Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರೋಟರಿ ಕುಂದಾಪುರ ಆತಿಥ್ಯದಲ್ಲಿ ಯಶಸ್ವಿಯಾದ ವಲಯ ಮಟ್ಟದ ರ‍್ಯಾಲಿ ಕಾರ್ಯಕ್ರಮ
    Uncategorized

    ರೋಟರಿ ಕುಂದಾಪುರ ಆತಿಥ್ಯದಲ್ಲಿ ಯಶಸ್ವಿಯಾದ ವಲಯ ಮಟ್ಟದ ರ‍್ಯಾಲಿ ಕಾರ್ಯಕ್ರಮ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ರೋಟರಿ ಕ್ಲಬ್ ಕುಂದಾಪುರದ ಆತಿಥ್ಯದಲ್ಲಿ, ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3182ರ ಝೋನ್ 1 ವತಿಯಿಂದ “Rotary Youth Leadership Award 2026-27 – YUVA JANA MANA” ಎಂಬ ವಿಶೇಷ ವಲಯಮಟ್ಟದ ರ‍್ಯಾಲಿ ಕಾರ್ಯಕ್ರಮವು ಗಿಳಿಯಾರು ಕುಶಾಲ ಹೆಗ್ಡೆ ರೋಟರಿ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

    Click Here

    Call us

    Click Here

    ಕಾರ್ಯಕ್ರಮವನ್ನು ARPIC ಝೋನ್ 7 PDG ಅಭಿನಂದನ್ ಎ. ಶೆಟ್ಟಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಯುವಜನರಲ್ಲಿ ನಾಯಕತ್ವ ಗುಣ, ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ರ‍್ಯಾಲಿದಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

    ಈ ಸಂದರ್ಭದಲ್ಲಿ ರ‍್ಯಾಲಿ RI ಡಿಸ್ಟ್ರಿಕ್ಟ್ 3182 ಚೇರ್ಮನ್ ಕೆ. ಎಸ್. ಜೈವಿಠಲ್, ಸಹಾಯಕ ಗವರ್ನರ್ ಝೋನ್ 1 ಶ್ರೀನಾಥ್ ಜೆ. ರಾವ್, ವಲಯ ತರಬೇತುದಾರ ಝೋನ್ 1 ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ವಲಯ ಲೆಫ್ಟಿನೆಂಟ್ ಸತ್ಯನಾರಾಯಣ ಪುರಾಣಿಕ್, ಪ್ರಶಾಂತ್ ಹವಾಲ್ದಾರ್ ಹಾಗೂ ಚಂದ್ರಕಲಾ ತಾಂಡೆಲ್ ಉಪಸ್ಥಿತರಿದ್ದರು.

    ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ರ‍್ಯಾಲಿ ವಲಯ ಸಂಯೋಜಕ ವೆಂಕಟೇಶ್ ನಾವುಂದ ನೆರವೇರಿಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಸತೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ ಕೊಡ್ಲಾಡಿ ವಂದಿಸಿದರು. ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮವನ್ನು ನಿರೂಪಿಸಿದರು.

    ರ‍್ಯಾಲಿದ ಮುಖ್ಯ ಉದ್ದೇಶವಾದ ಯುವಜನರ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಕೌಶಲ್ಯಗಳ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು Leadership Skills, Life Values ಹಾಗೂ The Power of Memory ಕುರಿತು ಮೂರು ವಿಶೇಷ ಅಧಿವೇಶನಗಳು ನಡೆಯಿತು.

    Click here

    Click here

    Click here

    Call us

    Call us

    PDG ಅಭಿನಂದನ್ ಎ. ಶೆಟ್ಟಿ, ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಹಾಗೂ ರಾಘವೇಂದ್ರ ಚರಣ್ ನಾವಡ ಅವರು ನಡೆಸಿಕೊಟ್ಟ ಅಧಿವೇಶನಗಳು ವಿದ್ಯಾರ್ಥಿಗಳಿಗೆ ಚಿಂತನೆಗೆ ಹಚ್ಚುವಂತಿದ್ದು, ಆತ್ಮವಿಶ್ವಾಸ, ನಾಯಕತ್ವ ಹಾಗೂ ಜೀವನದ ಮೌಲ್ಯಗಳ ಕುರಿತು ಹೊಸ ದೃಷ್ಟಿಕೋನವನ್ನು ನೀಡಿದವು.

    ನಂತರ ಪದವಿ ವಿದ್ಯಾರ್ಥಿಗಳಿಗಾಗಿ “ಶ್ರೇಷ್ಠ ಭಾರತ – ಸಮೃದ್ಧ ಭಾರತ” ಎಂಬ ವಿಷಯದಡಿ ವಿಶಿಷ್ಟ ಸ್ಪರ್ಧೆ ನಡೆಯಿತು.

