ನವದೆಹಲಿ: ಬಿಎಸ್ಎನ್ಎಲ್ ಲ್ಯಾಂಡ್ಲೈನ್ ಗ್ರಾಹಕರಿಗೆ ಗುಡ್ನ್ಯೂಸ್. ಮೇ 1 ರಿಂದ ನೀವು ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆಯ ವರೆಗೆ ದೇಶದ ಯಾವುದೇ ಮೂಲೆಯಲ್ಲಿರುವ ಲ್ಯಾಂಡ್ಲೈನ್, ಯಾವುದೇ ಕಂಪೆನಿಯ ಮೊಬೈಲ್ ನೆಟ್ವರ್ಕ್ಗೆ ಉಚಿತವಾಗಿ ಕರೆ ಮಾಡಬಹುದು. ಹೌದು. ಬಿಎಸ್ಎನ್ಎಲ್ ಲ್ಯಾಂಡ್ಲೈನ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಹೊಸ ಆಫರ್ ಬಿಡುಗಡೆ ಮಾಡಲಿದೆ. ಈ ಅವಧಿಯಲ್ಲಿ ಲ್ಯಾಂಡ್ ಲೈನ್ನಿಂದ ಹೊರ ಹೋಗುವ ಯಾವುದೇ ಸ್ಥಳೀಯ, ಹೊರ ರಾಜ್ಯದ ಕರೆಗಳಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ. ಬಿಎಸ್ಎನ್ಎಲ್ನ ಹಿರಿಯ ಜನರಲ್ ಮ್ಯಾನೇಜರ್ ಒಬ್ಬರು ಮೇ.1ರಿಂದ ಈ ಆಫರ್ ಜಾರಿಯಾಗಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೇ.1ರಿಂದ ಜಾರಿಗೆ ಬರುವ ಹೊಸ ಆಫರ್ ಎಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Author: Editor Desk
ಆಂಡ್ರಾಯ್ಡ್ ಸ್ಮಾರ್ಟ್ಫೋನ್ಲ್ಲಿ ವಾಟ್ಸಾಪ್ ಬಳಸುತ್ತಿರುವ ಬಳಕೆದಾರರಿಗೆ ಗುಡ್ನ್ಯೂಸ್. ಇನ್ನು ಮುಂಚಿನ ನೀವು ವಾಟ್ಸಾಪ್ ಸ್ನೇಹಿತರಿಗೆ ವಾಟ್ಸಾಪ್ನಿಂದಲೇ ಕರೆ ಮಾಡಬಹುದು. ವಾಟ್ಸಾಪ್ ತನ್ನ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಏಪ್ರಿಲ್ 1ರಿಂದ ಕರೆ ಸೌಲಭ್ಯವನ್ನು ನೀಡಿದೆ. ಕರೆ ಮಾಡಲು ಗೂಗಲ್ ಪ್ಲೇಸ್ಟೋರ್ಗೆ ಹೋಗಿ ಹೊಸದಾಗಿ ಬಿಡುಗಡೆಯಾಗಿರುವ ವಾಟ್ಸಪ್ ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಪ್ಲೇ ಸ್ಟೋರ್ ನಿಂದ ಅಪ್ ಡೇಟ್ ಆಗದಿದ್ದರೆ ವೆಬ್ಸೈಟ್ನಿಂದಲೇ ನೇರವಾಗಿ ಆಪ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಂಡು ಕರೆ ಮಾಡಬಹುದು. ಒಂದು ನಿಮಿಷದ ವಾಟ್ಸಾಪ್ ಕರೆಗೆ 3ಜಿ ಯಲ್ಲಿ 0.15 ಎಂಬಿ ಯಿಂದ 0.2ಎಂಬಿ ಖರ್ಚಾಗುತ್ತದೆ. ಹೀಗಾಗಿ 3ಜಿ ಇಂಟರ್ನೆಟ್ ಪ್ಯಾಕ್ನಲ್ಲಿ 1 ಎಂಬಿ ಒಳಗಡೆ 5 ನಿಮಿಷದ ಕರೆ ಮಾಡಬಹುದು. 