ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಅ.09: ಜಿಲ್ಲಾದ್ಯಂತ ವಿಪರಿತ ಮಳೆ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಅಗಸ್ಟ್ 10ರ ಶನಿವಾರವೂ ಶಾಲಾ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ರಜೆ ಘೋಷಿಸಿದ್ದಾರೆ. ಒಟ್ಟು ಮೂರು ದಿನಗಳ ಕಾಲ ನಿರಂತರ ರಜೆ ನೀಡಿದಂತಾಗಿದೆ.
ವಿಪರೀತ ಮಳೆ ಹಾಗೂ ಗಾಳಿಯ ಮುನ್ಸೂಚನೆ ಇರುವುದರಿಂದ ಮುಂದಿನ ಎರಡು ದಿನ ಸುಮಾರು 205ಮಿ.ಮಿ ಮಳೆಯಾಗುವ ಬಗ್ಗೆ ಮನ್ಸೂಚನೆಯನ್ನು ಹವಮಾನ ಇಲಾಖೆ ನೀಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರು ರಜೆ ನಿರ್ಧಾರವನ್ನು ಕೈಗೊಂಡಿದ್ದಾರೆ.
ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ/ಖಾಸಗಿ ಪ್ರಾಥಮಿಕ ಶಾಲೆ, ಪೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಇರಲಿದೆ.











1 Comment
Ya .. the rain fall is really very heavy since 3 days……
???