ಕುಂದಾಪುರ: ತಾಲೂಕಿನ ಕ್ರೈಸ್ತ ಭಾಂದವರು ತಮ್ಮ ತಮ್ಮ ಚರ್ಚಿನಲ್ಲಿ ಕ್ರೈಸ್ತರ ಪವಿತ್ರ ಹಬ್ಬವಾದ ಮೊಂತಿಫೆಸ್ತ್ ( ಹೊಸ್ತು ) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ತಾಲೂಕಿನ ಕುಂದಾಪುರ, ಬಸ್ರೂರು, ತಲ್ಲೂರು, ನಾಡ, ತ್ರಾಸಿ, ಬೈಂದೂರು ಸೇರಿದಂತೆ 11 ಚರ್ಚ್ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿದವು. ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಫಾ.ರೊನಾಲ್ಡ್ ಮಿರಾಂದ್ ಹಾಗೂ ಹೋಲಿಕ್ರಾಸ್ ಸಂಸ್ಥೆ ಕಟಪಾಡಿ ಇದರ ಸಂಚಾಲಕರಾದ ರೆ.ಫಾ. ರಾಯಲ್ ನಜ್ರೆತ್ ರವರ ನೇತೃತ್ವದಲ್ಲಿ ಮೊಂತಿಫೆಸ್ತ್ ಹಬ್ಬವನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ರೊನಾಲ್ಡ್ ಮಿರಾಂದ್ ಎಲ್ಲಾ ಕ್ರೈಸ್ತ ಬಾಂಧವರಿಗೂ ಆರ್ಶೀವಚನ ನೀಡಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಣೆ ಮತ್ತು ತೆನೆ ಹಾಗೂ ಕಬ್ಬನ್ನು ವಿತರಿಸಲಾಯಿತು. ಚಿತ್ರಗಳು – ಲಾರೆನ್ಸ್ ಫೆರ್ನಾಂಡಿಸ್
Author: Editor Desk
ಬೈಂದೂರು: ಉಡುಪಿ ಜಿಲ್ಲಾ ಕಾಂಗ್ರೇಸ್ ಐಟಿ ಸೆಲ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಐವತ್ತು ಸಾವಿರ ರೂಪಾಯಿ ನಗದು ಸಹಾಯಧನವನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಬೈಂದೂರು ವಿಧಾನಸಭಾ ಕ್ಷೇತ್ರದ ಹೇನ್ಬೇರುವಿನಲ್ಲಿ ಇತ್ತೀಚೆಗೆ ಅಮಾನುಷವಾಗಿ ಕೊಲೆಗೀಡಾದ ಅಮಾಯಕ ಬಡಬಾಲಕಿ ಅಕ್ಷತಾ ದೇವಾಡಿಗ ಇವರ ಹೆತ್ತವರಿಗೆ ಹಸ್ತಾಂತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ದೀಪಕ್ ನಾವುಂದ, ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ನ ಪ್ರಕಾಶ್ಚಂದ್ರ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಲ್ಯಾಡಿ ಶಿವರಾಮ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಅಭಿನಂದನ್ ಶೆಟ್ಟಿ, ಅಂಕದಕಟ್ಟೆ ಸುರೇಂದ್ರ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಅಮೃತ್ ಶೆಣೈ, ಉದ್ಯಾವರ ಹರೀಶ್ ಕಿಣಿ, ಪ್ರಕಾಶ್ ಶೆಟ್ಟಿ ಬಲ್ಲಾಡಿ, ಕಾರ್ತಿಕ್ ಮಧ್ಯಸ್ಥ, ರಂಜಿತ್ ಶೆಟ್ಟಿ ಕೊರ್ಗಿ, ಸಂದೀಪ್ ಪೂಜಾರಿ, ಶಕುಂತಲ ಗುಲ್ವಾಡಿ, ಪುಷ್ಪಾ ಶೇಟ್, ಕೋಡಿ ಸುನಿಲ್ ಪೂಜಾರಿ, ಅನೂಪ್ ಶೆಟ್ಟಿ, ಗಣೇಶ್ ಶೇರುಗಾರ್, ವಿನೋದ್ ಕ್ರಾಸ್ತಾ, ಪ್ರತೀಕ್ ಶೆಟ್ಟಿ, ಶ್ರೀಧರ್ ಆಚಾರ್ಯ, ವಕ್ವಾಡಿ ರಮೇಶ್…
