ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚಲಿಸುತ್ತಿದ್ದ ಟ್ಯಾಂಕರ್‌ನ ಚಕ್ರ ಕಳಚಿ ರಸ್ತೆ ಬದಿಯ ಕಟ್ಟೆಯಲ್ಲಿ ಕುಳಿತ್ತಿದ್ದ ವ್ಯಕ್ತಿಗೆ ಬಡಿದ ಪರಿಣಾಮ ಅವರು ಗಾಯಗೊಂಡಿರುವ ಘಟನೆ ಕಿರಿಮಂಜೇಶ್ವರ ರಾ.ಹೆ 66ರಲ್ಲಿ ಸಂಭವಿಸಿದೆ.
ಕಿರಿಮಂಜೇಶ್ವರ ಗ್ರಾಮದ ರಾಘವೇಂದ್ರ ಅವರು ಗಾಯಗೊಂಡವರು.
ಅವರು ಕಿರಿಮಂಜೇಶ್ವರ ಗ್ರಾಮದ ರಾ. ಹೆದ್ದಾರಿ 66ರ ಶಾಲೆ ಬಾಗಿಲು ಬೀಚ್ ತಿರುವು ರಸ್ತೆಯ ಬಳಿಯಲ್ಲಿರುವ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಸಮಯದಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಟ್ಯಾಂಕರ್‌ನ ಹಿಂಬದಿಯ ಒಂದು ಚಕ್ರ ಕಳಚಿ ಟ್ಯಾಂಕರ್‌ನಿಂದ ಬೇರ್ಪಟ್ಟು ಈ ಅಪಘಾತ ಸಂಭವಿಸಿದೆ. ಗಾಯಾಳುವನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















