Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬಿದ್ಕಲ್‌ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ವಿದ್ಯಾರ್ಥಿ ಸರಕಾರ ರಚನೆಗೆ ಚುನಾವಣೆ
    ಊರ್ಮನೆ ಸಮಾಚಾರ

    ಬಿದ್ಕಲ್‌ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ವಿದ್ಯಾರ್ಥಿ ಸರಕಾರ ರಚನೆಗೆ ಚುನಾವಣೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ವಲಯದ ಬಿದ್ಕಲ್ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ರಚನೆಗಾಗಿ ಪ್ರಜಾಪ್ರಭುತ್ವ ಮಾದರಿಯ ಗುಪ್ತ ಮತದಾನ ಪ್ರಕ್ರಿಯೆ ಜರುಗಿತು.

    Click Here

    Call us

    Click Here

    ದೇಶದ ಭಾವೀ ಪ್ರಜೆಗಳಾದ ನಮ್ಮ ಮಕ್ಕಳಿಗೆ, ಇಂದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸಮಗ್ರ ತಿಳುವಳಿಕೆಯನ್ನು ಪ್ರಾಥಮಿಕ ಹಂತದಿಂದಲೇ ನೀಡಿ, ಪಾರದರ್ಶಕವಾದ ನ್ಯಾಯಬದ್ಧ ಚುನಾವಣೆಯ ರೀತಿ ನೀತಿಯನ್ನು ಮಕ್ಕಳಿಗೆ ನೈಜ ಪ್ರಾತ್ಯಕ್ಷಿಕೆಯ ಮುಖೇನ ತಿಳಿಸಿಕೊಟ್ಟಲ್ಲಿ, ಭವಿಷ್ಯದಲ್ಲಿ ಅದೇ ಮಾದರಿಯನ್ನು ಅವರು ಅನುಸರಿಸುವುದರೊಂದಿಗೆ, ಭೃಷ್ಟಾಚಾರ ಮುಕ್ತ ಸಾಮಾಜಿಕ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಕುಲಗೆಟ್ಟು ಹೋಗುತ್ತಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸುಧಾರಿಸಲೂ ಅನುಕೂಲವಾಗುತ್ತದೆ.

    ಚುನಾವಣೆಗೆ 15 ದಿನ ಮುಂಚೆ ಅಧಿಸೂಚನೆ ಹೊರಬಿದ್ದಿದ್ದು, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ, ಮತದಾನ, ಮತಗಳ ಎಣಿಕೆ, ಪ್ರಮಾಣವಚನ ಸ್ವೀಕಾರ.. ಹೀಗೆ ಎಲ್ಲಾ ಪ್ರಕ್ರಿಯೆಗಳೂ ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ, ನಿಗದಿತ ಸಮಯದ ಚೌಕಟ್ಟಿನಲ್ಲೇ ನಡೆದು, 15 ದಿನಗಳಿಂದ ಜಾರಿಯಲ್ಲಿದ್ದ ಚುನಾವಣಾ ನೀತಿ ಸಂಹಿತೆ ಸಂಪನ್ನಗೊಂಡಿದೆ.

    ಮತದಾನಕ್ಕಾಗಿ ಪ್ರತ್ಯೇಕವಾದ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಭಾಗವಹಿಸಿದರು. ಶಾಲಾ ಸಹಶಿಕ್ಷಕರುಗಳಾದ ಸತೀಶ್ ಶೆಟ್ಟಿಗಾರ್, ರಮಣಿ, ಜ್ಯೋತಿಲಕ್ಷ್ಮಿ, ಚಿತ್ರಾ, ಗೌರವ ಶಿಕ್ಷಕಿಯರಾದ ಮಹಾಲಕ್ಷ್ಮೀ, ಭಾರತಿ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಚುನಾವಣಾ ವೀಕ್ಷಕರಾಗಿ ಅಬಕಾರಿ ಇಲಾಖೆಯ ರಾಘವೇಂದ್ರ ಆಗಮಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರತ್ನ ಚುನಾವಣಾಧಿಕಾರಿಯಾಗಿ, ಇಡೀ ಚುನಾವಣಾ ಪ್ರಕ್ರಿಯೆಯನ್ನು ನಿಯಮಬದ್ಧವಾಗಿ ಮನ್ನೆಡೆಸಿದರು.

