ್ರೆ ಅದ್ ಕೂಳ್ ಹಾಕತ್ತಾ ಅಂದೀಕಿ ಎಲ್ಲಾ ಕೇಂತ್ರೆ. ಆದ್ರೂ ಮನ್ಸ್ ಕೇಂತಿಲ್ಲಾ ಕಾಣಿ. ಎಂತಾಕಂದ್ರೆ, ಬೆಂಗ್ಳೂರ್ ಬಂಬಾಯಿ ಹಾಂಗೆ ನಮ್ ಕುಂದಾಪ್ರ ಬದಿಯಾಗೂ ಎಲ್ಲಾ ಬದ್ಲ ಆಪುಕ್ ಸುರುವಾಯ್ತ್ ಕಾಣಿ ಮದ್ಲ್ ರಸ್ತಿ ಬದಿತಾಗ್ ಎಷ್ಟ್ ಮರ್ಗಳ್ (ಮರಗಳು) ಇತ್ತ್ ಬಲ್ಲಿಯಾ? ಈಗ ಅದ್ನೆಲ್ಲಾ ಕಡ್ದ್ ಕಡ್ದ್ ಹಾಕೀರೆ. ಯಾವ್ ಊರ್ ಎಲ್ಲ್ ಬಂತ್ ಅಂದೀಕಿ ಗುತಾತಿಲ್ಲೆ, ಈಗಂತೂ ಯಲ್ಲಾ ಮನಿಗೂ ಒಡ್ದ್ ಒಡ್ದ್ ಹಾಕ್ತಿದ್ರೆ. ಇದೆಲ್ಲಾ ಕಂಡ್ರೆ ಬ್ಯಾಜರ್ ಬತ್ತತ್ತ್. ಮದಿ ಮಾಡಿ ಕಾಣ್ಕಂಬ್ರ್ ಮನಿ ಕಟ್ಟಿ ಕಾಣ್ಕಂಬ್ರ್… ಇದ್ ನೀವೆಲ್ಲಾ ಕೇಂಡ್ ಗಾದಿ ಅಲ್ದಾ ಹೇಳಿ ? ಒಂದ್ ಕಾಲ್ದಾಗ್ ಇಂಗ್ಲೀಸ್ರ್ ಬಂದ್ ಸಂಪತ್ತ್ ಎಲ್ಲಾ ಲೂಟಿ ಮಾಡ್ದ್ ಹಾಂಗೆ ಈ ನಾಗ್ರಿಕತಿ ಎಂಬ್ ಭೂತ್ ಬಂದ್ ಒಳ್ಳೆದ್ ಎಲ್ಲಾ ಹಾಳಾತ್ತಿತ್ತ್ ಮರ್ರೆ.…
ಕಾರ್ಕಳ: ಭಗವಂತನ ಸೇವೆಯೇ ಮುಕ್ತಿಯ ದಾರಿ. ದ್ವೇಷ ನಾಶ ಮಾಡುವುದೇ ನಿಜವಾದ ಭಕ್ತಿ. ಬದುಕು ಬಂಗಾರಗೊಳಿಸುವುದು ಸನಾತನ ಧರ್ಮ. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಮನುಷ್ಯನಾಗಿ ಬದುಕುವುದೇ ದೊಡ್ಡ ಧರ್ಮ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಅವರು ಹೇಳಿದರು. ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 16ರ ವರೆಗೆ ನಡೆಯಲಿರುವ ಶಿಲಾಮಯ ಗರ್ಭಗೃಹ, ಸುತ್ತು ಪೌಳಿಯ ನೂತನ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ, ಅಷ್ಟಬಂಧ, ಸಹಸ್ರಕಲಶಾಭಿಷೇಕ ಸಹಿತ ಬ್ರಹ್ಮಕಲಶ ಪುಣೊತ್ಸವ, ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಎ. 9 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಹೊಸ ದೇವಸ್ಥಾನ ನಿರ್ಮಾಣಕ್ಕಿಂತ ಹಳೆ ದೇವಸ್ಥಾನ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ. ಬ್ರಹ್ಮಕಲಶ ನೋಡುವುದು ಪುಣ್ಯ. ಮಾಡುವುದು ದೊಡ್ಡ ಪುಣ್ಯ ಎಂದರು.
