ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

Call us

Call us

Call us

ಚೈತ್ರ ರಾಜೇಶ್ ಕೋಟ | ಕುಂದಾಪ್ರ ಡಾಟ್ ಕಾಂ ಲೇಖನ.
ವಿಭಿನ್ನ ರೂಪ, ಜ್ಞಾನಧಾರೆಯ ಸ್ವರೂಪ, ಬುದ್ದಿವಂತ ಗಣಪ. ವಿಘ್ನಗಳನ್ನು ನಿವಾರಿಸೋ ವಿನಾಯಕ, ನಮ್ಮೆಲ್ಲರ ಆರಾಧ್ಯ ದೇವ ಗಣನಾಯಕ. ಗಣಪತಿ ಎಂದ ತಕ್ಷಣ ನೆನಪಾಗುವುದೇ ಅವನ ರೂಪ. ಇವನ ಈ ರೂಪದಲ್ಲೂ, ಗುಣದಲ್ಲೂ ನಾವು ಕಲಿಯಬೇಕಾದ ಪಾಠಗಳು ಬಹಳ.

Call us

Click Here

ಆನೆಯ ತಲೆ ಧರಿಸಿರುವ ಗಜಾನನ, ಆನೆಗಳು ದಟ್ಟವಾದ ಕಾಡಿನಲ್ಲಿ ಮತ್ತು ಮರದ ಸಾಲಿರುವ ದಾರಿಯಲ್ಲಿ ನಡೆಯುವುದರಿಂದ ಇತರೆ ಪ್ರಾಣಿಗಳಿಗೂ ದಾರಿಯನ್ನು ಮಾಡಿಕೊಡುತ್ತದೆ. ಇದೇ ರೀತಿ ಗಜೇಂದ್ರನು ಭಕ್ತರು ನಡೆಯುವ ಮಾರ್ಗದಲ್ಲಿರುವ ಎಲ್ಲಾ ಅಡೆ-ತಡೆಗಳನ್ನು, ವಿಘ್ನಗಳನ್ನು ದೂರ ಮಾಡುವ. ಗಣೇಶನ ದೊಡ್ಡ ತಲೆಯು ಬುದ್ದಿವಂತಿಕೆ ಮತ್ತು ದೊಡ್ಡದಾದ ಆಲೋಚನಾ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಹೀಗಾಗಿಯೇ ತಂದೆ ಈಶ್ವರನು ಮೂರು ಬಾರಿ ಪ್ರಪಂಚ ಪ್ರದಕ್ಷಿಣೆ ಮಾಡಿ ಮೊದಲಿಗರಾಗಿ ಬರಬೇಕೆಂದು ಗಣೇಶ ಮತ್ತು ಕಾರ್ತಿಕೇಯರಲ್ಲಿ ಹೇಳಿದಾಗಿ ತನ್ನ ಬುದ್ದಿವಂತಿಕೆಯಿಂದ ತನ್ನ ಮಾತಾ-ಪಿತರಲ್ಲಿ ಈಡೀ ಜಗತ್ತೆ ಮೈದುಂಬಿರುವಾಗ ಬೇರೆಲ್ಲೂ ಹೋಗಬೇಕಾದ ಅವಶ್ಯಕತೆ ಇಲ್ಲವೆಂದು ಇವರಿಗೆ ಮೂರು ಸುತ್ತು ಬಂದು, ಪ್ರಥಮ ಪೂಜೆಯ ಒಡೆಯನಾದ.

