Author: Editor Desk

ಅರುಣಿಮಾ ಅನ್ನೋ ಅದ್ಭುತ ಹುಡುಗಿಯ ಕುರಿತು… ಹಿಮಾಲಯವೆ೦ದ ತಕ್ಷಣ ನಮ್ಮ ನೆನೆಪಿಗೆ ಬರುವುದು ಪಶ್ಚಿಮದಲ್ಲಿ ಸಿ೦ಧೂ ನದಿ ಕಣಿವೆಯಿ೦ದ ಪೂರ್ವದಲ್ಲಿ ಬ್ರಹ್ಮಪುತ್ರ ನದಿ ದ೦ಡೆಯವರೆಗೆ ಬರೋಬ್ಬರಿ ೨೪೦೦ ಕಿಲೋಮೀಟರುಗಳಷ್ಟು ಉದ್ದಕ್ಕೂ ಹಿಮದ ರಾಶಿಯನ್ನೇ ಹೊದ್ದುಕೊ೦ಡು ಮಲಗಿದ೦ತೆ ಕಾಣುವ ಸೌ೦ದರ‍್ಯದ ಖನಿಯ೦ತಿರುವ ಭವ್ಯ ಹಿಮಾಲಯ ಪರ್ವತ ಸಾಲುಗಳು. ಜಗತ್ತಿನ ಅತ್ಯ೦ತ ಎತ್ತರದ ಹದಿನಾಲ್ಕು ಪರ್ವತ ಶಿಖರಗಳ ಪೈಕಿ ಹತ್ತು ಶಿಖರಗಳು ಈ ಹಿಮಾಲಯದಲ್ಲೇ ಇವೆ. ಇದು ಹತ್ತು ಸಾವಿರಕ್ಕೂ ಅಧಿಕ ಹಿಮನದಿಗಳ ಉಗಮಸ್ಥಾನವೂ ಹೌದು. ನಮಗೆಲ್ಲಾ ತಿಳಿದಿರುವ ಹಾಗೆ ಸುಮಾರು 60 ಮಿಲಿಯನ್ ವರುಷಗಳ ಹಿ೦ದೆ ರೂಪುಗೊ೦ಡಿರುವ ಈ ಹಿಮಾಲಯ ಶ್ರೇಣಿಯಲ್ಲೇ ಜಗತ್ತಿನ ಅತೀ ಎತ್ತರದ ಪರ್ವತ ಮೌ೦ಟ್ ಎವೆರೆಸ್ಟ್ ಇರುವ೦ತಾದ್ದು. ದಕ್ಷಿಣಕ್ಕೆ ನೇಪಾಳ ಹಾಗು ಉತ್ತರದಲ್ಲಿ ಟಿಬೆಟ್ ಗಡಿಯನ್ನು ಹೊ೦ದಿರುವ ಈ ಪರ್ವತದ ಎತ್ತರ 29,035 ಅಡಿಗಳು (8848ಮೀಟರ್). ಟಿಬೆಟ್‌ನ ಜನತೆ ಇದನ್ನು ಸಾಗರ ಮಾತೆ ಎ೦ದು ಕರೆದರೆ ನೇಪಾಳಿಗರಿಗೆ ಇದು ಆಕಾಶರಾಜ. ನಿಜ.ಈ ಹೊತ್ತಿಗೂ ಪರ್ವತಾರೋಹಿಗಳಿಗೆ ಮೌ೦ಟ್ ಎವೆರೆಸ್ಟ್‌ನ್ನು ಏರುವುದೆ೦ದರೆ…