ಶಿರೂರು: ಇಲ್ಲಿನ ಉತ್ಸವ ಸಮಿತಿ ಶಿರೂರು ಹಾಗೂ ಅರುಣ್ ಪಬ್ಲಿಸಿಟಿ ಶಿರೂರು ಇದರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿಯ ಸಾಂಸ್ಕ್ರತಿಕ ವೈಭವ “ಶಿರೂರು ಉತ್ಸವ 2015″ ಕಾರ್ಯಕ್ರಮ ಎಪ್ರಿಲ್ 17ರಿಂದ 19ರ ವರೆಗೆ ಶಿರೂರು ಪ.ಪೂ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಎಪ್ರಿಲ್ 17ರಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ಎಸ್.ಯಡ್ಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಂಕಿತಾ ನಾಯ್ಕ ಮತ್ತು ಸೌಜನ್ಯ ಬಿಲ್ಲವ ಮುಂಬಯಿ ಹಾಗೂ ಸ್ಥಳೀಯರಿಂದ ನಡೆಯಲಿದ್ದು ರಾತ್ರಿ 9 ಗಂಟೆಯಿಂದ ಸೋನಿ ಟಿವಿ ಪ್ರಶಸ್ತಿ ವಿಜೇತ ಭಾರ್ಗವಿ ಉಡುಪಿ ಇವರಿಂದ ಭಾವ-ಯೋಗ-ಗಾನ-ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 18ರಿಂದ ಬೆಳಿಗ್ಗೆ ಯೋಗ ಕಾರ್ಯಕ್ರಮ ನಡೆಯಲಿದೆ. ಜಾನುವಾರು ಪ್ರದರ್ಶನವನ್ನು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಉದ್ಘಾಟಿಸಲಿದ್ದಾರೆ. ಬೃಹತ್ ವಸ್ತು ಪ್ರದರ್ಶನ, ಕವಿಗೋಷ್ಟಿ ಹಾಗೂ ವಿಚಾರ…
ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎಪ್ರಿಲ್ 23ರಿಂದ 25ರವರೆಗೆ ಜರುಗಲಿದೆ. ಈ ಬಗ್ಗೆ ಅಷ್ಟಬಂಧ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಚರಣ ನಾವಡ ಮಾಹಿತಿ ನೀಡಿದರು. ಕುಂದಾಪುರದ ಅಧಿದೇವರಾದ ಶ್ರೀ ಕುಂದೇಶ್ವರನ ಪುನರ್ ಪ್ರತಿಷ್ಠಾ ಅಷ್ಠಬಂದ ಕಾರ್ಯಕ್ರಮವು 52 ವರ್ಷದ ಬಳಿಕ ಜ್ಯೋತಿಷಿ ವಿದ್ವಾನ್ ಹಾಲಾಡಿ ವಾಸುದೇವ ಜೋಯಿಸರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ಕುಮಾರ ಐತಾಳರ ಉಪಸ್ಥಿತಿಯಲ್ಲಿ ಜರುಗಲಿದೆ. ಎಪ್ರಿಲ್ 23ರಂದು ಅಷ್ಟಬಂಧ ಸಮ್ಮೇಲನದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳಾದ, ದೇವರ ಪ್ರಾರ್ಥನೆ, ಹೋಮಹವನ, ಜೀವ ಕುಂಭ ಸ್ಥಾಪನ, ಬಿಂಬ ಶುದ್ಧಿ ಮುಂತಾದವುಗಳು ಜರುಗಿದರೇ, ಎ.24ರಂದು ಕುಂದೇಶ್ವರ ದೇವರ ಪುನರ್ ಪ್ರತಿಷ್ಠಾ ಅಷ್ಠಬಂಧ ಸಮ್ಮೇಲನದ ಬಳಿಕ ಜೀವಕುಂಭಾಭಿಷೇಕ ಕಲಾವೃದ್ಧಿ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ರಾತ್ರಿ ಸಹಸ್ರ ಕಲಶ ಸ್ಥಾಪನ, ಅಧಿವಾಸ ಹೋಮ ಪೂಜೆ ಜರುಗಲಿದೆ. ಎ.25ರಂದು ಕಲಾಷಾಭಿಷೇಕ, ಮಹಾಪೂಜೆ, ಮಹಾ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ ಉತ್ಸವ, ಮತ್ರಾಕ್ಷತೆ ಪ್ರಸಾದ ವಿತರಣೆ…
ಕಮಲಶಿಲೆ: ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ. 10ರಂದು ಶ್ರೀ ಮನ್ಮಹಾರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ. ಎ. 7ರಂದು ಅಂಕುರಾರೋಪಣ, ಧ್ವಜಾರೋಹಣ, ಭೇರಿ ತಾಡನ, ಯಾಗಶಾಲೆ ಪ್ರವೇಶ, ಕೌತುಕ ಬಂಧನ, ಶಿಬಿತಾಯನೋತ್ಸವ. ಎ. 8ರಂದು ಸಿಂಹವಾಹನೋತ್ಸವ. ಎ. 9ರಂದು ಪುಷ್ಪಕ ವಾಹನೋತ್ಸವ. ಎ. 10ರಂದು ಶ್ರೀ ಮನ್ಮಹಾರಥೋತ್ಸವ. ಎ. 11ರಂದು ಚೂರ್ಣೋತ್ಸವ. ಎ. 12ರಂದು ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಪ್ರತಿ ದಿನವೂ ಊರ ಹಾಗೂ ಪರವೂರ ಭಕ್ತರಿಗೆ ಊಟ ಮತ್ತು ವಸತಿ ವ್ಯವಸ್ಥೆ ಇದ್ದು, ಜಾತ್ರೆ ಸಂದರ್ಭ ದಿನವೂ ಭಕ್ತರಿಗೆ ಸಿದ್ದಾಪುರದಿಂದ ಕ್ಷೇತ್ರಕ್ಕೆ ವಿಶೇಷ ಬಸ್ಸಿನ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಜಾತ್ರೆ ಮಹೋತ್ಸವದ ಎಲ್ಲ ದಿನಗಳಲ್ಲಿಯೂ ದೇವಳದಲ್ಲಿ ಸೀರೆಗಳ ಮಾರಾಟ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
ಕುಂದಾಪುರ: ಯೇಸುಕ್ರಿಸ್ತರು ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ದಿನವಾದ ಈಸ್ಟರ್ ಹಬ್ಬವನ್ನು ಭಾನುವಾರ ಉಡುಪಿ ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕತ್ತಲೆಯಲ್ಲಿ ಹೊಸದಾಗಿ ಬೆಂಕಿ ಉರಿಸಿ ಅದನ್ನು ಆಶಿರ್ವದಿಸಿ, ಪಾಸ್ಕಾ ಮೊಂಬತ್ತಿಯನ್ನು ಬೆಳಗಿಸಲ್ಪಟ್ಟು ಕುಂದಾಪುರ ರೊಜರಿ ಅಮ್ಮನವರ ಇಗರ್ಜಿಯಲ್ಲಿ ಪಾಸ್ಕ ಹಬ್ಬದ ವಿಧಿ ವಿಧಾನಗಳನ್ನು ನಡೆಸಲಾಯಿತು. ಈ ಧಾರ್ಮಿಕ ವಿಧಿಯಲ್ಲಿ ಕುಂದಾಪುರ ಇಗರ್ಜಿಯ ವ| ಧರ್ಮಗುರು ಅನೀಲ್ ಡಿಸೋಜಾ, ವ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ವ|ಧರ್ಮಗುರು ಪ್ರಕಾಶ್ ಪಾವ್ಲ್ ಡಿಸೋಜಾ, ಸಹಭಾಗಿಯಾಗಿದ್ದರು. ಅಥಿತಿ ವ|ಧರ್ಮಗುರು ಐವನ್ಡಿಸೋಜಾ ಪ್ರವಚನ ನೀಡಿದರು, ಈ ಪ್ರಾರ್ಥನ ವಿಧಿಯಲ್ಲಿ ಸಹಸ್ರಾರು ಭಕ್ತರು ಪ್ರಾರ್ಥನಾ ವಿಧಿಯಲ್ಲಿ ಪಾಲ್ಘೊಂಡರು. -ಚಿತ್ರ ಬರ್ನಾಡ್ ಡಿಕೋಸ್ತಾ
