ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆ ಭಾಷೆಯ ಮೂಲಕವೇ ವ್ಯಕ್ತವಾಗುತ್ತದೆ. ನಮ್ಮ ಹಿರಿಯರ ಬಳಸುತ್ತಿದ್ದ ಭಾಷೆಯ ಬಗ್ಗೆ ಹೆಮ್ಮೆ ಹೊಂದಿರುವ ಜೊತೆಗೆ ಅದನ್ನು ಹೆಚ್ಚು ಬಳಸುವ ಹೊಂದಿಕೊಳ್ಳುವುದು ತಪ್ಪಲ್ಲ ಆದರೆ ನಮ್ಮತನವನ್ನು ಮರೆಯಬಾರದು. ಸುಮಾರು ಎರಡು ಸಾವಿರ ಕೇವಲ ಒಂದು ಭಾಷೆಯಲ್ಲ ಅದೊಂದು ಬದುಕು ಎಂದು ಮೂಡುಬಿದಿರೆ ಆಳ್ವಾನ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.





ಅವರು ಕುಂದಾಪುರ ಕನ್ನಡ ಪ್ರತಿಷ್ಠಾನ ಬೈಂದೂರು ವತಿಯಿಂದ ಯಡ್ತರೆ ಜೆ.ಎನ್.ಆರ್. ಹಾಲ್ ಸಭಾಭವನದಲ್ಲಿ ಆದಿತ್ಯವಾರ ʼಕೆಸ್ರಲೊಂದಿನ ಗಮ್ಮತ್ತ್ʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಕುಂದ ಅಧ್ಯಯನ ಪೀಠದ ಸದಸ್ಯ ಕೆ. ಜಯಪ್ರಕಾಶ ಶೆಟ್ಟಿ ಮಾತನಾಡಿ, ಕುಂದಾಪ್ರ ಕನ್ನಡ ಭಾಷೆಗೆ ಅದರದ್ದು ವೈಶಿಷ್ಟ್ಯತೆ ಇದೆ. ಹಾಗಯೇ ಪ್ರದೇಶವಾರು, ಸಮುದಾಯವಾರು ಭಿನ್ನತೆಯೂ ನಮ್ಮ ಭಾಷೆಯ ಬಗ್ಗೆ ತಮ್ಮ ಇದ್ದರಷ್ಟೇ ಸಾಲದು. ಅದು ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದರು.



ಪ್ರತಿಷ್ಠಾನದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಅಧ್ಯಕ್ಷ ಬಾರ್ಕೂರು ದೀಪಕ್ ಶೆಟ್ಟಿ, ಹಿರಿಯ ಸಹಕಾರಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಚಲನಚಿತ್ರ ನಟ ಶೈನ್ ಶೆಟ್ಟಿ ನಟಿ ತನ್ವಿರಾಮ್, ರೈತ ಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು, ಸುಜ್ಞಾನ ಎಜ್ಯುಕೇಷನ್ ಟ್ರಸ್ಟಿನ ಡಾ. ರಮೇಶ್ ಶೆಟ್ಟಿ, ಭರತ ಶೆಟ್ಟಿ, ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ ಡಾ. ಗೋವಿಂದ ಬಾಬು ಪೂಜಾರಿ, ಯು. ರಾಜೇಶ್ ಕಾರಂತ್, ಕೃಷ್ಣಯ್ಯ ಮದ್ದೋಡಿ, ಪ್ರಭಾಕರ ಶೆಟ್ಟಿ ಗೋಕುಲ್ ಶೆಟ್ಟಿ, ಡಾ. ಗೋವಿಂದ ಬಾಬು ಪೂಜಾರಿ , ಯು ರಾಜೇಶ್ ಕಾರಂತ, ಕೃಷ್ಣಯ್ಯ ಮುದ್ದೋಡಿ, ಪ್ರಭಾಕರ ಶೆಟ್ಟಿ, ಗೋಕುಲ್ ಶೆಟ್ಟಿ, ಜನಾರ್ದನ ದೇವಾಡಿಗ ಉಪ್ಪುಂದ, ಪತ್ರಕರ್ತ ಕೆ.ಸಿ., ರಾಜೇಶ್ ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಉಪಸ್ಥಿತರಿದ್ದರು.


ಸುಬ್ರಹ್ಮಣ್ಯ ಜಿ. ಉಮ್ಮಂದ ನಿರೂಪಿಸಿ, ಸುನೀಲ್ ಬೈಂದೂರು ವಂದಿಸಿದರು.
















