Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮಿಶ್ರತಳಿ ಹಾಲಿನ ಉತ್ಪನ್ನಗಳಿಗೂ ದೇಶಿ ಗೋವಿನ ಉತ್ಪನ್ನಗಳಿಗೂ ವ್ಯತ್ಯಾಸವಿದೆ: ಶ್ರೀ ರಾಘವೇಶ್ವರ
    ಊರ್ಮನೆ ಸಮಾಚಾರ

    ಮಿಶ್ರತಳಿ ಹಾಲಿನ ಉತ್ಪನ್ನಗಳಿಗೂ ದೇಶಿ ಗೋವಿನ ಉತ್ಪನ್ನಗಳಿಗೂ ವ್ಯತ್ಯಾಸವಿದೆ: ಶ್ರೀ ರಾಘವೇಶ್ವರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಗೋಕರ್ಣ:
    ಈಚಲ ಮರದಲ್ಲಿ ಮಾವಿನ ಹಣ್ಣು ಬಿಡುವುದಿಲ್ಲ. ಮಾವಿನ ಮರದಲ್ಲಿ ಬಿಟ್ಟ ಹಣ್ಣಿಗಷ್ಟೇ ಮಾವಿನ ಹಣ್ಣು ಎನ್ನುವುದು. ಹಾಗೆಯೇ ದೇಶೀ ಗೋವಿನ ಹಾಲಿನಿಂದ ತಯಾರಾದ ತುಪ್ಪಕ್ಕಷ್ಟೇ ತುಪ್ಪ ಎಂದು ಹೇಳಬಹುದು. ಮೂಲದಲ್ಲಿ ಗೋವು ಇಲ್ಲದ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳು ನಕಲಿ ಎನಿಸಿಕೊಳ್ಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

    Click Here

    Call us

    Click Here

    ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ತುಪ್ಪದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಉತ್ಕೃಷ್ಟ ಮೂಲದ್ರವ್ಯ ಹಾಗೂ ಸಮರ್ಪಕವಾದ ಸಂಸ್ಕಾರದಿಂದ ಮಾತ್ರ ಶ್ರೇಷ್ಠ ತುಪ್ಪ ಲಭ್ಯವಾಗುತ್ತದೆ.

    ಹಸು ಹಾಗೂ ಎಮ್ಮೆ ಹೇಗೆ ಬೇರೆಬೇರೆಯೋ, ದೇಶಿ ಗೋವು ಹಾಗೂ ಮಿಶ್ರತಳಿ ಹಸು ಕೂಡ ಅಷ್ಟೇ ವಿಭಿನ್ನ. ಅವುಗಳು ಇಂದಿನ ವೈಜ್ಞಾನಿಕ ಪದ್ಧತಿಯಲ್ಲಿಯೂ ಸಂಪೂರ್ಣ ಭಿನ್ನವಾಗಿ ಗುರುತಿಸಲ್ಪಟ್ಟಿದೆ. ಮಿಶ್ರತಳಿಯ ಹಸುಗಳು ಮಾನವನ ಹಸ್ತಕ್ಷೇಪದ ಕಾರಣದಿಂದ ಗುಣಗಳನ್ನೇ ಕಳೆದುಕೊಂಡಿದ್ದು, ಅವುಗಳಿಂದ ಪಡೆಯುವ ಹಾಲು – ತುಪ್ಪಗಳನ್ನು ದೇಶಿ ಗೋವಿನ ಹಾಲು – ತುಪ್ಪಗಳ ಜೊತೆಗೆ ಹೋಲಿಸಲು ಆಗದು. ತುಪ್ಪಕ್ಕೆ ಹೇಳಿರು ಸದ್ಗುಣಗಳು ದೇಶಿ ಗೋತಳಿಯ ತುಪ್ಪಕ್ಕಷ್ಟೇ ಸೀಮಿತ ಎಂದರು.

     ಅನ್ನವನ್ನೋ, ಸಾರನ್ನೋ ಎರಡನೇ ಬಾರಿ ಬಿಸಿ ಮಾಡಿದರೆ ಅದು ತನ್ನ ತನವನ್ನು ಕಳೆದುಕೊಳ್ಳುತ್ತದೆ. ಆದರೆ ತುಪ್ಪದ ಸಾಮರ್ಥ್ಯ ಅಪರಿಮಿತವಾಗಿದ್ದು, ತುಪ್ಪವನ್ನು ಸಾವಿರ ಬಾರಿ ಬಿಸಿ ಮಾಡಿದರೂ ಅದು ಕೆಡುವುದಿಲ್ಲ. ಸಾವಿರ ಬಾರಿ ಪಾಕ ಮಾಡಿದಾಗ ತುಪ್ಪ ಅಪರಿಮಿತವಾದ ಶಕ್ತಿಯನ್ನು ಹೊಂದುತ್ತದೆ. ತುಪ್ಪವು ಅಗ್ನಿವರ್ಧಕವಾದರೂ ದೇಹಕ್ಕೆ ತಂಪುಂಟು ಮಾಡುತ್ತದೆ. ಒಂದೇ ಸಮಯದಲ್ಲಿ ಬೇರೆಬೇರೆ ಕಾರ್ಯಗಳನ್ನು ಮಾಡುವ ವಿಶೇಷ ಶಕ್ತಿ ತುಪ್ಪಕ್ಕಿದೆ ಎಂದು ಹೇಳಿದರು.