ಬೈಂದೂರು: ಕೊಂಕಣಿ ಭಾಷಾ ರಂಗ ಸಾಧಕರನ್ನು ಗೌರವಿಸಿ ತನ್ಮೂಲಕ ಕೊಂಕಣಿ ರಂಗ ಭೂಮಿ ಚಟುವಟಿಕೆಯನ್ನು ಹುರಿದುಂಬಿಸುವ ಉದ್ದೇಶಕ್ಕಾಗಿ ಉಪ್ಪುಂದದ ರಂಗತರಂಗ ಸಂಸ್ಥೆ ಆರಂಬಿಸಿರುವ ’ಕೊಂಕಣಿ ರಂಗರತ್ನ ಪ್ರಶಸ್ತಿ’ಗೆ ರಾಜ್ಯದ 9 ಕಲಾವಿದರನ್ನು ಆಯ್ಕೆಮಾಡಲಾಗಿದ್ದು ಏಪ್ರಿಲ್ 10, 11 ಹಾಗೂ 12ರಂದು ಕಂಬದಕೋಣೆ ನಿರ್ಮಲಾ ಸಭಾ ಭವನದಲ್ಲಿ ಜರಗುವ ಕೊಂಕಣಿ ರಂಗೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆಯುವ ಈ ಉತ್ಸವವನ್ನು ಏ 10 ರಂದು ಸಂಜೆ 5:30ಕ್ಕೆ ಮಾನ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದು ಶಾಸಕ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದು ಕೊಂಕಣಿ ಭಾಷೆಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ನೀಡಲಾಗುವ ಈ ಗೌರವಕ್ಕೆ ರಂಗನಟ ನಿರ್ದೇಶಕ ಸತೀಶ್ ಬಾಲಕೃಷ್ಣ ಪೈ ಕುಂದಾಪುರ, ಯಕ್ಷಗಾನ ಕಲಾವಿದೆ ಕಿರಣ ಪೈ, ಹಾಸ್ಯ ಸಾಹಿತಿ ಸಂಧ್ಯಾ ಶೆಣೈ, ಸಂಗೀತ ಹಾಗೂ ರಂಗಭೂಮಿ ನಿರ್ದೇಶಕ ಶ್ರೀನಿವಾಸ ಪ್ರಭು ಉಪ್ಪುಂದ, ನಿರ್ದೇಶಕ ರಂಗ…
ಕುಂದಾಪುರ: ತಾಲೂಕಿನ ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೋಷನಿಧಾಮ ಕೊರಗ ಕಾಲನಿಯಲ್ಲಿರುವ ಮನೆಯೊಂದರ ಮೇಲೆ ತೆಂಗಿನ ಮರವು ಶನಿವಾರ ಮಧ್ಯಾಹ್ನ ಉರುಳಿ ಬಿದ್ದಿದೆ. ಘಟನೆ ನಡೆದು ಮೂರು ದಿನ ಕಳೆದರೂ ಮರ ತೆರವುಗೊಳಿಸದಿರುವುದು ಜಿಡ್ಡು ಹಿಡಿದ ವ್ಯವಸ್ಥೆಯ ದರ್ಶನ ಮಾಡಿಸಿದಂತಿದೆ. ಮರ ಬಿದ್ದು ಮನೆ ಮೇಲ್ಮಾಡು ಹಾನಿಯಾಗಿದ್ದು, ಹೆಂಚು, ರೀಪುಗಳು ಪುಡಿಯಾಗಿದೆ. ಹಳೆಯ ಮನೆಯಾದ್ದರಿಂದ ಕಾರಣ ಯಾವುದೇ ಸಮಯದಲ್ಲೂ ಮರದ ಭಾಗಕ್ಕೆ ಗೋಡೆಯೂ ಕುಸಿಯುವ ಭೀತಿಯಿಂದ ಸ್ಥಳೀಯ ಕೊರಗ ನಿವಾಸಿ ಬದುಕುವಂತಾಗಿದೆ. ಈ ನಡುವೆ ಪಂಚಾಯತ್, ಮರ ಕಡಿಯುವವರು ಸಿಗದ ಕಾರಣ ಇಂದು (ಮಂಗಳವಾರ) ತೆರವು ಗೊಳಿಸುವ ಭರವಸೆಯನ್ನು ನೀಡಿದೆ. 07-04-2015
