ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಸಿದ್ದಾಪುರ ಗ್ರಾಮದ ಸುಪ್ರೀತ್ ಕಾಮತ್ ಅವರ ಪತ್ನಿ ಕಾವ್ಯಾ (27) ಅವರು ಫೆ. 5ರಂದು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾವಾಡಿ ಗ್ರಾಮ ಉಮೇಶ್ ಅವರ ಪುತ್ರಿ ಕಾವ್ಯಾ ಅವರು ಸಿದ್ದಾಪುರ ಕೆಳಪೇಟೆಯ ವೆಂಕಟೇಶ ಕಾಮತ್ ಅವರ ಪುತ್ರ ಸುಪ್ರೀತ್ ಕಾಮತ್ ಅವರೊಂದಿಗೆ 2023ರಲ್ಲಿ ವಿವಾಹವಾಗಿದ್ದರು. ಸುಪ್ರೀತ್ ಕಾಮತ್ ಹೆಸ್ಕೂತ್ತೂರು ಪ್ರೌಢಶಾಲೆಯಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ 10 ತಿಂಗಳ ಹೆಣ್ಣು ಮಗು ಇದೆ. ಪತಿ ಸುಪ್ರೀತ್ ಕಾಮತ್ ಹಾಗೂ ಅತ್ತೆ ಆಶಾ ಕಾಮತ್ ಅವರೊಂದಿಗೆ ಸಿದ್ದಾಪುರದ ಮನೆಯಲ್ಲಿ ಕಾವ್ಯಾ ವಾಸವಾಗಿದ್ದರು.
ಫೆ. 5ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತನ್ನ 10 ತಿಂಗಳ ಹೆಣ್ಣು ಮಗುವನ್ನು ಬಿಟ್ಟು, ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಾವ್ಯಾ ಅವರು ತನ್ನ ಸಹೋದರನಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