2ಜಿ ಇಂಟರ್ನೆಟ್ನಲ್ಲೂ ನೀವು ಕರೆ ಮಾಡಬಹುದು. ಆದರೆ 3ಜಿಯಷ್ಟು ಸುಲಲಿತವಾಗಿ ಕರೆ ಮಾಡಲು ಸಾಧ್ಯವಿಲ್ಲ. ವಿಶೇಷ ಏನೆಂದರೆ 3ಜಿಗಿಂತಲೂ 2ಜಿ ಯಲ್ಲಿ ಹೆಚ್ಚಿನ ಎಂಬಿ ಖರ್ಚಾಗುತ್ತದೆ. 1 ನಿಮಿಷದ ಕರೆ ಮಾಡಲು 2ಜಿಯಲ್ಲಿ 0.35 ಎಂಬಿ…
ವಾಟ್ಸಾಪ್ ಬಳಕೆದಾರರಿಗೊಂದು ಶುಭಸುದ್ದಿ. ಇನ್ನುಮುಂದೆ ವಾಟ್ಸಾಪ್ನ್ನು ಡೆಸ್ಕ್ ಟಾಪ್ /ಲ್ಯಾಪ್ಟಾಪ್ನಲ್ಲಿ ಕ್ರೋಮ್ ಬ್ರೌಸರ್ ಮೂಲಕ ಬಳಸಬಹುದು. ಹೌದು ವಾಟ್ಸಾಪ್ ಇಂದಿನಿಂದ ಹೊಸ ಸೇವೆ ಆರಂಭಿಸಿದ್ದು ಡೆಸ್ಕ್ ಡಾಪ್ ಬ್ರೌಸರ್ ಮೂಲಕವೇ ಸಂದೇಶ ಕಳುಹಿಸಬಹುದು. ಹೊಸ ಸೇವೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ವಾಟ್ಸಾಪ್ ಹೊಸ ಆವೃತ್ತಿಯ ಹೊಂದಿರುವ ಆಂಡ್ರಾಯ್ಡ್,ಬ್ಲ್ಯಾಕ್ಬೆರ್ರಿ, ವಿಂಡೋಸ್ ಓಸ್ ಬಳಕೆದಾರರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಐಫೋನ್ ಗ್ರಾಹಕರು ಹೊಸ ಸೇವೆಯಿಂದ ವಂಚಿತರಾಗಲಿದ್ದಾರೆ. ಅಷ್ಟೇ ಅಲ್ಲದೇ ಕೆಲ ಅದೃಷ್ಟಶಾಲಿಗಳಿಗಷ್ಟೇ ಈ ಆಪ್ನ್ನು ಬಳಸುವ ಅವಕಾಶ ಸಿಗಲಿದೆ ಎಂದು ವಾಟ್ಸಾಪ್ ಹೇಳಿದೆ. ನಿಮ್ಮ ಕಂಪ್ಯೂಟರ್ನಲ್ಲಿ ಕ್ರೋಮ್ ಬ್ರೌಸರ್ ಓಪನ್ ಮಾಡಿ web.whatsapp.com ಹೋಗಿ. ಬಳಿಕ ಸ್ಮಾರ್ಟ್ಫೋನ್ ಮೂಲಕ ವಾಟ್ಸಾಪ್ ಮೆನುವಿಗೆ ಹೋಗಿ ವಾಟ್ಸಾಪ್ ವೆಬ್ ಆಯ್ಕೆಯನ್ನು ಆರಿಸಿಕೊಳ್ಳಿ. ನಂತರ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ವೆಬ್ ಮತ್ತು ವಾಟ್ಸಾಪ್ನ್ನು ಪೇರ್ ಮಾಡುವ ಮೂಲಕ ಬಳಸಬಹುದು.
