Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರಕ್ತದಾನಕ್ಕಾಗಿಯೇ ಬದುಕು ಮುಡಿಪಾಗಿಟ್ಟ ಶಿವಕುಮಾರ್
    ವಿಶೇಷ ಲೇಖನ

    ರಕ್ತದಾನಕ್ಕಾಗಿಯೇ ಬದುಕು ಮುಡಿಪಾಗಿಟ್ಟ ಶಿವಕುಮಾರ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪುರ: ರಕ್ತದಾನವೆಂಬುದು ಶ್ರೇಷ್ಠ ದಾನಗಳಲ್ಲೊಂದು. ನಮ್ಮ ಕರ್ನಾಟಕದಲ್ಲಿಯೇ ಯುನಿಟ್ ರಕ್ತಕ್ಕೆ ವರ್ಷವಿಡಿ ಬೇಡಿಕೆ ಇರುತ್ತದೆ. ಹಾಗಂತ ರಕ್ತದಾನಿಗಳಿಗೇನು ಬರವಿಲ್ಲ. ಆದರೂ ಒಟ್ಟು ಬೇಡಿಕೆಯ ಶೇಕಡಾ ಎಂಬತ್ತರಷ್ಟು ಮಾತ್ರ ರಕ್ತ ಪೂರೈಕೆಯಾಗುತ್ತದೆ ಎಂದರೆ ನಂಬಲೇಬೇಕು. ರಕ್ತದಾನದ ಬಗೆಗೆ ಸಾಕಷ್ಟು ಅರಿವೂ ಮೂಡಿಸುತ್ತಿದ್ದರೂ ಕೂಡ ಜನರಲ್ಲಿರುವ ತಪ್ಪ ಕಲ್ಪನೆಗಳಿಂದಾಗಿ ರಕ್ತಕ್ಕಾಗಿ ಪರದಾಡಬೇಕಾದ ಸ್ಥಿತಿ ಇದೆ. ಇದು ಬದಲಾಗಬೇಕು. ರಕ್ತವನ್ನು ಸ್ವಯಂ ಪ್ರೇರಿತರಾಗಿ ಎಲ್ಲರೂ ನೀಡುವಂತಾಗಬೇಕು. ಆ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಪಣತೊಟ್ಟಿರುವ ದಾವಣಗೆರೆಯ ಮಹಡಿ ಶಿವಕುಮಾರ್ ಎಂಬುವವರು ಕಳೆದ 20 ವರ್ಷಗಳಿಂದ ಊರೂರು ಸುತ್ತುತ್ತಾ ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಿದ್ದಾರೆ. ಇತ್ತಿಚಿಗೆ ಕುಂದಾಪುರಕ್ಕೆ ಬಂದಿದ್ದಾಗ ‘ಕುಂದಾಪ್ರ ಡಾಟ್ ಕಾಂ’ ಭೇಟಿ ಮಾಡಿದ ಅವರು ತಮ್ಮ ಉದ್ದೇಶ, ಅನುಭವ-ಕನಸುಗಳನ್ನು ಬಿಚ್ಚಿಟ್ಟರು.