    ಸ್ಪರ್ಧೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ತಂಡ ಪ್ರಥಮ ಸ್ಥಾನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಂಕರನಾರಾಯಣ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಪ್ರಥಮ ಬಹುಮಾನ ವಿಜೇತ ತಂಡಕ್ಕೆ ರೂ. 5,555 ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ವಿಜೇತ ತಂಡಕ್ಕೆ ರೂ. 3,333 ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು. ವೈಯಕ್ತಿಕ ವಿಭಾಗದ Star Performer Award ಅನ್ನು ಶ್ರೀ ಕಾಳಾವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಗೇರಿಯ ವಿದ್ಯಾರ್ಥಿನಿ ನಿಸರ್ಗ ಅವರು ಪಡೆದುಕೊಂಡರು.

    ಕಾರ್ಯಕ್ರಮದ ತೀರ್ಪುಗಾರರಾಗಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಪಾರ್ವತಿ ಕೊತ್ವಾಲ್ ಹಾಗೂ ಆನ್. ಭಾರತೀ ಪ್ರಕಾಶ್ ಶೆಟ್ಟಿ ಕಾರ್ಯ ನಿರ್ವಹಿಸಿದರು.

    ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ರೋಟರಿ ಇಂಡಿಯಾ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ರೋ. ರವಿರಾಜ್ ಶೆಟ್ಟಿ ಹಾಗೂ ವಲಯ ಸಂಯೋಜಕ, Drug De-Addiction & Eradication ರೋ. ಡಾ. ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಾರ್ಯಕ್ರಮದ ಮಹತ್ವವನ್ನು ಮೆಚ್ಚಿಕೊಂಡರು.

    ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 60ಕ್ಕೂ ಅಧಿಕ ಪದವಿ ವಿದ್ಯಾರ್ಥಿಗಳು ಭಾಗವಹಿಸಿ RYLAದ ತರಬೇತಿ ಹಾಗೂ ಚಟುವಟಿಕೆಗಳ ಪ್ರಯೋಜನ ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ Participation Certificate ನೀಡಲಾಯಿತು. ಯುವಜನರಲ್ಲಿ ನಾಯಕತ್ವ, ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಮೂಡಿಬಂತು. ವಲಯ ಒಂದರ ಎಲ್ಲಾ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, Anns ಸದಸ್ಯರು ಹಾಗೂ Annets‌ರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

    ರೋಟರಿ ಕ್ಲಬ್ ಕುಂದಾಪುರದ ಆತಿಥ್ಯದಲ್ಲಿ ನಡೆದ ಈ ವಿಭಿನ್ನ RYLA ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹೊಸ ಅನುಭವ, ಪ್ರೇರಣೆ ಹಾಗೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯನ್ನು ಒದಗಿಸಿತು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಐಸಿಬಿಎಫ್‌ ವತಿಯಿಂದ ಭಾರತೀಯ ರಾಯಭಾರ ಕಚೇರಿಯ ಕಾರ್ಯದರ್ಶಿ ಡಾ. ಈಶ್ ಸಿಂಘಾಲ್ ಅವರಿಗೆ ಬೀಳ್ಕೊಡುಗೆ

    16/08/2026

    ಬಾಷಿ ಪ್ರೀತಿಗಿಲ್ಲ ಗಡಿ. ದೂರದಂಗ್‌ ಕೇಂತಿದ್ದ ಭಾಷಿನಾ ಕಲ್ತ್‌ ಖುಷಿಯೇ ಬೇರೆ ಕಾಣಿ!

    11/08/2026

    ಪ್ಲಾಸ್ಮಾ ವಿಜ್ಞಾನದಲ್ಲಿ ಯುವಜನರು ತೊಡಗಿಸಿಕೊಳ್ಳಬೇಕು: ಡಾ. ಎನ್. ರಾಮಸುಬ್ರಮಣ್ಯನ್

    28/07/2026
    Leave A Reply Cancel Reply

    16 + 7 =

    Call us

    Click Here

    Call us

    Call us

    Call us
    Highest Viewed Recently
    • ರೋಟರಿ ಕುಂದಾಪುರ ಆತಿಥ್ಯದಲ್ಲಿ ಯಶಸ್ವಿಯಾದ ವಲಯ ಮಟ್ಟದ ರ‍್ಯಾಲಿ ಕಾರ್ಯಕ್ರಮ
    • ಕುಂದಾಪುರ: ಕರ್ನಾಟಕ ಪ್ರಗತಿಪರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
    • ಜೆಸಿ ಗುರುಪ್ರಸಾದ್ ಶೆಟ್ಟಿ ಹಾಲಾಡಿಗೆ ʼಸಾಧನಾ ಶ್ರೀ ಪ್ರಶಸ್ತಿʼ ಪುರಸ್ಕಾರ
    • ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯ ಚೆಶ್‌ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
    • ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ರಾಜ್ಯ ಆಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರದಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.