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಆಕ್ಷೇಪಾರ್ಹ ಕಾಮೆಂಟ್ಗಳನ್ನು ಹಾಕಿದರೆ ಅವರು ಶಿಕ್ಷಾರ್ಹ ಅಪಾರಾಧ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ತಿಳಿಸಿದೆ. ಆಕ್ಷೇಪಾರ್ಹ ಕಾಮೆಂಟ್ ಹಾಕಿದ ಮಾತ್ರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆ ಆಗಿದೆ ಎಂದು ಪರಿಗಣಿಸುವುದಿಲ್ಲ. ಹೀಗಾಗಿ ಆಕ್ಷೇಪಾರ್ಹ ಕಾಮೆಂಟ್ಗಳನ್ನು ದಾಖಲಿಸಿದರನ್ನು ಐಟಿ ಕಾಯ್ದೆಯಡಿ ಬಂಧಿಸುವುದಿಲ್ಲ ಎಂದು ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿದೆ. ಮಾಹಿತಿ ತಂತ್ರಜ್ಞಾನದ 66ಎ ಕಾಯ್ದೆಯ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸುವುದು ಅಪರಾಧ. ಅವರನ್ನು ಬಂಧಿಸುವ ಅವಕಾಶವಿತ್ತು. ಈ ಕಾಯ್ದೆಯ ಪ್ರಕಾರ ದೇಶದಲ್ಲಿ ಹಲವು ಮಂದಿಯನ್ನು ಬಂಧಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ವ್ಯಾಪಕವಾಗಿ ಟೀಕಿಸಿದ್ದರು. ಸಂವಿಧಾನದ ಕಲಂ 19(1)ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎಯಿಂದ ಯಾವುದೇ ರೀತಿ ಧಕ್ಕೆ ಆಗದು. ಕಲಂ 19 (1) ಅಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಕೆಲ ನಿರ್ಬಂಧಗಳನ್ನೂ ವಿಧಿಸಲಾಗಿದೆ ಎಂದು ಸಂಪರ್ಕ…
ಶಿರೂರಿಗೆ ಹರಿದು ಬಂದ ಸಚಿವರ ದಂಡು, ಆದರ್ಶಗ್ರಾಮ ಯೋಜನೆಯಡಿಯಲ್ಲಿ ಊರಿನ ಅಭಿವೃದ್ಧಿ ಬೈಂದೂರು: ಯಾವುದೇ ಊರಿನ ಅಭಿವೃದ್ಧಿಯಾಗಬೇಕಾದರೂ ಖಾಸಗಿ ವ್ಯಕ್ತಿಗಳ ಸಹಭಾಗಿತ್ವ ಅಗತ್ಯವಾದದು. ಸರಕಾರದೊಂದಿಗೆ ಖಾಸಗಿ ವ್ಯಕ್ತಿಗಳು ಕೈಜೋಡಿಸಿದಾಗಲೇ ಸಾಮಾಜಿಕ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ಸರಕಾರದ ಪಶಸಂಗೋಪನಾ ಸಚಿವ ಟಿ. ಬಿ. ಜಯಚಂದ್ರ ಹೇಳಿದರು. ಅವರು ಶಿರೂರು ಉತ್ಸವ 2015ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಶಿರೂರಿನ ಅರ್ಹ ಫಲಾನುಭವಿಗಳಿಗೆ ಜಾನುವಾರುಗಳನ್ನು ದಾನ ನೀಡಿ ಮಾತನಾಡಿದರು. ಹಿಂದೂ ಧರ್ಮದಲ್ಲಿ ಗೋದಾನ ಶ್ರೇಷ್ಠವಾದದ್ದು. ಊರಿನ ಉದ್ಯಮಿಯೊಬ್ಬರು ಬಡವರ ಜೀವನ ನಿರ್ವಹಣೆಗಾಗಿ ಗೋವುಗಳನ್ನು ನೀಡುತ್ತಿರುವ ಕಾರ್ಯ ಶ್ಲಾಘನೀಯ. ಮಂದಿನ ದಿನಗಳಲ್ಲಿ ಗೋವುಗಳ ಚಿಕಿತ್ಸೆಗಾಗಿ ಬಹುಕಾಲದ ಬೇಡಿಕೆಯಾದ ಪಶುಆಸ್ಪತ್ರೆಯನ್ನು ನೀಡುವುದಾಗಿ ಅವರು ಭರವಸೆ ನೀಡಿದ ಅವರು ದೇವಸ್ಥಾನಗಳನ್ನು ಕಟ್ಟುವುದರಿಂದ ನಮಗೆ ದೇವರು ಹತ್ತಿರವಾಗುವುದಿಲ್ಲ ಬದಲಿಗೆ ಸಮಾಜದ ಕಟ್ಟಕಡೆಯ ಜನರಿಗೆ ಸಹಾಯ ಮಾಡುವ ಮೂಲಕ ದೇವರು ಹತ್ತಿರವಾಗುತ್ತಾನೆ ಎಂದರು. ಈ ಭಾಗದಲ್ಲಿ ಪ್ರಾಯೋಗಿಕವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸಮಾರಂಭದಲ್ಲಿ ಅತಿಥಿಯಾಗಿದ್ದ ಕರ್ನಾಟಕ ಸರಕಾರದ ಪಂಚಾಯತ್…