ಬೈಂದೂರು: ಜೆ.ಸಿ.ಐ ಶಿರೂರು ಇದರ 2015ನೇ ಸಾಲಿನ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಪೇಟೆ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಜೆ.ಸಿ.ಐ ಸಂಸ್ಥೆ ತನ್ನ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.ಗ್ರಾಮೀಣ ಭಾಗದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಲಯ ಮಟ್ಟದಲ್ಲಿ ಗುರುತಿಸಿಕೊಂಡ ಶಿರೂರು ಜೆ.ಸಿ.ಐ ನ ಸಾಧನೆ ಶ್ಲಾಘನೀಯ ಎಂದರು. ಶಿರೂರು ಜೆ.ಸಿ.ಐ ಅಧ್ಯಕ್ಷ ಪ್ರಕಾಶ ಮಾಕೋಡಿ ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ವಲಯ ನಿರ್ದೇಶಕ ಮಂಗೇಶ್ ಶ್ಯಾನುಭಾಗ್,ಮಾಜಿ ಗ್ರಾ.ಪಂ ಅಧ್ಯಕ್ಷ ರಾಮ ಮೇಸ್ತ, ವಿಜಯ ಬ್ಯಾಂಕ್ ಶಾಖಾದಿಕಾರಿ ಸತೀಶ ಶೆಟ್ಟಿ, ಪೂರ್ವಾಧ್ಯಕ್ಷ ಜೇಸಿ ಪ್ರಸಾದ ಪ್ರಭು,ಕಾರ್ಯದರ್ಶಿ ಹರೀಶ್ ಶೇಟ್ ಮುಂತಾದವರು ಉಪಸ್ಥಿತರಿದ್ದರು ಈ ಸಂಧರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸಿ.ಎಂ.ಮ್ಯಾಥ್ಯೂ ಹಾಗೂ ಹಿರಿಯ ಉದ್ಯಮಿಗಳಾದ ನಾಗೇಶ ಮೇಸ್ತರವರನ್ನು ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ ಕಾಮತ್ ಸ್ವಾಗತಿಸಿದರು.ಗಿರೀಶ್ ಮೇಸ್ತ ಕಾರ್ಯಕ್ರಮ ನಿರೂಪಿಸಿದರು, ಚಂದ್ರ ಕೊಠಾರಿ ವಂದಿಸಿದರು.
ಕುಂದಾಪುರ: ಇತ್ತೀಚೆಗೆ ಶಾರದಾ ಕಲ್ಯಾಣಮಂಟಪದಲ್ಲಿ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ೨೯ನೇ ವಾರ್ಷಿಕೋತ್ಸದಲ್ಲಿ ಜನಾರ್ಧನ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಹೆಮ್ಮಾಡಿಯ ಕಾಲೇಜಿನ ಪ್ರಾಂಶುಪಾಲರಾದ ವಕ್ವಾಡಿ ಸುಧಾಕರ ಶೆಟ್ಟಿಗಾರ್‌ರವನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸಿವಿಲ್ ಇಂಜಿನಿಯರ್ ನಾರಾಯಣ ಶೆಟ್ಟಿಗಾರ್, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಉಪಕಾರ್ಯದರ್ಶಿ ಎಮ್.ಸಂಜೀವ ಶೆಟ್ಟಿಗಾರ್, ಕುಂದಾಪುರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಪ್ತಿ ಸತೀಶ್ ಶೆಟ್ಟಿಗಾರ್, ಕುಂದಾಪುರ ಆಹಾರ ಇಲಾಖೆಯ ನಿರೀಕ್ಷ ವಕ್ವಾಡಿ ಚಂದ್ರಶೇಖರ ಶೆಟ್ಟಿಗಾರ್, ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್, ಮಹಿಳಾ ವೇದಿಕೆಯ ಪ್ರೇಮಾ ಶೆಟ್ಟಿಗಾರ್, ನಿವೃತ್ತ ಶಿಕ್ಷಕಿ ಇಂದಿರಾರವರು ಸಭೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಚಂದ್ರಶೇಖರ ಪದ್ಮಶಾಲಿ ಕಾರ್ಯಕ್ರಮ ನಿರೂಪಿಸಿದರೆ ಉದಯ ಶೆಟ್ಟಿಗಾರ್ ವಂದಿಸಿದರು.
