ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಮೊಗವೀರ ಯುವ ಸಂಘಟನೆ ರಿ. ಹಾಲಾಡಿ – ಶಂಕರನಾರಾಯಣ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ, ರಕ್ತನಿಧಿ ವಿಭಾಗ ಕೆ.ಎಮ್.ಸಿ. ಮಣಿಪಾಲ ಮತ್ತು ಜಿಲ್ಲಾಡಳಿತ ಉಡುಪಿ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಹಾಲಾಡಿ – ಬಿದ್ಕಲ್‌ಕಟ್ಟೆ, ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ –ಹುಣ್ಸೆಮಕ್ಕಿ, ನಾಗಲಕ್ಷ್ಮೀ ಭಜನಾ ಮಂಡಳಿ ಬಿದ್ಕಲ್‌ಕಟ್ಟೆ, ಹಳೆ ವಿದ್ಯಾರ್ಥಿಗಳ ಸಂಘ KPS ಬಿದ್ಕಲ್‌ಕಟ್ಟೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೊಳಹಳ್ಳಿ ಮತ್ತು ಬಿದ್ಕಲ್‌ಕಟ್ಟೆ, ರಿಕ್ಷಾ ಮತ್ತು ಟ್ಯಾಕ್ಸಿ ಮಾಲಕರು ಹಾಗೂ ಚಾಲಕರು ಬಿದ್ಕಲ್‌ಕಟ್ಟೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆದಿತ್ಯವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್‌ಕಟ್ಟೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಹಾಲಾಡಿ ಶಂಕರನಾರಾಯಣ ಘಟಕದ ಅಧ್ಯಕ್ಷರು ಶರತ್ ಸೌಡ, ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರಾದ ಅಶೋಕ್ ತೆಕ್ಕಟ್ಟೆ, ಲಯನ್ಸ್ ಕ್ಲಬ್ ಹಾಲಾಡಿ-ಬಿದ್ಕಲ್‌ಕಟ್ಟೆ ಅಧ್ಯಕ್ಷರಾದ ಗೌತಮ್ ಶೆಟ್ಟಿ, ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ -ಹುಣ್ಸೆಮಕ್ಕಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, ನಾಗಲಕ್ಷ್ಮೀ ಭಜನಾ ಮಂಡಳಿ ಬಿದ್ಕಲ್‌ಕಟ್ಟೆಯ ಪವಿತ್ರ ಅಡಿಗ, ಹಳೆ ವಿದ್ಯಾರ್ಥಿಗಳ ಸಂಘ KPS ಬಿದ್ಕಲ್‌ಕಟ್ಟೆ ಅಧ್ಯಕ್ಷರಾದ ದಿನಪಾಲ್ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಿದ್ಕಲ್‌ಕಟ್ಟೆ ಅಧ್ಯಕ್ಷರಾದ ಪ್ರಶಾಂತ್ ಎಂಜಿನಿಯರ್ ಬಾಸ್ ಬೈಲು ಮತ್ತು ಮೊಳಹಳ್ಳಿಯ ವಸಂತ್ ಭಂಡಾರಿ, ರಿಕ್ಷಾ ಮತ್ತು ಟ್ಯಾಕ್ಸಿ ಮಾಲಕರು ಹಾಗೂ ಚಾಲಕರು ಬಿದ್ಕಲ್‌ಕಟ್ಟೆ ಅಧ್ಯಕ್ಷರಾದ ಕೃಷ್ಣ ಮೂರ್ತಿ ಕಾಂಚನ್, ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಶೇಖರ್ ತೋಳಾರ್, ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಗಣೇಶ್ ಕಾಂಚನ್, ನಮ್ಮ ಘಟಕದ ಗೌರಾಧ್ಯಕ್ಷರಾದ ರಘುರಾಮ್ ಎಂ. ಹುಣ್ಸೆಮಕ್ಕಿ, ಮಾಜಿ ಅಧ್ಯಕ್ಷ ರಾಘವೇಂದ್ರ ಶಂಕರನಾರಾಯಣ, ಕಾರ್ಯದರ್ಶಿ ರಂಜಿತ್ ಬೈಲೂರು ಹಾಗೆಯೇ ವಿವಿಧ ಸಂಘ ಸಂಸ್ಥೆಗಳ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.
53 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮವನ್ನು ಜಗದೀಶ್ ಬಿದ್ಕಲ್‌ಕಟ್ಟೆ ನಿರೂಪಿಸಿದರು.











