ಕುಂದಾಪ್ರ ಡಾಟ್ ಕಾಂಸ ಉದ್ದಿ.
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಇತ್ತೀಚಿಗೆ ಜರಗಿತು.

ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೆರೆದ ಪರಿಸರದ ಗರ್ಭಿಣಿಯರು, ಬಾಣಂತಿಯರನ್ನು ಉದ್ದೇಶಿಸಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್ ಮಾತನಾಡಿ, ನವಜಾತ ಶಿಶುವಿಗೆ ತಾಯಿಯ ಎದೆಹಾಲು ಅಮೃತ ಸಮಾನ, ಹೆರಿಗೆಯಾದ ಒಂದು ಗಂಟೆಯ ಒಳಗೆ ನೀಡುವ ಎದೆ ಹಾಲಿನಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು. ಗರ್ಭಿಣಿ ಹಾಗೂ ಬಾಣಂತಿಯರಿಗೆ ಆರೋಗ್ಯ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ನೆರೆದಿದ್ದ ಎಲ್ಲಾ ತಾಯಂದಿರಿಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವತಿಯಿಂದ ಪೌಷ್ಟಿಕ ಆಹಾರವನ್ನು ವಿತರಿಸಲಾಯಿತು. ಸಮಾರಂಭವನ್ನು ರೋಟರಿ ಅಧ್ಯಕ್ಷೆ ಕುಸುಮಾ ಮನೋಜ್ ಉದ್ಘಾಟಿಸಿ, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಶಿಶುವಿಗೆ ಹಾಲುಣಿಸುವಾಗ ತಾಯಂದಿರು ವಹಿಸಬೇಕಾದ ಎಚ್ಚರಿಕೆ ಕುರಿತು ಜಾಗೃತಿ ಕರಪತ್ರ ಬಿಡುಗಡೆ ಮಾಡಲಾಯಿತು.
ರೋಟರಿ ಸದಸ್ಯರುಗಳಾದ ವಿಘ್ನೇಶ್ವರ ಅಡಿಗ, ಅರವಿಂದ ಶಮ೯, ಮನೋಜ್ ಕುಮಾರ್, ಸುಲತಾ ಎಸ್ ಹೆಗ್ಡೆ, ಜ್ಯೋತಿ ಉದಯ್ ಕುಮಾರ್, ಅಮಿತಾ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.
ರೋಟರಿ ಕಾರ್ಯದರ್ಶಿ ರಾಜಾರಾಮ ಐತಾಳ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಹರಿಶ್ಚಂದ್ರ ನಿರೂಪಿಸಿದರು. ಸುರಕ್ಷಾಧಿಕಾರಿ ಹೇಮಾವತಿ ವಂದಿಸಿದರು.
