Read More

ಕುಂದಾಪುರ: ಅಂಧತ್ವ ಎನ್ನುವುದು ಶಾಪವಲ್ಲ. ಮನಸ್ಸು ಮಾಡಿದರೆ ಒಳಗಣ್ಣಿನಿಂದಲೇ ಪ್ರಪಂಚವನ್ನೇ ಗೆಲ್ಲಬಹುದು ಎಂಬುದಕ್ಕೆ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಅಂಧ ವಿದ್ಯಾರ್ಥಿ ವಿಖ್ಯಾತ ಎಸ್. ಶೆಟ್ಟಿ ಒಂದು ಉತ್ತಮ ನಿದರ್ಶನ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಈ ಭಾರಿ ದ್ವಿತೀಯ ಪಿಯುಸಿ ಪೂರೈಸಿರುವ, ಕುಂದಾಪುರ ತಾಲೂಕಿನ ಉಪ್ಪುಂದ ಗ್ರಾಮದ ಅಂಧ ವಿದ್ಯಾರ್ಥಿ ವಿಖ್ಯಾತ ಎಸ್. ಶೆಟ್ಟಿ ಕಲಾ ವಿಭಾಗದಲ್ಲಿ ಶೇ. 92.33 ಅಂಕ (ಇಂಗ್ಲೀಷ್ 89, ಕನ್ನಡ 95, ಸಮಾಜಶಾಸ್ತ್ರ 90, ಇತಿಹಾಸ 96, ಅರ್ಥಶಾಸ್ತ್ರ 91, ರಾಜ್ಯಶಾಸ್ತ್ರ 93 ಒಟ್ಟು 554 ಅಂಕ)ಪಡೆಯುವುದರ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ. ಬಾಲ್ಯದಲ್ಲಿಯೇ ಚುರುಕಿನ ಸ್ವಭಾವದವನಾಗಿದ್ದ ವಿಖ್ಯಾತ, ಅಂಧತ್ವವೆನ್ನುವುದು ನ್ಯೂನ್ಯತೆ ಎಂದು ತಿಳಿಯದೇ ಕಲಿಕೆಯಲ್ಲಿ ಸದಾ ಮುಂದಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 96.6 ಅಂಕ ಪಡೆದಿದ್ದರು. ಈತನ ಪ್ರತಿಭೆಯನ್ನು ಗುರುತಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿಗೆ ದಾಖಲಿಸಲಾಗಿತ್ತು. ತರಗತಿಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನೇ ಕೇಳುತ್ತಿದ್ದ ವಿಖ್ಯಾತ್, ಅಂದಿನ ಪಾಠಗಳನ್ನು ಬ್ರೈಲ್ ಬರಹದ ಮೂಲಕ ಬರೆದು ಅಭ್ಯಾಸ…

Read More

ಕುಂದಾಪುರ: ದೇಶದಲ್ಲಿ ಮೋದಿ ನೇತ್ರತ್ವದ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಂiiನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದು ಕೇಂದ್ರ ಸರಕಾರ ಅನುದಾನ ನೇರವಾಗಿ ಗ್ರಾ.ಪಂಗಳಿಗೆ ತಲುಪಿಸಲು ಹೆಚ್ಚಿನ ಒತ್ತು ನೀಡಿ ಪಂಚಾಯತ್ ಗೆ ಶಕ್ತಿ ತುಂಬುತ್ತಿದೆ. ದೇಶದಲ್ಲಿ ಅಪೂರ್ಣವಾಗಿ ಉಳಿದಿರುವ ರೈಲ್ವೆ, ನೀರಾವರಿ ಹಾಗೂ ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ತಂದಿದ್ದರೆ. ಕಾಂಗ್ರೆಸ್ ಅದು ರೈತ ವಿರೋಧಿ ಎಂದು ಹುಯಿಲೆಬ್ಬಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ಎಸ್ ಯಡಿಯೂರಪ್ಪ ಆರೋಪಿಸಿದರು. ಇಲ್ಲಿಗೆ ಸಮೀಪದ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕ್ಷೇತ್ರ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದಿನ ಯುಪಿಐ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿದ್ದ ಹಣಕಾಸು ವ್ಯವಸ್ಥೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೇತ್ರತ್ವದಲ್ಲಿ ಸರಿದಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ದಿನಗಳಲ್ಲಿ ನೀಡಿದ್ದ ಜನಪರ ಕಾರ್ಯಗಳನ್ನು ಇಂದಿನ ಕಾಂಗ್ರೆಸ್ ಸರ್ಕಾರ…

Read More

ಬೈಂದೂರು: ಭಟ್ಕಳದಿಂದ ಮಂಗಳೂರು ಕಡೆಗೆ ಸ್ಕಾರ್ಪಿಯೋ ವಾಹನವೊಂದರಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವೇಳೆ ಬೈಂದೂರು ಸಮೀಪದ ನಂದನವನ ಕ್ರಾಸ್ ಬಳಿ ತಡೆಗಟ್ಟಿದಾಗ ಆರೋಪಿಗಳು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ವರದಿಯಾಗಿದೆ. ಘಟನೆಯ ವಿವರ ಭಟ್ಕಳದಿಂದ 9 ದನಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಮಂಗಳೂರು ಕಡೆಗೆ ಹೊರಟಿದ್ದ ಸ್ಕಾರ್ಪಿಯೋ ವಾಹನವನ್ನು ಶಿರೂರು ಚೆಕ್ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯು ಅಡ್ಡಗಟ್ಟಿಗಟ್ಟಿದಾಗ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಬಂದುದರಿಂದ ಸಂಶಯಗೊಂಡ ಪೊಲೀಸ್ ಸಿಬ್ಬಂದಿಯು ಕೂಡಲೇ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ವಾಹನವನ್ನು ಬೈಂದೂರು ಸಮೀಪದ ನಂದನವನದ ಬಳಿ ಅಡ್ಡಗಟ್ಟಿದಾಗ ಆರೋಪಿಗಳು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ವಾಹನವನ್ನು ಪರಿಶೀಲಿಸಿದಾಗ 9 ದನಗಳಲ್ಲಿ 5 ದನಗಳು ಮೃತಪಟ್ಟು, ಉಳಿದ 3 ದನಗಳು ಪೊಲೀಸರ ವಶಕ್ಕೆ ಸಿಕ್ಕಿದ್ದರೇ, ಒಂದು ದನ ಓಡಿಹೋಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಹನವನ್ನು ಪರಿಶೀಲಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Read More

