ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘ ನಿ. ಕೋಡಿ ಕನ್ಯಾಣ ಇದರ ಐದನೇ ವಾರ್ಷಿಕ ಸಾಮಾನ್ಯ ಸಭೆ ಮಾರಿಕಾಂಬ ದೇಗುಲದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೃಷ್ಣ ಕೆ. ವಹಿಸಿದ್ದರು. ಸಂಘವು ವರದಿ ವರ್ಷದಲ್ಲಿ 10,33,194 ರೂ ಲಾಭವನ್ನು ಗಳಿಸಿದ್ದು ಸದಸ್ಯರಿಗೆ ಶೇಕಡಾ 9.5 ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರಾದ ಕೃಷ್ಣ ಕೆ ಘೋಷಿಸಿದರು.
ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಮತ್ತು ಕಲಾ ಕ್ಷೇತ್ರಗದಲ್ಲಿ ಸಾಧನೆಗೈದ ಸಾಧಕರಾದ ವಿಜಯ್ ನಾಯರಿ, ರಾಜೇಶ್ ಎನ್ ಕರ್ಕೇರ, ಸತೀಶ್ ಖಾರ್ವಿ ಹಾಗೂ ಪ್ರಕಾಶ್ ಖಾರ್ವಿ ಅವರುಗಳನ್ನು ಸನ್ಮಾನಿಸಲಾಯಿತು.
ಅಶಕ್ತರಿಗೆ ಸಹಾಯಧನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಅರುಣ ಜಿ. ಕುಂದರ್ ಹಾಗೂ ನಿರ್ದೇಶಕರುಗಳಾದ ಪ್ರಭಾಕರ ಎನ್. ಬಂಗೇರ, ಹರ್ಷ ಕೆ.ಬಿ., ಶುಭಕರ ಕುಂದರ್, ಸುಧಾಕರ ಎಸ್. ಕಾಂಚನ್, ದಿನೇಶ್ ಪೂಜಾರಿ, ಸುಜಾತ ಎಸ್., ಪುಷ್ಪಲತಾ ಎಸ್. ಸುವರ್ಣ, ಗುಲಾಬಿ ಹಾಗೂ ಸಹಕಾರಿಯ ಕಾನೂನು ಸಲಹೆಗಾರರಾದ ಹರ್ಷರಾಜ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿತೀಶ್ ಕುಮಾರ್ .ಎಸ್ ವಾರ್ಷಿಕ ವರದಿಯನ್ನು ಮಂಡಿಸಿದರು. ಸ್ವಾತಿ ಸ್ವಾಗತಿಸಿ, ಮಮತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
















