Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಂಗೀತ ಗುರುದಂಪತಿ ಪ್ರತಿಮಾ ಭಟ್, ಸತೀಶ ಭಟ್ ಅವರಿಗೆ ಗುರುವಂದನೆ
    ಊರ್ಮನೆ ಸಮಾಚಾರ

    ಸಂಗೀತ ಗುರುದಂಪತಿ ಪ್ರತಿಮಾ ಭಟ್, ಸತೀಶ ಭಟ್ ಅವರಿಗೆ ಗುರುವಂದನೆ

    Updated:07/08/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಸಂಗೀತ ಮತ್ತು ಸಾಹಿತ್ಯ ನಮ್ಮನ್ನು ಮೂರ್ತ ಪ್ರಪಂಚದಿಂದ ಅಮೂರ್ತದೆಡೆಗೆ ಒಯ್ಯುವ ಮಾಧ್ಯಮಗಳು. ಸಂಗೀತ ಹ್ಲದಯವು ನಾದದೊಂದಿಗೆ ನಡೆಸುವ ಸಂವಾದ. ಅದು ನಮಗೆ ಸಂಸ್ಕಾರ ನೀಡುತ್ತದೆ ಎಂದು ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಾಧ್ಯಾಪಕಿ, ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು.

    Click Here

    Call us

    Click Here

    ಕುಂದಾಪುರದ ಗುರುಪರಂಪರಾ ಸಂಗೀತ ಸಭಾ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಸಭಾಭವನದಲ್ಲಿ ಭಾನುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಯಾಂತ್ರಿಕವಾಗುತ್ತಿರುವ ಬದುಕಿಗೆ ಸಂಗೀತದಂತಹ ಕಲೆಗಳ ಕಲಿಕೆ ಮತ್ತು ಆಸ್ವಾದನ, ರಸ-ಭಾವ ಅನುಭವದ ಮಾಂತ್ರಿಕ ಸ್ಪರ್ಷ ನೀಡಿ ಬದುಕನ್ನು ಸಂತಸಮಯವಾಗಿ ಮಾಡುತ್ತದೆ ಎಂದು ಅವರು ಹೇಳಿದರು.

    ವಿಶೇಷ ಅಥಿತಿಯಾಗಿ ಆಗಮಿಸಿದ್ದ ಖ್ಯಾತ ಹಾರ್ಮೋನಿಯಂ ವಾದಕ ಸುಧೀರ್ ನಾಯಕ್ ಮಾತನಾಡಿ ಸಂಗೀತವು ಪರಿಶ್ರಮ ಬೇಡುವ ಕಲೆ. ಅದರ ಕಲಿಕೆಯಲ್ಲಿ ಗುರು-ಶಿಷ್ಯ ಸಂಬಂಧ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಕಲಿಕೆ ಫಲಪ್ರದವಾಗಬೇಕಾದರೆ ಸಂಗೀತದ ನಿರಂತರ ಅಭ್ಯಾಸ ಮತ್ತು ಶ್ರವಣ ನಡೆಯಬೇಕು. ಸಂಗೀತ ವ್ಯಕ್ತಿತ್ವವನ್ನು ಹದಗೊಳಿಸುತ್ತದೆ ಎಂದು ಹೇಳಿದರು.

    ಭಟ್ ದಂಪತಿಯ ಶಿಷ್ಯರು ಗುರುಗಳನ್ನು ಪೂಜಿಸಿ, ಸನ್ಮಾನಿಸಿದರು. ಚಂದ್ರಿಕಾ ಧನ್ಯ ಸ್ವಾಗತಿಸಿದರು. ಪೋಷಕರಾದ ಭಾಗ್ಯಲಕ್ಷ್ಮೀ ವೈದ್ಯ, ವಿದ್ಯಾರ್ಥಿಗಳಾದ ಪೂರ್ಣಿಮಾ ಬೈಂದೂರು, ಸಂಕಲ್ಪಕುಮಾರ್, ಕೇದಾರ ಮರವಂತೆ ಅನುಭವ ಹಂಚಿಕೊಂಡರು. ನೇಹಾ ಹೊಳ್ಳ ವಂದಿಸಿದರು. ಸಂಧ್ಯಾ ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಗೋವಿಂದ ಅಡಿಗ ಇದ್ದರು.