    ನಿಜವಾದ ತುಪ್ಪ ಜಠರಾಗ್ನಿಯನ್ನು ಉದ್ದೀಪನಗೊಳಿಸಿದರೆ, ಮಿಶ್ರತಳಿ ಹಸುವಿನ ತುಪ್ಪ ಹಾಗೂ ಸಮರ್ಪಕ ಸಂಸ್ಕಾರ ಸಿಗದೇ ನೇರವಾಗಿ ಹಾಲಿನ ಕೆನೆಯಿಂದ ತಯಾರಿಸಿದ ತುಪ್ಪ ಇದಕ್ಕೆ ವಿರುದ್ಧವಾಗಿ ಮಂದಾಗ್ನಿಗೆ ಕಾರಣವಾಗಬಹುದು. ಹೀಗೆ ನೈಜ ತುಪ್ಪದ ಪ್ರಯೋಜನಕ್ಕೂ ತುಪ್ಪದ ಹೆಸರಿನ ದ್ರವಕ್ಕೂ ಪರಿಣಾಮದಲ್ಲಿ ವ್ಯತ್ಯಾಸವಿದ್ದು, ತುಪ್ಪದ ಹೆಸರಿನ ದ್ರವ ಕೇವಲ ಕ್ಯಾಲರಿಗಳ ಪೂರೈಕೆ ಮಾತ್ರ ಸೀಮಿತವಾಗಬಹುದು ಎಂದು ಎಚ್ಚರಿಸಿದರು.

    Click here

    Click here

    Click here

    Call us

    Call us

    ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಶಿಕಾರಿಪುರ, ಸೋನಿ ಕಂಪನಿಯ ಪ್ರಮುಖರಾದ ವಿಶ್ವಾವಸು ಮರಾಠೆ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ಹೆಗಡೆ ಹೊಸಪೇಟೆ ಕುಟುಂಬದವರಿಂದ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಮೇಶ್ ಕಟ್ಟ, ಶ್ರೀರಾಮ, ದಿನಪ್ರಧಾನರಾಗಿ ಲಕ್ಷ್ಮೀಶ್ ಎನ್. ಭಟ್ ದಂಪತಿಗಳು ಉಪಸ್ಥಿತರಿದ್ದರು.

    ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
    ಶ್ರೀಮಠದ ಗುರುಪರಂಪರೆಯನ್ನು ಪಾರಂಪರಿಕವಾಗಿ ಆಶ್ರಯಿಸಿರುವ ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ನಂದಕುಮಾರ್ ಗುಡಿಗಾರ್, ವಿ.ಜಿ. ಶೇಟ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ಹಿಂದೆ ಗೋವುಗಳು ಸ್ವಾತಂತ್ರ್ಯವಾಗಿ ಸಂಚರಿಸಿ ಅಗತ್ಯ ಹುಲ್ಲನ್ನು ಮೇಯಲು ಗೋಮಾಳಗಳಿತ್ತು. ಅಂದು ಗೋಮಾಳಗಳಲ್ಲಿ ಗೋವುಗಳು ಹುಲ್ಲನ್ನು ತಿನ್ನುತ್ತಿದ್ದವು. ಆದರೆ ಇಂದು ಮನುಷ್ಯ ಗೋಮಾಳಗಳನ್ನೇ ತಿಂದು ಬಿಟ್ಟಿದ್ದಾನೆ. ಇದು ವಿಪರ್ಯಾಸ- ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ

    22/09/2026

    ಕುಂದಾಪುರ ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ಆಗ್ರಹ: ಕೆ. ವಿಕಾಸ್ ಹೆಗ್ಡೆ

    22/09/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

    22/09/2026
    Leave A Reply Cancel Reply

    9 − 4 =

    Call us

    Click Here

    Call us

    Call us

    Call us
    Highest Viewed Recently
    • ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ
    • ಮಿಶ್ರತಳಿ ಹಾಲಿನ ಉತ್ಪನ್ನಗಳಿಗೂ ದೇಶಿ ಗೋವಿನ ಉತ್ಪನ್ನಗಳಿಗೂ ವ್ಯತ್ಯಾಸವಿದೆ: ಶ್ರೀ ರಾಘವೇಶ್ವರ
    • ಕುಂದಾಪುರ ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಲು ಆಗ್ರಹ: ಕೆ. ವಿಕಾಸ್ ಹೆಗ್ಡೆ
    • ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಪೂರ್ವಭಾವಿ ಸಭೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.