ನಾಗರಾಜ ಪಿ. ಯಡ್ತರೆ ಮನುಷ್ಯನಿಗೆ ಒಮ್ಮೆ ಪ್ರಚಾರದ ಗೀಳು ಹತ್ತಿಕೊಂಡರೆ ಮುಗಿಯಿತು. ಆತ ಏನೆಲ್ಲಾ ಹುಚ್ಚಾಟ ಮಾಡುತ್ತಾನೆಂದರೆ, ಆತನಿಗೆ ತನ್ನ ತಲೆಗೂ, ನಾಲಿಗೆಗೂ ಇರುವ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದು ಗೊತ್ತೇ ಆಗುವುದಿಲ್ಲ. ಜನರೆಲ್ಲಾ ಅತನನ್ನು ‘ಪೆಕರಾ’ ಅಂತ ನೋಡಿದರೂ ಅವನಿಗೆ ತಾನು ಮಹಾನುಭಾವ ಎಂಬ ಭಾವನೆ ಬರಲಾರಂಭಿಸುತ್ತದೆ. ತನ್ನ ವಿಚಾರಧಾರೆಯನ್ನು ಜನರು ಎಂದೋ ಕಸದ ಬುಟ್ಟಿಗೆ ಹಾಕಿರುವುದು ಸಹ ಅತನಿಗೆ ತಿಳಿಯುವುದಿಲ್ಲ. ಅತನಿಗೆ ಇಡೀ ಭೂಮಂಡಲದ ಜನರೆಲ್ಲಾ ಮೂರ್ಖರಂತೆಯೂ, ತಾನು ಮಾತ್ರ ಪಂಡಿತನಂತೆಯೂ ಭಾಸವಾಗತೊಡಗುತ್ತದೆ! ಈ ಮಾತನ್ನು ಹೇಳಲೂ ಒಂದು ಕಾರಣ ಇದೆ. ನಮ್ಮ ನಾಡಿನ ಕೆಲವು ವಿಚಿತ್ರವಾದಿಗಳಿಗೆ ತಾವು ಮಹಾನ್ ಪಂಡಿತರೆನಿಸಿಕೊಳ್ಳಲು ಎಲ್ಲಾ ದಾರಿಗಳು ಮುಚ್ಚಲ್ಪಟ್ಟು, ಕೇವಲ ಹಿಂದು ಧರ್ಮ ಮತ್ತು ಹಿಂದೂ ಧರ್ಮದ ದೇವತೆಗಳು ಮಾತ್ರ ಚರ್ಚೆಯ ವಿಷಯವಾಗಿ ಉಳಿದಿದೆ. ಧರ್ಮ ಹಾಗೂ ದೇವರ ಕುಲ ಗೋತ್ರದ ಬಗ್ಗೆ ಎಂಥ ಅಧಮನೂ ಆಡದ ಮಾತನಾಡಿ, ಅಸಭ್ಯನೂ ಬಳಸದ ಭಾಷಾ ಪ್ರಯೋಗವನ್ನೆಲ್ಲಾ ಬಳಸಿ, ತನ್ನ ಮಹಾನ್ ಸಂಸ್ಕ್ರತಿಯನ್ನು ಪ್ರದರ್ಶನ ಮಾಡಿ ತನ್ನ…
Author: ಯಡ್ತರೆ ಕಾಲಂ
ನಾಗರಾಜ ಪಿ. ಯಡ್ತರೆ. ಈ ಬಾರಿಯ ಸಾಲು ಸಾಲು ರಜೆಯಲ್ಲಿ ನನ್ನ ಬಹುದಿನದ ಕನಸಿನಂತೆ ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸ ಹೋಗುವ ಬಗ್ಗೆ ಒಂದು ಪ್ಲಾನ್ ಹಾಕಿಕೊಂಡೆವು. ಬಹಳ ವರ್ಷಗಳ ಹಿಂದೆ ಓದಿದ ’ನಿಸರ್ಗದ ಕನ್ಯೆ ಅಂಡಮಾನ್’ ಎಂಬ ಪುಸ್ತಕವು ನನಗೆ ಈ ದ್ವೀಪ ಸಮೂಹಗಳ ಬಗ್ಗೆ, ವಿಸ್ತಾರವಾಗಿ ಹರಡಿದ ಶರಧಿಯ ಮುಕುಟದಂತೆ ಎದ್ದಿರುವ ನಡುಗಡ್ಡೆಯ ಬಗ್ಗೆ ಅಗಾಧ ಕುತೂಹಲವನ್ನೂ, ಅಲ್ಲಿ ನಿಂತು ನಮ್ಮ ತಾಯಿನಾಡನ್ನು ನೋಡಬೇಕೆಂಬ ಬಯಕೆಯನ್ನೂ ಹಾಗೂ ಈ ದ್ವೀಪಗಳ ನಿಗೂಢತೆಯನ್ನು ಆಸ್ವಾದಿಸಬೇಕೆಂಬ ಕಾತರವನ್ನೂ ಹುಟ್ಟು ಹಾಕಿತ್ತು. ಆದರೆ ಅಂಡಮಾನ್‌ಗೆ ಹಡಗಿನಲ್ಲಿ ವಾರಗಟ್ಟಲೆ ಪಯಣ ನಮಗೆ ಕಷ್ಟಸಾಧ್ಯವಾದ್ದರಿಂದ, ನಮ್ಮ ಸಮೀಪದ ಮಲ್ಪೆಯ ಸನಿಹದಲ್ಲಿರುವ ಪ್ರವಾಸಿತಾಣ ಸೈಂಟ್ ಮೇರೀಸ್ ದ್ವೀಪಕ್ಕೆ ನಾನು, ನನ್ನ ಸ್ನೇಹಿತರಾದ ಸುರೇಶ್, ರಾಘವೇಂದ್ರ ಮತ್ತು ಸುನಿಲ್ ಒಟ್ಟು ನಾಲ್ಕು ಜನ ಹೊರೆಟೆವು. ಇದೇನೂ ನಮ್ಮ ಮೊದಲ ಪ್ರವಾಸವಲ್ಲ. ಈವರೆಗೆ ನಮ್ಮ ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಅನೇಕ ಕೋಟೆಕೊತ್ತಲ, ಗಿರಿ ಶಿಖರ ಹಾಗೂ ಪ್ರಾಚೀನ ದೇವಸ್ಥಾನಗಳಿಗೆ…
ನಾಗರಾಜ ಪಿ. ಯಡ್ತರೆ ಮೊನ್ನೆ ಒಬ್ಬ ವಿದ್ಯಾರ್ಥಿ ಪೋನ್ ಮಾಡಿ sir, what is the difference between market and marketing? ಅಂತ ಕೇಳ್ದ. ಮಾರ್ಕೆಟಿಂಗ್ ಅಂದ ಕೂಡಲೆ ನನಗೆ ನೆನಪಾದದ್ದು ಇವತ್ತಿನ ಜೀವನದಲ್ಲಿ ಹೇಗೆ ಮಾರ್ಕೇಟಿಂಗ್ ಬೃಹಸ್ಪತಿಗಳು ಕಲರ್ ಕಲರ್ ಮಕ್ಮಲ್ ಟೋಪಿ ಹಿಡಿದುಕೊಂಡು ಜನರನ್ನು ಕಾಯುತ್ತಿರುತ್ತಾರೆ ಅಂತ. ಒಂದು ಚಿಕ್ಕ ಉದಾಹರಣೆ ನೋಡಿ. ಹಿಂದಿನ ಕಾಲದಲ್ಲಿ ಜನರು ಬೆಳಿಗ್ಗೆ ಹಲ್ಲುಜ್ಜಲು ಇದ್ದಿಲು ಅಥವಾ ಉಪ್ಪು ಬಳಸೋದು ಸಾಮಾನ್ಯವಾಗಿತ್ತು. ನಾವು ಚಿಕ್ಕವರಾಗಿದ್ದಾಗ ಬಳಸುತ್ತಿದ್ದೆವು. ನಂತರ ಹಲ್ಲುಜ್ಜಲು ವಿವಿಧ ನಮೂನೆಯ ಟೂತ್ ಪೇಸ್ಟ್‌ಗಳು ಬಂದವು. ಸ್ವಲ್ಪ ಸಿಹಿಯಾದ ಈ ಪೇಸ್ಟ್‌ಗಳು ಜನರ ಜೀವನದ ಒಂದು ಅವಿಭಾಗ್ಯ ಅಂಗವಾಯಿತು. ನೂರಾರು ಕಂಪೆನಿಗಳು ಇದನ್ನು ತಯಾರಿಸಿದವು. ಆದರೆ ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಟೂತ್ಪೇಸ್ಟ್ ಕಂಪೆನಿಯೊಂದು ’ನಿಮ್ಮ ಪೇಸ್ಟ್ನಲ್ಲಿ ಉಪ್ಪಿ ಇದೆಯೇ?’ ಅಂತ ಕೇಳಿತು. ಆದರೆ ಜನ ಯಾರೂ ಉಪ್ಪು ನಮ್ಮ ಮನೆಯಲ್ಲಿಯೇ ಇದೆ. ನಾವು ಅದರಲ್ಲೇ ಹಲ್ಲು ಉಜ್ಜುತ್ತೇವೆ ನಿಂದು ಯಾರಿಗೆ ಬೇಕು? ಅಂತ ಕೇಳಿಲ್ಲ.…
