ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೆದೂರು ಸರಕಾರಿ ಪ್ರೌಢಶಾಲೆ ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್ ನ ಪದಪ್ರದಾನ ಸಮಾರಂಭ ಇತ್ತೀಚಿಗೆ ನೆರವೇರಿತು.
ರೋಟರಿ ಕ್ಲಬ್ ನ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಇಂಟರ್ಯಾಕ್ಟ್ ನ ನೂತನ ಆಧ್ಯಕ್ಷರಾದ ರಶ್ವಿತಾ ಮತ್ತು ಕಾರ್ಯದರ್ಶಿ ಭವಿಷ್ ಅವರು ಪದ ಪ್ರದಾನ ನೆರವೇರಿಸಿ ಕೊಟ್ಟು ಮಾತನಾಡಿ, ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜ ಸೇವೆಯ ಕನಸು ಕಾಣಬೇಕು ಎಂದರು.
ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ರಂಜಿತ್ ಕುಮಾರ್ ಶೆಟ್ಟಿ ಮಾತನಾಡಿ, ರೋಟರಿ ಕ್ಲಬ್ ಮತ್ತು ಇಂಟರ್ಯಾಕ್ಟ್ ಕ್ಲಬ್ ನ ಇತಿಹಾಸ ಹಾಗೂ ಉದ್ದೇಶಗಳನ್ನು ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಬಂದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿ ಕ್ಲಬ್ ನ ಕಾರ್ಯದರ್ಶಿ ಸುಕುಮಾರ್ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಇಂಟರ‍್ಯಾಕ್ಟ್ ಸಭಾಪತಿ ನಿರಂಜನ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಉದಯ್ ಶೆಟ್ಟಿ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಗೀತಾ ಎಂ. ಶುಭ ಹಾರೈಸಿದರು.
ಇಂಟರ‍್ಯಾಕ್ಟ್ ಸಂಯೋಜಕ ಶಿಕ್ಷಕರಾದ ರಮೇಶ್ ಕುಲಾಲ್ ಎನ್. ಕಾರ್ಯಕ್ರಮ ನಿರೂಪಿಸಿ, ಸೌಭಾಗ್ಯ ಸ್ವಾಗತಿಸಿ, ಭವ್ಯಶ್ರೀ ವರದಿ ವಾಚಿಸಿ, ಅನುದೀಪ್ ವಂದಿಸಿದರು.















