ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸುದೀರ್ಘ 30 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಉಳ್ತೂರು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶ್ರೀ ಚಂದ್ರಶೇಖರ್ ಶೆಟ್ಟಿ ಮಾಲಾಡಿ ಅವರನ್ನು ಲಯನ್ಸ್ ಕ್ಲಬ್ ತೆಕ್ಕಟ್ಟೆಯ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರ ಶಿಕ್ಷಕ ಸೇವೆಯ ಬಗ್ಗೆ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸೀತಾರಾಮ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು.
ಲಯನ್ ಶಂಕರ್ ಶೆಟ್ಟಿ ಬವಲಾಡಿ ಶ್ರೀಯುತರು ಉಳ್ತೂರು ಶಾಲೆಯ ಬಗೆಗಿನ ಅವರ ಕಾಳಜಿ ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿರುವ ಶಿಸ್ತಿನ ಬಗ್ಗೆ ತಿಳಿಸಿದರು. ಕ್ಲಬ್ ನ ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕ್ಲಬ್ ನ ಅಧ್ಯಕ್ಷ ಸಂಪತ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಲಯನ್ ಕ್ಯಾಬಿನೆಟ್ ಸದಸ್ಯರಾದ ಧರ್ಮರಾಜ ಮೊದಲಿಯಾರ್ ವಂದಿಸಿದರು.