ಬೈಂದೂರು: ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಶಿರೂರು ಗ್ರಾಮವನ್ನು ದತ್ತು ತೆಗೆದುಕೊಂಡು ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸತತವಾಗಿ ಕೆಲಸ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಸಭಾಂಗಣದಲ್ಲಿ ಸಂಸದರ ಆದರ್ಶಗ್ರಾಮ ಯೋಜನೆಯಡಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಸಂಬಂಧ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪ್ರಧಾನಮಂತ್ರಿಗಳ ಆದರ್ಶಗ್ರಾಮ ಯೋಜನೆಯಂತೆ ಉಡುಪಿ ಜಿಲ್ಲೆಯ ತುದಿಯಲ್ಲಿರುವ ಗ್ರಾಮವಾದ ಶಿರೂರನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಗ್ರಾಮದಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು, ಆಸ್ಪತ್ರೆಯ ಅಭಿವೃದ್ಧಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಶಿರ್ಘ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಖಾಸಗಿ ಕ್ಷೇತ್ರದ ವ್ಯಕ್ತಿಗಳು ಊರಿನ ಏಳಿಗೆಗೆ ಪಣತೊಟ್ಟಿರುವುದರಿಂದ ಈ ಭಾಗದ ಜನಪ್ರತಿನಿಧಿಗಳೂ ಕೈಜೋಡಿಸಿ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದರು. ಬಳಿಕ ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಮಾತನಾಡಿ ಸಂದಸರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ 32ಲಕ್ಷ ವೆಚ್ಚದ ಸೇತುವೆ, 10ಲಕ್ಷ ವೆಚ್ಚದ ಪೇಟೆ…
ಬೈಂದೂರು: ಉತ್ಸವ ಸಮಿತಿ ಶಿರೂರು,ಅರುಣ ಪಬ್ಲಿಸಿಟಿ ಶಿರೂರು ಇದರ ಆಶ್ರಯದಲ್ಲಿ ನಡೆಯುತ್ತಿರುವ ಅದ್ದೂರಿಯ ಸಾಂಸ್ಕ್ರತಿಕ ವೈಭವ ಶಿರೂರು ಉತ್ಸವ 2015 ಕಾರ್ಯಕ್ರಮ ಶಿರೂರು ಕಾಲೇಜು ಮೈದಾನದ ಕೀರ್ತಿ ಶೇಷ ವಿ.ಐ ಶೆಟ್ಟಿ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಮಾತನಾಡಿ ಸರಕಾರೇತರ ಸಂಘಟನೆಯೊಂದು ಸಾರ್ವಜನಿಕ ಸಡಗರದಲ್ಲಿ ನಡೆಸಿದ ಈ ಕಾರ್ಯಕ್ರಮ ಇತರ ಕಾರ್ಯಕ್ರಮಗಳಿಗೆ ಮಾದರಿಯಾಗಿದೆ.ಗ್ರಾಮೀಣ ಭಾಗದ ಸಾಂಸ್ಕ್ರತಿಕ ಆಸಕ್ತಿ ಮತ್ತು ಸಂಘಟನೆ ಸಾಮರ್ಥ್ಯ ಶ್ಲಾಘನೀಯವಾಗಿದೆ.