ಗ೦ಗೊಳ್ಳಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಶೇಕಡ 96.7ರಷ್ಟು ಫಲಿತಾ೦ಶವನ್ನು ದಾಖಲಿಸುವುದರ ಮೂಲಕ ಉತ್ತಮ ಸಾಧನೆ ಮಾಡಿದೆ. ಕಾಲೇಜಿನ ವಿಜ್ಞಾನ ವಿಭಾಗ 91%  ವಾಣಿಜ್ಯ ವಿಭಾಗ 99.3% ಮತ್ತು ಕಲಾ ವಿಭಾಗ 94.4% ಫಲಿತಾ೦ಶವನ್ನು ಪಡೆದಿದೆ. ಪರೀಕ್ಷೆಗೆ ಕುಳಿತ 203 ವಿದ್ಯಾರ್ಥಿಗಳಲ್ಲಿ  26 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು 132ವಿದ್ಯಾರ್ಥಿಗಳು ಪ್ರಥಮ,30 ವಿದ್ಯಾರ್ಥಿಗಳು ದ್ವಿತೀಯ ಹಾಗು 5 ವಿದ್ಯಾರ್ಥಿಗಳು  ತೃತೀಯ ದರ್ಜೆಯಲ್ಲಿ ಉತ್ತೀಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸುನೀತಾ ಪೂಜಾರಿ 573, ವಿಜ್ಞಾನ ವಿಭಾಗದಲ್ಲಿ ರಾಹುಲ್ ಆರ್ ಶಾನುಭಾಗ್ 571, ಕಲಾ ವಿಭಾಗದಲ್ಲಿ ಶ್ರುತಿ 435 ಅ೦ಕಗಳೊ೦ದಿಗೆ ಅಗ್ರ ಸ್ಥಾನ ಗಳಿಸಿದ್ದಾರೆ. ಉತ್ತಮ ಫಲಿತಾ೦ಶ ಸಾಧಿಸಲು  ನೆರವಾದ ಎಲ್ಲರನ್ನೂ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಮತ್ತು  ಕಾಲೇಜಿನ ಆಡಳಿತ ಮ೦ಡಳಿ ಅಭಿನ೦ದಿಸಿದ್ದಾರೆ. ಪಿ. ಯು. ಸಿ. ಸಾಧಕರು ವಾಣಿಜ್ಯ ವಿಭಾಗ ೧. ಅಭಿಷೇಕ್ ಗಾಣಿಗ – 539 ೨. ಗಿರೀಶ ಶೆಟ್ಟಿ -524 ೩. ಕಿಶನ್ ಪೂಜಾರಿ…

Read More

ಪಿಯುಸಿಯಲ್ಲಿ ಸತತ 7ನೇ ಭಾರಿಗೆ, ಐಸಿ‌ಎಸ್‌ಇ ನಲ್ಲಿ ಸತತ 8ನೇ ಭಾರಿಗೆ ಶೇ.100 ಫಲಿತಾಂಶ ದಾಖಲು  ಬೈಂದೂರು: ಇಲ್ಲಿನ ಗ್ರೀನ್‌ವ್ಯಾಲಿ ನ್ಯಾಷನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸತತ ಏಳನೆ ಬಾರಿಗೆ ಶೇ. 100 ಫಲಿತಾಂಶವನ್ನು ದಾಖಲಿಸಿದೆ. ಒಟ್ಟು 70 ವಿದ್ಯಾರ್ಥಿಗಳಲ್ಲಿ 67 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಫೈಕಾ ಕೋಲ್ಕರ್ 563 (ಶೇ. 94) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥ್ಥಾನ ಗಳಿಸಿದ್ದಾರೆ. ಸಹನಾ 557 (ಶೇ. 93) ಅಂಕಗಳನ್ನು ಪಡೆದಿದ್ದರೆ, ಸುಹಾ 549 (ಶೇ. 92) ಅಂಕಗಳೊಂದಿಗೆ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ರುಕ್ನುದ್ದೀನ್ ಹುಸೈನ್ 548 (ಶೇ. 91) ಅಂಕ ಮತ್ತು ಫೈಝಾ ಬೇಗಂ 545 (ಶೇ. 90.83) ಅಂಕಗಳನ್ನು, ಜಾಸ್ಮಿನ್ ಮೊಮಿನ್ ಮತ್ತು ಟಿ. ಮುಹಮ್ಮದ್ ಸಲೀಂ 542 (ಶೇ. 90) ಅಂಕಗಳನ್ನು ಗಳಿಸಿದ್ದಾರೆ.…

Read More