ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟಿಪ್ಪರ್ ಚಾಲಕನಾಗಿದ್ದ ಕಂದಾವರ ಗ್ರಾಮದ ಕೃಷ್ಣಮೂರ್ತಿ (29) ಅವರು ಕಂಡೂರು ಬಳಿ ಸ್ಕೂಟಿ ನಿಲ್ಲಿಸಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಜು. 31ರ ರಾತ್ರಿ ಅಳಿಯ ಕಾರ್ತಿಕ್‌ಗೆ ಕರೆಮಾಡಿ “ನಾನು ಇಲ್ಲವಾದರೆ ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೋ’ ಎಂದು ಹೇಳಿ ಕರೆ ಕಡಿತ ಮಾಡಿದ್ದರು. ಅನಂತರ ಮತ್ತೆ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ತಕ್ಷಣ ಕಾರ್ತಿಕ್ ಮನೆಯವರಿಗೆ ವಿಷಯ ತಿಳಿಸಿ ಹುಡುಕಾಡಿದಾಗ ಅವರ ಸ್ಕೂಟಿ ಕಂಡೂರು ಸೇತುವೆ ಬಳಿ ಪತ್ತೆಯಾಗಿದೆ.
ಫೆ. 1ರ ಮಧ್ಯಾಹ್ನ ಮೃತದೇಹ ಕಂಡೂರು ಸೇತುವೆಯ ಅಡಿಭಾಗದಲ್ಲಿ ಪತ್ತೆಯಾಗಿದೆ. ಸಹೋದರ ಶ್ರೀಕಾಂತ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