ಕೇವಲ ಸರಕಾರದಿಂದ ಅಭಿವೃದ್ದಿಯ ನಿರೀಕ್ಷೆಗಿಂತ ಊರಿನ ಕಾಳಜಿಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಅಪೇಕ್ಷಿಸುವ ಉತ್ಸವದ ಮೂಲಕ ರಾಜ್ಯಮಟ್ಟದಲ್ಲಿ ಉತ್ತಮ ಸಂದೇಶ ನೀಡಿದಂತಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಕೆ.ಲಕ್ಷ್ಮಿನಾರಾಯಣ ಮಾತನಾಡಿ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಊರಿನ ಅಭಿವೃದ್ದಿಗೆ ಪ್ರಯತ್ನಿಸುತ್ತಿರುವ ಶಿರೂರಿನ ಸಾಧನೆ ಅನನ್ಯವಾಗಿದೆ.ಇಂತಹ ಕಾರ್ಯಕ್ರಮಗಳು ಇತರ ಊರುಗಳಿಗೆ ಪ್ರೇರಣೆ ಅತ್ಯಂತ ವಿಭಿನ್ನ ಕಾರ್ಯಕ್ರಮ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಕೀರ್ತಿ ಮುಕುಟವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ,ಆರ್.ವಿ.ಶೆಟ್ಟಿ…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಆಡು ಮುಟ್ಟದ ಸೊಪ್ಪಲ್ಲ ರೂಪಕಲಾ ಕುಂದಾಪುರ ತಂಡದ ನಾಟಕ ನೋಡದ ಕಲಾ ಪ್ರೇಮಿಗಳಿಲ್ಲ ಎಂದರೆ ಅತಿಶಯೋಕ್ತಿಯಾಗದು. ‘ಮೂರು ಮುತ್ತು’ ನಾಟಕವನ್ನು ಯಾರು ನೋಡಿಲ್ಲ ಹೇಳಿ. ಪ್ರೇಕ್ಷಕರನ್ನು ಹಾಸ್ಯದ ಕಡಲಲ್ಲಿ ತೇಲಿಸುವ ಕುಂದಾಪುರ ರೂಪಕಲಾ ತಂಡದವರ ಸುಪ್ರಸಿದ್ಧ ನಾಟಕವಿದು. ಸಹಜ ಅಭಿನಯ, ಹೊಸ ಪ್ರಯೋಗದ ಮೂಲಕ ವರ್ಷಾನುಗಟ್ಟಲೆ ಪ್ರೇಕ್ಷಕನ ಮನವನ್ನು ಗೆದ್ದು ಇಂದಿಗೂ ಯಶಸ್ವೀ ಪ್ರದರ್ಶನವನ್ನು ಕಾಣುತ್ತಿದೆ. ‘ಮೂರು ಮುತ್ತು’ ನಾಟಕ 1,000 ಕ್ಕೂ ಮೀರಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಕುಂದಾಪ್ರ ಡಾಟ್ ಕಾಂ ರೂಪಕಲಾ ಕುಂದಾಪುರದ ವ್ಯವಸ್ಥಾಪಕ, ನಿರ್ದೇಶಕ, ನಟ ಕೆ. ಸತೀಶ್ ಪೈ ಅವರನ್ನು ಸಂದರ್ಶಿಸಿತು. 1932ರಲ್ಲಿ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ನೆರಳಕಟ್ಟೆಯಲ್ಲಿ ಜನಿಸಿದ ಕುಳ್ಳಪ್ಪು ತನ್ನ ಬಾಲ್ಯದ ದಿನಗಳಲ್ಲಿಯೇ ಎಕಪಾತ್ರ ಅಭಿನಯ, ಹರಿಕತೆ, ಹೂವಿನ ಕೋಲು, ಯಕ್ಷಗಾನ, ಹಾಡು, ನೃತ್ಯಗಳ ಬಗೆಗೆ ಅತೀವ ಆಸಕ್ತಿ ಹೊಂದಿದ್ದರು. ತನ್ನ ತಾಯಿಯ ಕಣ್ಣು ತಪ್ಪಿಸಿ ಶಾಲೆಗೆ…
ಮುಸ್ಲಿ ಬಾಂಧವರು ಒ೦ದು ತಿ೦ಗಳ ಕಾಲ ಕುರಾನನ್ನು ಪಟನಮಾಡಿ ಧರ್ಮದ ಬಗ್ಗೆ ತಿಳಿದುಕೊಳ್ಳುವುದರೊ೦ದಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಇ೦ದು ಈ ಉಪವಾಸವನ್ನು ಮುಕ್ತಾಯಗೊಳಿಸುವುದರೊ೦ದಿಗೆ ನಾಡಿನೆಲ್ಲೆಡೆಯಲ್ಲಿ ಈದುಲ್ ಪಿತರ್ ಹಬ್ಬವನ್ನು ಸಮಾಜದ ಬಾ೦ಧವರು ಭಕ್ತಿ-ಶೃದ್ದೆಯಿ೦ದ ಆಚರಿಸುತ್ತಿದ್ದಾರೆ. “ಪರಮ ದಯಾಪರನೂ, ಕರುಣಾನಿಧಿಯೂ ಆದ ಅಲ್ಲಾಹುವಿನ ನಾಮದಿಂದ ಸರ್ವಸ್ಥುತಿ. ಅವನು ಸಕಲ ವಿಶ್ವದ ಪ್ರಭು, ಪರಮ ದಯಾಳು, ಕರುಣಾನಿಧಿ, ನಿರ್ಣಾಯಕ ದಿನದ ಅಧಿಪತಿ, ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನನ್ನಿಂದ ಸಹಾಯ ಬೇಡುತ್ತೇನೆ. ನಮಗೆ ಸನ್ಮಾರ್ಗವನ್ನು ತೋರಿಸು, ನೀನು ಅನುಗ್ರಹಿಸಿದವರ ಮಾರ್ಗ, ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗ(ನೀನು ತೋರಿದ)ದಲ್ಲಿ ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ” ಎಂದು ಪ್ರಾರ್ಥನೆ ಮಾಡುತ್ತಾರೆ. ಜಕಾತ್(ಉಪವಾಸ): ಉಪ ಎಂದರೆ ಸಮೀಪ. ವಾಸ ಎಂದರೆ ಇರುವುದು. ಅಂದರೆ ಭಗವಂತನ ಹತ್ತಿರ ಇರುವುದನ್ನು ಉಪವಾಸ ಎನ್ನುವರು. ರಂಜಾನ್ನಿನ ಸಮಯದಲ್ಲಿ ಈ ಉಪವಾಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದೆ. ರಂಜಾನಿನಲ್ಲಿ ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಪ್ರತಿ ದಿನ ಬೆಳಗ್ಗೆ ಮಸೀದಿಯಿಂದ ಉಪವಾಸ…
ನಾವಿರುವ ವಿಶ್ವದಲ್ಲಿ ಅರ್ಥವಾಗದ ಅದೆಷೋ ವಿಚಿತ್ರಗಳು ನಡೆದು ಹೋಗತ್ತದೆ. ಅದು ಅಸಹಜವೆನಲ್ಲ. ನಮ್ಮ ಬದುಕಿನ ನಿತ್ಯ- ಸತ್ಯಗಳು. ಅಂತಹ ವಿಚಿತ್ರಗಳ ಪುಟ್ಟ ಪಟ್ಟಿ ಇಲ್ಲಿದೆ. ಕಥಜರ್ಜರ್ ಕಾಲರ್ನ ಎಂಬುವವರು ಇಂಟರ್ನೆಟ್ ನಲ್ಲಿ ಪ್ರಕಟಿಸಿರುವ ಕುತೂಹಲಕಾರಿ ಸಂಗತಿಗಳನ್ನು ನಿಮಗಾಗಿ ಕನ್ನಡಕ್ಕೆ ಅನುವಾದಿಸಲಾಗಿದೆ. ವಾಸ್ತವತೆಯ ಕಿರು ಸಾರಾಂಶ ಕೇವಲ ಪರಕೀಯರಿಗೆ ಮಾತ್ರ ಅನ್ವಹೀಸುವುದೋ ಅಥವಾ ನಮ್ಮೆಲ್ಲರಿಗೂ ಅನ್ವಹಿಸುತ್ತದೋ? ಓದಿ ನೀವೇ ಅರಿತುಕೊಳ್ಳಿ. *ನಮ್ಮ ಮನೆಗಳು ದೊಡ್ಡದಾಗುತ್ತಿವೆ, ಆದರೆ ಕುಟುಂಬ ಚಿಕ್ಕದಾಗುತ್ತಿದೆ. *ಅನುಕೂಲಗಳು ಹೆಚ್ಚಿವೆ, ಆದರೆ ಅನುಭವಿಸಲು ಸಮಯವೇ ಇಲ್ಲ! *ನಮ್ಮ ಆಸ್ತಿಪಾಸ್ತಿಯ ಬೆಲೆ ಏರಿದೆ, ಆದರೆ ನಮ್ಮ ಮೌಲ್ಯಗಳೇ ಇಳಿದಿವೆ! *ರಸ್ತೆಗಳು ವಿಶಾಲವಾಗಿವೆ, ಆದರೆ ದೃಷ್ಟಿಕೋನಗಳು ಸಂಕುಚಿತವಾಗಿವೆ! *ನಾವು ಹೆಚ್ಚು ಖರೀದಿಸುತ್ತೇವೆ. ಆದರೆ ಕಡಿಮೆ ಉಪಯೋಗಿಸುತ್ತೇವೆ. *ಅಸಾಮಾನ್ಯ ವಿದ್ಯಾರ್ಹಗಳಿವೆ, ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ! *ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ ವಿವೇಚನೆ ಕಡಿಮೆಯಾಗಿದೆ! *ಪರಿಣತರು ಹೆಚ್ಚಾಗಿದ್ದಾರೆ, ಸಮಸ್ಯೆಗಳೂ ಹೆಚ್ಚಿವೆ! *ನಾವು ಹೆಚ್ಚು ಗಳಿಸುತ್ತೇವೆ ಆದರೆ ಕಡಿಮೆ ನಗುತ್ತೇವೆ. *ತುಂಬ ವೇಗವಾಗಿ ಹೋಗುತ್ತೇವೆ, ತುಂಬ ಬೇಗ…
