ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್‌ನಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕವಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೆಚ್ಚುವರಿಯಾಗಿ ಆರಂಭವಾದ ಕಿರಿಯ ಪ್ರಾಥಮಿಕ ವಿಭಾಗಗಳ ವಿದ್ಯಾರ್ಥಿಗಳ ಹೊಸ ಬ್ಲಾಕ್‌ಗೆ ಸತೀಶ್ ಪೂಜಾರಿ ಹಾಗೂ ರಾಧಿಕಾ ಪೂಜಾರಿ ಅವರು ಕುಡಿಯುವ ನೀರಿನ ಘಟಕವನ್ನು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
ಕೊಡುಗೆಯನ್ನು ಸ್ವೀಕರಿಸಿದ ಆಡಳಿತ ನಿರ್ದೇಶಕರಾದ ರೆನಿಟಾ ಲೋಬೋ ಅವರು ದಾನಿಗಳಿಗೆ ಕೃತಜ್ಞತಾ ಪೂರ್ವಕ ಮಾತುಗಳ ಮೂಲಕ ಧನ್ಯವಾದ ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಮಮತಾ ಪೂಜಾರಿ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ದಾನಿಗಳಿಗೆ ಶುಭ ಹಾರೈಸಿದರು. ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮವು ಯಶಸ್ವಿಗೊಂಡಿತು.