    Click Here

    Call us

    Click Here

    ಸರ್ವಶಿಕ್ಷಣ ಅಭಿಯಾನದ ಪುಸ್ತಕ ವ್ಯಾಪಾರಿಯಾಗಿದ್ದ 45 ವರ್ಷ ವಯಸ್ಸಿನ ಶಿವಕುಮಾರ್ ರಕ್ತದಾನದ ಬಗ್ಗೆ ಅರಿವು ಮೂಡಿಸುವುದಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟು ರಕ್ತದ ಕೊರತೆಯನ್ನು ನೀಗಿಸಲು ಪಣತೊಟ್ಟಿದ್ದಾರೆ. ದಾವಣಗೆರೆಯ ಡಾ| ಶಶಿಕಲಾ ಕೃಷ್ಣಮೂರ್ತಿ ಅವರ ಸಲಹೆಯಿಂದ ಪ್ರೇರಿತರಾದ ಶಿವಕುಮಾರ್ ಈವರೆಗೆ 55 ಭಾರಿ ರಕ್ತದಾನ ಮಾಡಿದ್ದಾರೆ. ಜೊತೆಗೆ ಉಳಿದವರಿಗೂ ರಕ್ತದಾನ ಮಾಡುವಂತೆ ಪ್ರೆರೇಪಿಸುತ್ತಾ ಬಂದಿದ್ದಾರೆ. ಕಾಲ್ನಡಿಗೆಯ ಜಾಥಾ, ಸೈಕಲ್ ಜಾಥಾ, ಸ್ಕೂಟರ್ ಜಾಥಾ ಹಾಗೂ ಸಭೆ ಸಮಾರಂಭಗಳ ಮೂಲಕ ರಕ್ತದಾನದ ಮಹತ್ವವನ್ನು ಸಾರಿ ಹೇಳುತ್ತಿದ್ದಾರೆ. ಕೆಂಪು ಟಿಶರ್ಟ್ ಹಾಕಿಕೊಂಡು ರಕ್ತದಾನದ ಬಗೆಗಿನ ಒಂದಿಷ್ಟು ಮಾಹಿತಿಗಳನ್ನು ಬಗಲಲ್ಲಿ ಸಿಕ್ಕಿಸಿಕೊಂಡು ಹೊರಡುವ ಶಿವಕುಮಾರ್ ಅವರನ್ನು ದಾವಣಗೆರೆಯ ಮಂದಿಯೂ ಗೌರವಿಸುತ್ತಾರೆ.

    ರಕ್ತದಾನದ ಅರಿವೂ ಮೂಡಿಸಲಿಕ್ಕಾಗಿಯೇ ವೆಬ್ಸೈಟ್ ಆರಂಭಿಸಿ ಅದರ ಮೂಲಕ ರಕ್ತದಾನದ ಮಹತ್ವವನ್ನು ತಿಳಿಸುವುದು, ರಕ್ತದಾನಿಗಳ ವಿವರಗಳನ್ನು ಅಗತ್ಯವಿರುವವರಿಗೆ ತಲುಪುವಂತೆ ಮಾಡುವುದು ಮುಂತಾದ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ಪ್ರಪಂಚ ಪರ್ಯಟನೆ ಮಾಡಬೇಕೆಂಬ ಇಂಗಿತ ಅವರದ್ದು. ಅದಕ್ಕೆ ಸಾಮಾಜಿಕ ಸೇವಾ ಸಂಸ್ಥೆಗಳು ಹಾಗೂ ಸರಕಾರದ ನೆರವನ್ನು ಕೋರಿರುವ ಅವರು ನೆರವು ದೊರೆಯದಿದ್ದರೆ ತನ್ನ ಸ್ವಂತ ಮನೆಯನ್ನಾದರೂ ಮಾರಿ ಪರ್ಯಟನೆ ಮಾಡುವುದು ಖಂಡಿತ ಎನ್ನುತ್ತಾರೆ.

    ಶಿವಕುಮಾರ್ ರಕ್ತದಾನಕ್ಕಷ್ಟೇ ಸೀಮಿತವಾಗಿರದೇ ತನ್ನ ಕಣ್ಣ ಹಾಗೂ ದೇಹವನ್ನು ಮರಣೋತ್ತರ ದಾನ ಮಾಡಲು ನಿರ್ಧರಿಸಿದ್ದಾರೆ. ಇತರರಿಗೂ ಪ್ರೇರೆಪಿಸಿ ಒಂದು ಜೀವವನ್ನು ಉಳಿಸಿದ್ದಾರೆ. ದಾವಣಗೆರೆಯಲ್ಲಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಶಿವಕುಮಾರ್ ಈವರೆಗೆ ಸಾವಿರಾರು ಕಾರ್ಯಕ್ರಮಗಳಲ್ಲಿ ರಕ್ತದಾನದ ಬಗೆಗಿನ ಅರಿವು ಮೂಡಿಸುತ್ತಾ ಬಂದಿದ್ದು, ರಕ್ತಕ್ಕಾಗಿಯೇ ಬದುಕು ಎಂಬ ಅವರ ಸಮರ್ಪಣ ಭಾವ ಮಾತ್ರ ಮೆಚ್ಚುವಂತದ್ದು.

    Blood
    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

    01/01/2023
    Leave A Reply Cancel Reply

    three × 5 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.