    Click here

    Click here

    Click here

    Click Here

    Call us

    Call us

    ಬೆಳಗ್ಗಿನಿಂದ ಸಂಜೆ ತನಕ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನುಷಾ, ವೇದಿಕಾ ಪಡಿಯಾರ್, ಪಂಚಮಿ ವೈದ್ಯ, ವೀಣಾ ನಾಯಕ್, ಜ್ಯೋತಿ ಭಟ್, ಸಾತ್ಯಕಿ, ಅದಿತಿ ಭಂಡಾರ್‌ಕಾರ್, ಕೇದಾರ ಮರವಂತೆ, ಜಾಹ್ನವಿ ಪ್ರಭು, ಪೂರ್ಣಿಮಾ, ಮೇದಿನಿ, ಚಿನ್ಮಯಿ ಧನ್ಯ, ಶ್ವೇತಾ, ಸಭ್ಯಾ, ಸಂಕಲ್ಪಕುಮಾರ್, ನಾಗರಾಜ ಭಟ್, ಸಂಜನಾ, ಈಶ್ವರಿ, ಚಿಂತನಾ ಧನ್ಯ, ಶಮಾ ಸೋಮಯಾಜಿ, ನೇಹಾ ಹೊಳ್ಳ ಹಿಂದುಸ್ಥಾನಿ ಸಂಗೀತದ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದರು. ಶಶಿಕಿರಣ್ ಮಣಿಪಾಲ, ವಿಘ್ನೇಶ ಕಾಮತ್, ಪ್ರಸಾದ್ ಕಾಮತ್, ಶ್ರೀಧರ ಭಟ್ ಮತ್ತು ಗುರುದಂಪತಿ ಹಾರ್ಮೋನಿಯಂ, ತಬಲಾ ಸಾಥ್ ನೀಡಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಹುಂಡಿಗೆ ಮೇ ತಿಂಗಳಲ್ಲಿ 1.94 ಕೋಟಿ ಕಾಣಿಕೆ

    27/05/2026

    ಕುಡಿತದ ಚಟವಿದ್ದ ವ್ಯಕ್ತಿ ಸಾವು

    27/05/2026

    ಮೀನುಗಾರಿಕೆ ಸಮಯದಲ್ಲಿ ಅತ್ಯಂತ ಜಾಗರೂಕರಾಗಿದ್ದುಕೊಂಡು ಎಲ್ಲಾ ಸುರಕ್ಷತಾ ಕ್ರಮ ಅನುಸರಿಸಿ: ಶಾಸಕ ಗಂಟಿಹೊಳೆ

    27/05/2026
    Leave A Reply Cancel Reply

    ten + 6 =

    Call us

    Click Here

    Call us

    Call us

    Call us
    Highest Viewed Recently
    • ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಹುಂಡಿಗೆ ಮೇ ತಿಂಗಳಲ್ಲಿ 1.94 ಕೋಟಿ ಕಾಣಿಕೆ
    • ಕುಡಿತದ ಚಟವಿದ್ದ ವ್ಯಕ್ತಿ ಸಾವು
    • ಮೀನುಗಾರಿಕೆ ಸಮಯದಲ್ಲಿ ಅತ್ಯಂತ ಜಾಗರೂಕರಾಗಿದ್ದುಕೊಂಡು ಎಲ್ಲಾ ಸುರಕ್ಷತಾ ಕ್ರಮ ಅನುಸರಿಸಿ: ಶಾಸಕ ಗಂಟಿಹೊಳೆ
    • ಬೈಂದೂರು ಸೈಂಟ್ ಥಾಮಸ್ ಶಾಲೆಯಲ್ಲಿ ಶಿಕ್ಷಕರ ಕೌಶಲ್ಯ ವೃದ್ಧಿಗೆ ಸಿಬಿಎಸ್ಇ ತರಬೇತಿ ಕಾರ್ಯಕ್ರಮ
    • ಆಂತರಿಕ ದೂರು ಸಮಿತಿಗಳು ಕಡ್ಡಾಯವಾಗಿ ರಚಿಸಿ, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ: ಡಾ. ನಾಗಲಕ್ಷ್ಮಿ ಚೌಧರಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.