ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಗ್ರಾಮ ಜಟ್ಟಿಗ ಮತ್ತು ಹೋಬಳಿದಾರ್ ಮನೆ ದೊಡ್ಡ ನಾಗರ ಬನ ಹಾಗೂ ಸಪರಿವಾರ ಇದರ ಪುನ: ಪ್ರತಿಷ್ಠಾ ಮಹೋತ್ಸವ ಮತ್ತು ಆಶ್ಲೇಷಾ ಬಲಿ ಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಖ್ಯಾತ ಹರಿದಾಸರಾದ ಬಿ.ಸಿ.ರಾವ್ ಶಿವಪುರರವರು ಮಾತನಾಡಿ ಕರಾವಳಿಯಾದ್ಯಂತ ನಾಗಾರಾಧನೆಯು ಪ್ರಾಮುಖ್ಯತೆ ಪಡೆದಿದ್ದು ಪ್ರಕೃತಿ ಮಾತೆಗೆ ಭಕ್ತರು ಪೂಜನೀಯ ಗೌರವ ಸಲ್ಲಿಸುತ್ತಿದ್ದಾರೆ ಭಕ್ತಿ ನಿಷ್ಟೆ ಧೃಢ ನಂಬಿಕೆಯಿಂದ ಬದುಕಿನುದ್ದಕ್ಕೂ ಉತ್ತಮ ಬಾಳ್ವೆ ನಡೆಸಲು ಸಾಧ್ಯ ಎಂದು ಹೇಳಿ ನಾಗಾರಾಧನೆಯ ಮಹತ್ವದ ಬಗ್ಗೆ ಸುವಿಸ್ತಾರವಾಗಿ ಹರಿಕಥೆಯ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಇಂಟರ್ ನ್ಯಾಷನಲ್ ಹೋಟೆಲ್ ಮಾಲಿಕರು ಹಾಗೂ ಕೋಲ್ಲೂರು ದೇವಳದ ಮಾಜಿ ಧರ್ಮದರ್ಶಿಗಳಾದ ಶ್ರೀ ಜಯಾನಂದ ಹೋಬಳಿದಾರ್ ವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಅನಂತ ಹೋಬಳಿದಾರ್ ಇವರು ಸದ್ರಿ ಕ್ಷೇತ್ರದಿಂದ ಜೈನ ಮತಾವಲಂಬಿಯಾದ ಶ್ರೀ 108 ಸಂಭವಸಾಗರ ಮಹಾರಾಜರ ಕುರಿತಾದ ಪುಸ್ತಕ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎ.ಶ್ರೀನಿವಾಸ ನಿವೃತ್ತ ಶಿಕ್ಷಕರು, ಬಾಲಯ್ಯ ಹೋಬಳಿದಾರ್, ಡಿ.ಕೆ ಗೋಪಾಲ ಶೇರುಗಾರ್, ಗೋಪಾಲ ಹೋಬಳಿದಾರ್ ಶಿವಮೊಗ್ಗ, ವೆಂಕಟೇಶ.ಎಚ್. ರಾಧಾಕೃಷ್ಣ ಹೋಬಳಿದಾರ್, ಸುರೇಶ್ ಬಂಕೇಶ್ವರ ಉಪಸ್ಥಿತರಿದ್ದರು. ಸಂಘಟಕರಾದ ನಾರಾಯಣ ಹೋಬಳಿದಾರ್ ಸ್ವಾಗತಿಸಿದರು. ಸುಧಾಕರ ಹೋಬಳಿದಾರ್ ಧನ್ಯವಾದ ಸಲ್ಲಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.