ಶೂರ್ಪಕರ್ಣನ ಅಗಲವಾದ ಕಿವಿಗಳು ವಿವೇಕದ ಸಂಕೇತವಾಗಿದ್ದು, ಹೆಚ್ಚು ಕೇಳಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು ಎನ್ನುವ ಅರಿವನ್ನು ಮೂಡಿಸುತ್ತದೆ. ಎಲ್ಲರನ್ನೂ ಸದಾ ಆಕರ್ಷಿಸುವ ಹೇರಂಬನ ಸೊಂಡಿಲು ಎಲ್ಲರೂ ಸದಾ ಕ್ರಿಯಾಶೀಲರಾಗಿರಬೇಕು ಎನ್ನುತ್ತದೆ. ಎಲ್ಲಾ ಸನ್ನಿವೇಶಗಳಿಗೂ ಹೊಂದಿಕೊಳ್ಳಬೇಕು, ಸಂದರ್ಭಕ್ಕನುಗುಣವಾಗಿ ಹೊಂದಿಕೊಂಡರೆ ಗೆಲುವು ನಮ್ಮದೇ ಎಂಬುವುದರ ದ್ಯೋತಕವಾಗಿದೆ. ವಕ್ರತುಂಡನ ಏಕದಂತವು ಒಂದೇ ಮನಸ್ಸಿನ್ನಿಂದ ಕೆಲಸ ಮಾಡಬೇಕು. ಹೀಗೆ ಏಕ ಚಿತ್ತದಿಂದ ಮಾಡಿದ ಕೆಲಸವು ಬೇಗ ಸಿದ್ದಿಸುತ್ತದೆ ಎನ್ನುವುದ್ದನ್ನು ಶ್ರೀ ಸಿದ್ದಿವಿನಾಯಕನ ಏಕದಂತವ ನೋಡಿ ಕಲಿಯಬಹುದು. ಇಲಿಯು ಕೋಪ, ಅಹಂಕಾರದಂತಹ ಕೆಟ್ಟ ಗುಣಗಳನ್ನು ಸೂಚಿಸುತ್ತದೆ. ಕೆಟ್ಟ ಗುಣಗಳನ್ನು ಗಣೇಶನು ತಡೆದು ಇಲಿಯ ಮೇಲೆ ಸವಾರಿ ಮಾಡುತ್ತಾನೆ. ಅಂದರೆ ಕೆಟ್ಟ ಗುಣಗಳು ಎಂದಿಗೂ ನಮ್ಮಿಂದ ಮೇಲೆ ಏರಬಾರದು ನಮ್ಮ ಕೆಳಗಿದ್ದಷ್ಟು ನಾವು ಮುಂದೆ ಹೋಗಲು ಸಾಧ್ಯ ಎನ್ನುವ ಸಕಾರಾತ್ಮಕ ಚಿಂತನೆಯನ್ನು ಮಾಡಬಹುದು.

ಗಣೇಶ್ವರನ ಒಂದೊಂದು ರೂಪದಿಂದಲೂ ಒಂದೊಂದು ಅಂಶ ಕಲಿಯಬಹುದಾಗಿದೆ. ನಮ್ಮ ಕರ್ತವ್ಯ ಮೊದಲು ಎಂದು ಹೇಳಿದ್ದು ವಿನಾಯಕನೇ, ತಾಯಿ ಸ್ನಾನಕ್ಕೆಂದು ಹೋದಾಗ ತನಗೆ ನೀಡಿದ ಕರ್ತವ್ಯವನ್ನು ಪಾಲಿಸಲು ಜೀವವನ್ನೂ ಲೆಕ್ಕಿಸದೇ ತಂದೆಯೊಂದಿಗೆ ಯುದ್ದಕ್ಕೆ ಮುಂದಾಗುತ್ತಾನೆ. ಕೈಗೆತ್ತಿಕೊಂಡ ಕೆಲಸ ಪೂರ್ತಿಗೊಳಿಸದೇ ಬಿಡಬಾರದೆಂಬ ಪಾಠವನ್ನು ಗಣೇಶನು ಮಹಾಭಾರತವನ್ನು ಎಲ್ಲಿಯೂ ನಿಲ್ಲಿಸದೇ ನಿರರ್ಗಳವಾಗಿ ಬರೆದು ಪೂರ್ತಿಗೊಳಿಸಿದ.

ಹೀಗೆ ಗಣೇಶನ ರೂಪದ ಜೊತೆಗೆ ಗಣಪನ ಜೀವನದ ಅದೆಷ್ಟೋ ಕಥೆಗಳು ನಮ್ಮ ಜೀವನದ ಕಥೆಗೆ ಪಾಠವಾಗುತ್ತದೆ. ಗಣೇಶನ ಮಹಿಮೆ ಎಂದಿಗೂ ಅಪಾರ.

Click here

Click here

Click here

Click Here

Call us

Call us

Leave a Reply