ಬೈಂದೂರು: ಶಿರೂರಿನ ವಿವಿಧ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಆಗ್ರಹಿಸಿ ಎಸ್.ಡಿ.ಪಿ.ಐ ಸಂಘಟನೆ ಶಿರೂರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ಅಧ್ಯಕ್ಷ ಅನ್ವರ್ ಶಿರೂರಿನ ಹಡವಿನಕೋಣೆ,ಕೋಣಮಕ್ಕಿ, ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆಗಳು ಸಂಚಾರಕ್ಕೆ ದುಸ್ಸರವಾಗಿದೆ.ಬೀದಿ ದೀಪ ಹಾಗೂ ಚರಂಡಿ ಅವ್ಯವಸ್ಥೆಯಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ ಹೀಗಾಗಿ ಗ್ರಾಮ ಪಂಚಾಯತ್ ಸಮರ್ಪಕವಾಗಿ ಸಂದಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು. ಗ್ರಾ.ಪಂ ಉಪಾಧ್ಯಕ್ಷ ನಾಗೇಶ ಮೊಗೇರ ಮನವಿ ಸ್ವೀಕರಿಸಿದರು ಬಳಿಕ ಮಾತನಾಡಿ ಈಗಾಗಲೇ ಶಿರೂರಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ವರದಿ ಸಿದ್ದಪಡಿಸಿಕೊಂಡಿದೆ. ಹೀಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೇಡಿಕೆಗಳಿಗೆ ಸಮರ್ಪಕವಾಗಿ ಸಂದಿಸುತ್ತಿದ್ದೇವೆ. ಎಂದರು.ಈ ಸಂಧರ್ಭದಲ್ಲಿ ಶಿರೂರು ಘಟಕದ ಅಧ್ಯಕ್ಷ ಫಯಾಜ್, ಅಕ್ಬರ್ ಆದಮ್, ಮುಜಾಮಿಲ್, ಜಿಪ್ರಿ, ರಹೀಮಾ ಮುಂತಾದವರು ಹಾಜರಿದ್ದರು.
ಕುಂದಾಪುರ: ಇಲ್ಲಿನ ಕಾವ್ರಾಡಿ ಗ್ರಾಮದ ಕಂಡ್ಲೂರಿನಲ್ಲಿ ಓಮ್ನಿ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡೊಡನೆ ದನ ಹಾಗೂ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಜಾಕೀರ್ ಹುಸೈನ್ ಎಂದು ತಿಳಿದುಬಂದಿದೆ. ಘಟನೆಯ ವಿವರ: ಕಂಡ್ಲೂರಿನೆಡೆಗೆ ಅಕ್ರಮವಾಗಿ ಗೋವುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದಾರೆಂಬ ಮಾಹಿತಿಯನ್ನಾಧರಿಸಿ ಪೊಲೀಸರು ಕಂಡ್ಲೂರಿನ ಜುಲ್ಫಾ ಸ್ಟೋರ್ ಸಮೀಪ ವಾಹನವನ್ನು ಅಡ್ಡಗಟ್ಟಿದಾಗ ಆರೋಪಿಗಳು ಏಂ ೨೦ ಂ ೨೬೦೬ ನಂಬರಿನ ಓಮ್ಮಿಯನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. ಪೊಲೀಸರು ಅವರನ್ನು ಬೆನ್ನಟ್ಟಿಲು ಪ್ರಯತ್ನಿಸಿದರು ಅಷ್ಟರಲ್ಲೇ ಅವರು ಪರಾರಿಯಾಗಿದ್ದರು. ಬಳಿಕ ಓಮ್ನಿ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಹೆಣ್ಣುಕರು, ಎರಡು ಗಂಡುಕರು ಹಾಗೂ ಒಂದು ದನ ಸೇರಿ ಒಟ್ಟು ನಾಲ್ಕು ಜಾನುವಾರನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದದ್ದು ತಿಳಿದುಬಂದಿತ್ತು. ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಘಟನೆಯ ಕುರಿತು ಗೋಹತ್ಯಾ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು. ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ.ವಿ.ಕೆ ಐತಾಳ್, ಕುಂದಾಪುರದ ಬಿ. ಆರ್. ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಧ್ಯಾಯಿನಿ ಶಶಿಕಲಾ ಬಿಜೂರ್, ವಡೇರಹೋಬಳಿಯ ಸ. ಹಿ. ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಸುಗುಣ ಎಂ. ವಿ ಅವರ ಸೇವೆಯನ್ನು ಸ್ಮರಿಸಿ ಸಂಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಶಶಿಕಲಾ ಬಿಜೂರ್ ಅವರು ಮಾತನಾಡಿ ಆಧ್ಯಾತ್ಮಿಕ ತಳಹದಿಯ ಮೇಲೆ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಮುನ್ನಡೆಯುವ ಪ್ರೇರಣೆ ವಿದ್ಯಾರ್ಥಿ ಜೀವನದಲ್ಲೆ ದೊರೆತಾಗ ಶಾಂತಿ ನೆಮ್ಮದಿಯ ಯಶಸ್ಸಿನ ಜೀವನ ನಡೆಸಲು ಸಾಧ್ಯ, ಪ್ರಕೃತಿ ಗುರುವಾಗಿ ನಮಗೆ ಎಲ್ಲವನ್ನು ಕಲಿಸುತ್ತಿದೆ ಎಂದು ಕೃತಜ್ಞತೆ ಅರ್ಪಿಸಿದರು. ಶಿಕ್ಷಕರಾಗಿ ಸೇವೆ ಸಲ್ಲಿಸಿದ ರೋಟರಿ ಕ್ಲಬ್ ಕುಂದಾಪುರದ ಸದಸ್ಯರಾದ ಎಚ್. ವಿ. ನರಸಿಂಹ ಮೂರ್ತಿ, ಕೆ.ವಿ.ನಾಯಕ್, ಗೋಪಾಲ ಶೆಟ್ಟಿ, ಶಶಿಧರ ಶೆಟ್ಟಿ ಸಾಲಗದ್ದೆ, ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಆನ್ಸ್ ಕ್ಲಬ್ ಸದಸ್ಯರಾದ ಪಾರ್ವತಿ ಕೊತ್ವಾಲ್,…
ಕುಂದಾಪುರ: ಕುಂದಾಪುರ : ಎಮ್.ಆರ್.ಪಿ.ಎಲ್ ಹೋರಾಟದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಾಳ್ಳ ಹಾಗೂ ನಾಗರಿಕರರನ್ನು ಸೇರಿ ಬಂಧಿಸಿದ್ದನ್ನು ಖಂಡಿಸಿ ಡಿವೈಎಫ್ಐ ಕಾರ್ಯಕರ್ತರು ಶಾಸ್ತ್ರಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಮಾತನಾಡಿ ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವ ಮುನೀರ್ ಹಾಗೂ 42 ಮಂದಿ ನಾಗರಿಕರನ್ನು ಸೇರಿ ಬಂಧನ ಮಾಡಿರುವುದು ಖಂಡನೀಯ, ಜನ ಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದನೆ ಮಾಡಬೇಕಾದ ಸರ್ಕಾರ ಇವತ್ತು ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಆಳುವ ಸರ್ಕಾರ ಪೋಲೀಸರನ್ನು ಚೂ ಬಿಟ್ಟು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು. ಪ್ರತಿಭಟನೆಯಲ್ಲಿ ಸಂತೋಷ್ ಹೆಮ್ಮಾಡಿ,ರವಿ ವಿ.ಎಮ್, ರಾಜ ಬಿಟಿಆರ್, ಸತಿಶ್ ತೆಕ್ಕಟ್ಟೆ, ಗಣೇಶ್ ಕಲ್ಲಾಗರ್, ಅಶೋಕ್ ಹಟ್ಟಿಯಂಗಡಿ, ಶ್ರೀಕಾಂತ್ ಹೆಮ್ಮಾಡಿ, ಅಕ್ಷಯ್ ವಡೇರಹೋಬಳಿ, ಶೀಲಾವತಿ ಉಪಸ್ಥಿತರಿದ್ದರು.
