ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಕ್ಷೇತ್ರ ಸಾಸ್ತಾನದ ಪಾಂಡೇಶ್ವರ ಕಳಿಬೈಲ್‌ನಲ್ಲಿ ಕೊರಗ ಜಾನಂಗದಲ್ಲಿ ಸಂಪ್ರದಾಯಕ ಡೋಲುವಾದಿಸುವ ಸ್ವಾಮಿ ತನಿಯ ಸಾಸ್ತಾನ ಬಳಗಕ್ಕೆ ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಲಾಯಿತು.
ಸಮವಸ್ತ್ರವನ್ನು ವರಾಹ ಕೇಟರಿಂಗ್ ಪಾಂಡೇಶ್ವರದಿಂದ ದಿನೇಶ್ ಬಾಂಧವ್ಯ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತ್ತಲ್ಲದೆ ರಕ್ತದಾನ ಜಾಗ್ರತೆ ಸಂದೇಶವಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಶ್ರೀಶ ಉಪಾಧ್ಯ ಹಂಗಾರಕಟ್ಟೆ, ಕೌಶಿಕ್ ಕುಮಾರ್ ಡಿ.ಎಸ್ ಮೈಸೂರ್, ಕಳಿಬೈಲ್‌ನ ಧರ್ಮದರ್ಶಿ ಅಭಿಜಿತ್, ನವೀನ್ ಪಾತ್ರಿ ಕುಂಜಿಬೆಟ್ಟು, ,ಎಂ ಸಿ ಚಂದ್ರಶೇಖರ್, ಸುದರ್ಶನ್ ಪೂಜಾರಿ, ದಿನೇಶ್ ಪಾಂಡೇಶ್ವರ ಮತ್ತಿತ್ತರು ಉಪಸ್ಥಿತರಿದ್ದರು.. ಸಮವಸ್ತ್ರವನ್ನು ಸ್ವಾಮಿ ತನಿಯ ಬಳಗದ ಮುಖ್ಯಸ್ಥ ಶೇಖರ್ ಸಾಸ್ತಾನ ಮತ್ತು ಕೃಷ್ಣ ನಿರಾಡಿಜೆಡ್ದುರವರು ಸಮವಸ್ತ್ರವನ್ನು ಸ್ವೀಕರಿಸಿದರು.