    ಮತದಾರರ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಲಾಗಿದ್ದು, ಪ್ರತಿಯೊಬ್ಬ ಮತದಾರರಿಗೂ ಗುರುತಿನ ಚೀಟಿಯನ್ನು ಮೊದಲೇ ವಿತರಿಸಲಾಗಿತ್ತು. ಮತದಾರರು ಗುರುತಿನ ಚೀಟಿಯನ್ನೂ ಹಾಜರುಪಡಿಸಿಯೇ ಮತಚಲಾಯಿಸಬೇಕು. ಮತದಾನದ ಸಂದರ್ಭದಲ್ಲಿ ಮತದಾರರ ಪಟ್ಟಿಯ ಗುರುತು ಮಾಡಿರುವ ಪ್ರತಿ ಮೊದಲನೇ ಪೋಲಿಂಗ್ ಆಫೀಸರ್ ಬಳಿಯಲ್ಲೂ, ಅದರ ಇತರೇ ಪ್ರತಿ ಪ್ರತಿಯೊಬ್ಬ ಏಜೆಂಟರ ಬಳಿಯಲ್ಲೂ ನೀಡಲಾಗಿತ್ತು. ಪ್ರತಿಯೊಬ್ಬ ಅಭ್ಯರ್ಥಿಯ ಪರವಾಗಿ ತಲಾ ಇಬ್ಬರು ಮತದಾನ ಏಜೆಂಟರನ್ನು ನೇಮಿಸಲಾಗಿತ್ತು. ನಕಲಿ ಮತದಾನಕ್ಕೆ ಇಲ್ಲಿ ಅವಕಾಶವೇ ಇಲ್ಲ .ಗುರುತಿನ ಚೀಟಿಯಿದ್ದೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಮತಚಲಾಯಿಸಲು ಅವಕಾಶವಿರುವುದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಮತದಾನ ಏಜೆಂಟರ ಒಪ್ಪಿಗೆಯಿದ್ದಲ್ಲಿ ಮಾತ್ರ ಮತ ಚಲಾವಣೆಯ ಹಕ್ಕನ್ನು ನೀಡಲಾಗುತ್ತದೆ. ಇಲಾಖೆ ನೀಡಿರುವ ಚೈಲ್ಡ್ ಐಡಿಯನ್ನೇ ಗುರುತಿನ ಚೀಟಿ ಸಂಖ್ಯೆಯನ್ನಾಗಿ ಪರಿಗಣಿಸಲಾಗಿದ್ದು, 1ನೇ ತರಗತಿ ಮಕ್ಕಳಿಗೆ ಅವರ ದಾಖಲಾತಿ ಸಂಖ್ಯೆಯೇ, ಗುರುತಿನ ಚೀಟಿ ಸಂಖ್ಯೆಯಾಗಿತ್ತು. ಈಗ ತಾನೇ ಹೊಸತಾಗಿ 1 ನೇ ತರಗತಿಗೆ ದಾಖಲಾದ ಮಗುವಿಗೂ ಮತದಾನಕ್ಕೆ ಅವಕಾಶ ಒದಗಿಸಿರುವುದು ವಿಶೇಷ. ಮತಚಲಾಯಿಸುವ ಪ್ರತಿಯೊಬ್ಬರೂ ಮತದಾರರ ರಿಜಿಸ್ಟರ್‌ನಲ್ಲಿ ಸಹಿ ಮಾಡಿದ ನಂತರವೇ ಹಕ್ಕು ಚಲಾವಣೆಯ ಅವಕಾಶ ನೀಡಲಾಗಿತ್ತು.

    Click here

    Click here

    Click here

    Call us

    Call us

    ಈ ಚುನಾವಣೆಯಲ್ಲಿ ಮುದ್ತಿತ ಮತ ಪತ್ರಗಳನ್ನು ಬಳಸಲಾಗಿದ್ದು, ಅದರಲ್ಲಿ ಕ್ರ.ಸಂ. ಅಭ್ಯರ್ಥಿಯ ಹೆಸರು ಹಾಗೂ ಅವರ ಚಿಹ್ನೆಯನ್ನೂ ಮುದ್ರಿಸಲಾಗಿತ್ತು.NOTA (ನೋಟಾ)ಕ್ಕೂ ಅವಕಾಶ ನೀಡಲಾಗಿತ್ತು. ಮತ ಚಲಾಯಿಸಿದ ಕುರುಹಾಗಿ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗಿತ್ತು. ಮತ ಪತ್ರದ ಮೇಲೆ ಗುರುತು ಮಾಡಲು ಮುದ್ರೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ ೨ ಮತಗಳಿಗೆ ಅವಕಾಶವಿದ್ದು, ಒಂದು ಮುಖ್ಯಮಂತ್ರಿ ಸ್ಥಾನಕ್ಕೆ, ಇನ್ನೊಂದು ಉಪಮುಖ್ಯಮಂತ್ರಿ ಸ್ಥಾನಕ್ಕೆ. ಎರಡಕ್ಕೂ ಪ್ರತ್ಯೇಕ ಬಣ್ಣಗಳ ಮತಪತ್ರವನ್ನು ಮುದ್ರಿಸಲಾಗಿತ್ತು.

    ಗುರುತಿನ ಚೀಟಿ ಇಲ್ಲದೇ ಮತಚಲಾಯಿಸಲು ಪ್ರಯತ್ನಿಸುವುದು, ಒಮ್ಮೆ ಮತದಾನ ಮಾಡಿದವರೇ ಮತ್ತೆ ಮತ ಚಲಾಯಿಸಲು ಬರುವುದು, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತಗಟ್ಟೆ ಅಧಿಕಾರಿಗಳೊಂದಿಗೆ ಜಗಳಕ್ಕೆ ನಿಲ್ಲುವುದು, ಇತ್ಯಾದಿ ಕಾನೂನು ಬಾಹಿರವಾದ ನಿಯಮ ಉಲ್ಲಂಘನೆಯ ಪ್ರಕರಣಗಳೂ ದಾಖಲಾಗಿದ್ದವು. ವಿದ್ಯಾರ್ಥಿಗಳೇ ಪೋಲಿಸರ ಪಾತ್ರವನ್ನು ನಿರ್ವಹಿಸಿದ್ದು, ಮತದಾನದ ನಿಯಮವನ್ನು ಉಲ್ಲಂಘಿಸಿದರೆ ಏನು ಶಿಕ್ಷೆ ಆಗುತ್ತದೆ ಎಂಬುದು ವಿದ್ಯಾರ್ಥಿಗಳಿಗೆ ಮನವರಿಕ ಮಾಡಿಸುವ ಸಲುವಾಗಿ ನಿಯಮ ಉಲ್ಲಂಘಿತರನ್ನು ಪೋಲಿಸರು ಬಂಧಿಸಿ, ಶಿಕ್ಷೆಗೆ ಗುರಿಪಡಿಸುವ ಅವಕಾಶ ನೀಡಲಾಗಿತ್ತು.

    ಮತ ಎಣಿಕೆ:
    ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ, ಮತದಾನ ಮುಕ್ತಾಯವಾದ 2 ದಿನಗಳ ಬಳಿಕ, ಪೋಲಿಸರ ಸುಪರ್ದಿಯಲ್ಲಿ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ‍್ಯ ನಡೆಯಿತು. ಠೇವಣಿಯನ್ನು ಉಳಿಸಿಕೊಳ್ಳಲು ಶೇ.5 ರಷ್ಟು ಮತ ಪಡೆಯಬೇಕು ಎಂಬ ನಿಯಮ ವಿಧಿಸಲಾಗಿತ್ತು. ವಿಶೇಷವೆಂದರೆ ಎಲ್ಲಾ ಅಭ್ಯರ್ಥಿಗಳು ಶೇ.5ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯುವ ಮುಖೇನ ಠೇವಣಿ ಉಳಿಸಿಕೊಂಡಿದ್ದಾರೆ.ಎಣಿಕೆಗೆ ನೇಮಿಸಲ್ಪಟ್ಟ ಅಧಿಕಾರಿಗಳು ಮತ ಎಣಿಕೆ ಕಾರ್ಯ ಪೂರ್ಣಗೊಳಿಸಿದರು. ಚುನಾವಣಾಧಿಕಾರಿಯವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿ, ವಿಜೇತ ಅಭ್ಯರ್ಥಿಗಳಿಗೆ ಗೆಲುವಿನ ಪ್ರಮಾಣ ಪತ್ರವನ್ನು ನೀಡಿದರು.

    ಅಭ್ಯರ್ಥಿಗಳ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ಪರ್ಧಿಸಿ ಜಯಶಾಲಿಯಾದ ಅದ್ವಿತ್ ಶೆಟ್ಟಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಶ್ರೀನಿಧಿ ಅವರಿಗಿಂತ 16 ಮತಗಳನ್ನು ಹೆಚ್ಚಿಗೆ ಪಡೆದು ಗೆಲುವು ಸಾಧಿಸಿದರೆ, ಉಪ ಮುಖ್ಯ ಮಂತ್ರಿ ಸ್ಥಾನಕ್ಕಾಗಿ ಸ್ಪರ್ಧಿಸಿ ಜಯಶಾಲಿಯಾದ ಪೂಜನಾ ಎಸ್ ಪದ್ಮಶಾಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಧನುಷ್ ಎಂ. ಅವರಿಗಿಂತ ಕೇವಲ 4 ಮತಗಳನ್ನು ಹೆಚ್ಚಿಗೆ ಪಡೆದು ಗೆಲುವು ಸಾಧಿಸಿದರು. ಇದರಲ್ಲಿ 9 ಕುಲಗೆಟ್ಟ (ಅಸಿಂಧು) ಮತಗಳಿದ್ದು, ಏಳು ಮತ ‘ನೋಟಾ’ ಕ್ಕೆ ಚಲಾಯಿಸಲ್ಪಟ್ಟಿದ್ದವು.

    ಪ್ರಮಾಣ ವಚನ ಸ್ವೀಕಾರ ಸಮಾರಂಭ:
    ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಗೆಲುವಿನ ಪ್ರಮಾಣ ಪತ್ರ ವಿತರಿಸಿದ ಬಳಿಕ, ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಇಡೀ ಸಚಿವ ಸಂಪುಟದ ಸದಸ್ಯರಿಗೆ ಹಿರಿಯ ಸಹಶಿಕ್ಷಕ ಸತೀಶ ಶೆಟ್ಟಿಗಾರ್ ರಾಜ್ಯಪಾಲರ ಪಾತ್ರ ನಿರ್ವಹಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಹೀಗೆ ಇಡೀ ಚುನಾವಣಾ ಪ್ರಕ್ರಿಯೆ ಅರ್ಥಪೂರ್ಣವಾಗಿ ಸಾಗುವುದರೊಂದಿಗೆ ಪುಟ್ಟ ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ರಚನೆ ಹೇಗಾಗುತ್ತದೆ ಎಂಬುದನ್ನು ನೈಜವಾಗಿ ತೋರಿಸಿಕೊಟ್ಟಿತು. ಈ ಚುನಾವಣಾ ಮಾದರಿಯನ್ನು ಅನುಸರಿಸುವುದರಿಂದ ಭವಿಷ್ಯದಲ್ಲಿ ಭೃಷ್ಟಾಚಾರ ಮುಕ್ತ ಚುನಾವಣೆ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ನಿರೀಕ್ಷಿಸಬಹುದಾಗಿದೆ.

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ

    20/12/2025

    ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ

    20/12/2025

    ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ

    20/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ
    • ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ
    • ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ
    • ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.