ಗಂಗೊಳ್ಳಿ: ಉಪನ್ಯಾಸಕರು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಮನೋಭಾವವನ್ನು ಅರ್ಥಮಾಡಿಕೊಂಡು ಅವರ ಮಟ್ಟಕ್ಕೆ ಹೋಗಿ, ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ಬೋಧನೆ ಮಾಡಿದಾಗ ಮಾತ್ರ ಈ ವೃತ್ತಿಗೆ ಹೆಚ್ಚಿನ ಮಹತ್ವ ಗೌರವ ದೊರೆಯುತ್ತದೆ ಅಲ್ಲದೆ ಉಪನ್ಯಾಸಕ ವೃತ್ತಿ ಸಾರ್ಥಕತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಬಿ. ನಾಯಕ್ ಹೇಳಿದರು. ಅವರು ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯಪುಸ್ತಕಗಳು ಬದಲಾಗುತ್ತಿರುವ ಈ ಸಮಯದಲ್ಲಿ ಉಪನ್ಯಾಸಕರು ಪಠ್ಯಪುಸ್ತಕಗಳನ್ನು ಸರಿಯಾಗಿ ಅಭ್ಯಸಿಸಿ, ತಮ್ಮ ಸ್ವಂತ ಜ್ಞಾನವನ್ನು ವೃದ್ಧಿ ಮಾಡಿಕೊಂಡು, ತಮ್ಮಲ್ಲಿನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅದು ಉಪಯುಕ್ತವೆನಿಸಲಿದೆ. ಇಂತಹ ಪುನಶ್ಚೇತನ ಶಿಬಿರಗಳಲ್ಲಿ…
ಕುಂದಾಪುರ: ಪರಸ್ಪರ ಸ್ನೇಹ ಸೌಹಾರ್ದತೆಯನ್ನು ವೃದ್ಧಿಸಿಕೊಳ್ಳುವ ಜೊತೆಗೆ ಸ್ವಯಂ ಶಿಸ್ತು, ಸಮಯಪಾಲನೆಗೆ ಆದ್ಯತೆಯನ್ನು ನೀಡಬೇಕಿದೆ. ರೋಟರಿ ತತ್ವ ಆದರ್ಶಗಳನ್ನು ರೂಢಿಸಿಕೊಂಡು ಸಾಮಾಜಿಕ ಜೀವನದಲ್ಲಿ ರೋಟರಿ ಸದಸ್ಯರು ಇತರರಿಗೆ ಆದರ್ಶ ಪ್ರಾಯರಾಗ ಬೇಕು. ರೋಟರಿ ಸೇವೆಗಳಲ್ಲಿ ಒಂದಾದ ಕ್ಲಬ್ ಸೇವೆಗೆ ಹೆಚ್ಚಿನ ಮಹತ್ವ ನೀಡುವ ಕ್ಲಬ್‌ನ ಬೆಳವಣಿಗೆಯ ದೃಷ್ಠಿಯಿಂದ ಅವಶ್ಯಕ ಎಂದು ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಟಿ. ಬಿ. ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ನೂತನ ರೋಟರಿ ಸದಸ್ಯರಿಗೆ ಆಯೋಜಿಸಿದ ಮಾಹಿತಿ ಕಾರ್ಯಾಗಾರದಲ್ಲಿ ರೋಟರಿ ಆದರ್ಶದಲ್ಲಿ ರೋಟೆರಿಯನ್‌ರ ಪಾತ್ರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು. ಖ್ಯಾತ ಕೈಗಾರಿಕೋದ್ಯಮಿ ಪ್ರಶಾಂತ್ ತೋಳಾರ್ ವೃತ್ತಿಪರ ಮಾಹಿತಿ ನೀಡಿ ಹಂಚಿನ ಕಾರ್ಖಾನೆಯ ಉದ್ಯಮದ ಹಾದಿಯ ಏಳು ಬೀಳುಗಳನ್ನು ಸ್ಮರಿಸಿಕೊಂಡು ತಮ್ಮ ವ್ಯವಹಾರ ಪ್ರಗತಿಯ ಮೈಲುಗಲ್ಲುಗಳನ್ನು ಹಂಚಿಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.
