Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸೀತೆಯ ಅಗ್ನಿಜಯಕ್ಕೆ ಆಕೆಯ ಆಹಾರ ಕ್ರಮವೇ ಕಾರಣ: ಶ್ರೀ ರಾಘವೇಶ್ವರ
    ಊರ್ಮನೆ ಸಮಾಚಾರ

    ಸೀತೆಯ ಅಗ್ನಿಜಯಕ್ಕೆ ಆಕೆಯ ಆಹಾರ ಕ್ರಮವೇ ಕಾರಣ: ಶ್ರೀ ರಾಘವೇಶ್ವರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಗೋಕರ್ಣ:
    ಊಟವು ಯಜ್ಞ ಸ್ವರೂಪವಾಗಿದ್ದು, ಊಟವನ್ನು ಮಾಡುವಾಗ ಒಮ್ಮೆ ಬಾಳೆಗೆ ಬಡಿಸಿದ ನಂತರ ಅದು ಅಗ್ನಿಯ ಸಂಪರ್ಕಕ್ಕೆ ಬಂದಂತಾಗುತ್ತದೆ. ಜಠರಾಗ್ನಿಯು ಅವರವರ ಕರ್ಮಕ್ಕೆ ಅನುಗುಣವಾಗಿ ಭಿನ್ನವಾಗಿದ್ದು, ಒಬ್ಬರು ಇನ್ನೊಬ್ಬರ ಎಂಜಲನ್ನು ಅಥವಾ ಇನ್ನೊಬ್ಬರ ಬಾಳೆಯಿಂದ ತೆಗೆದುಕೊಂಡು ತಿನ್ನುವುದು ವ್ಯತಿರಿಕ್ತಪರಿಣಾಮವನ್ನು ಉಂಟುಮಾಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

    Click Here

    Call us

    Click Here

    ಅವರು ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಅಗ್ನಿಜಯದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಒಬ್ಬರ ಎಂಜಲನ್ನು ಇನ್ನೊಬ್ಬರು ತಿನ್ನಬಾರದು ಎಂಬ ನಿಯಮವಿದ್ದು, ಇದು ಆರೋಗ್ಯ ಹಾಗೂ ಆಧ್ಯಾತ್ಮದ ದೃಷ್ಟಿಯಿಂದ ಅನುಸರಣೀಯವಾಗಿದೆ ಎಂದ ಶ್ರೀಗಳು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ದಂಪತಿಗಳಿಗೆ ಈ ನಿಯಮದಿಂದ ವಿನಾಯಿತಿ ಇದ್ದು, ಸತಿಪತಿಗಳು ಅರ್ಧನಾರೀಶ್ವರ ತತ್ತ್ವದ ಪ್ರತೀಕ. ದಂಪತಿಗಳು ಎನ್ನುವಾಗ ಅದ್ವೈತವಿರುವುದರಿಂದ ಎಂಜಲನ್ನು ತಿನ್ನಬಾರದು ಎಂಬ ನಿಯಮಕ್ಕೆ ವಿನಾಯಿತಿ ಇದೆ ವಿವರಿಸಿದರು.

    ಹನುಮಂತನ ಬಾಲಕ್ಕೆ ಲಂಕೆಯಲ್ಲಿ ಬೆಂಕಿ ಹಚ್ಚಿದ ರಾಮಾಯಣದ ಸಂದರ್ಭವನ್ನು ವಿವರಿಸಿದ ಶ್ರೀಗಳು, ಇದನ್ನು ಅರಿತ ಸೀತೆಯು ತಾನು ಪತಿವ್ರತೆಯಾಗಿದ್ದರೆ ಹನುಮಂತನ ಬಾಲಕ್ಕೆ ಹಚ್ಚಿರುವ ಬೆಂಕಿಯು ತಂಪಾಗಲಿ ಎಂದು ಹೇಳುತ್ತಾಳೆ.

    ಆಂಜನೇಯನು ಬೆಂಕಿ ತನ್ನನ್ನು ಸುಡುತ್ತದೆ, ತಾನು ಅದನ್ನು ಸಹಿಸಬೇಕು ಎಂದು ಮಾನಸಿಕವಾಗಿ ಸಿದ್ಧನಾಗಿರುತ್ತಾನೆ. ಆದರೆ ಅಗ್ನಿಯು ಬಿಸಿಯಾಗಿ ಸುಡುವ ಬದಲು ತಂಪಾಗುತ್ತದೆ. ಗಾಳಿಯೂ ಕೂಡ ಹಿಮದ ಗಾಳಿಯಂತೆ ತಂಪಾಗಿ ಬೀಸುತ್ತದೆ. ಹನುಮಂತನ ಪಾಲಿಗೆ ಮಾತ್ರ ತಂಪಾದ ಅಗ್ನಿಯು, ಸ್ವರ್ಣಲಂಕೆಯನ್ನು ಸುಡುತ್ತದೆ. ಆದರೆ ಲಂಕೆಯನ್ನು ಸುಟ್ಟ ಅಗ್ನಿಯು ಸೀತೆಗೆ ತೊಂದರೆ ಮಾಡುವುದಿಲ್ಲ. ಇಂತಹ ವಿಸ್ಮಯ ನಡೆಯಲು ಸೀತೆಯ ಅಗ್ನಿಜಯವೇ ಕಾರಣವಾಗಿದ್ದು, ಅವಳು ಅನುಸರಿಸುತ್ತಿದ್ದ ಆಹಾರ ಕ್ರಮದಿಂದ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

    ಸೀತೆಯು ಅಗ್ನಿಪ್ರವೇಶಮಾಡುವಾಗ ರಾಮನು ಏಕೆ ತಡೆಯಲಿಲ್ಲ? ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ. ಆದರೆ ರಾಮನಿಗೆ ಸೀತೆ ಸಾಧಿಸಿಕೊಂಡಿರುವ ಅಗ್ನಿಜಯದ ಅರಿವಿತ್ತು. ಹಾಗಾಗಿ ರಾಮ ಆ ಬಗ್ಗೆ ಚಿಂತಿಸಲಿಲ್ಲ. ಇದು ಸೀತೆಯ ಚಾರಿತ್ರ ಶುದ್ಧಿಯ ಜೊತೆಗೆ ಪಂಚಭೂತಗಳ ನಿಯಂತ್ರಣವನ್ನೂ ಸೂಚಿಸುತ್ತದೆ ಎಂದು ವಿವರಿಸಿದರು.

    Click here

    Click here

    Click here

    Call us

    Call us

    ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್, ಕೇಂದ್ರ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಹೆಗಡೆ ಕೆರೆಮನೆ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀಗಳ ಆಶೀರ್ವಾದ ಪಡೆದರು. ಹಿರಿಯ ವಕೀಲರಾದ ರಾಜಶೇಖರ ಹಿಲ್ಯಾರ್ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ಜಿ.ಕೆ ಹೆಗಡೆ ಗೋಳಗೋಡು ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

    ಗುನಗ ಸಮಾಜದಿಂದ ಸ್ವರ್ಣಪಾದುಕಾ ಸೇವೆ: ಶ್ರೀಮಠದ ಪಾರಂಪರಿಕವಾಗಿ ನಡೆದುಕೊಳ್ಖುವ ಕುಮಟಾ, ಹೊನ್ನಾವರ, ಅಂಕೋಲಾ ಭಾಗದ ಗುನಗ ಸಮಾಜದ ಗುರುಬಂಧುಗಳಿಂದ ಸ್ವರ್ಣಪಾದುಕಾ ಸೇವೆ ನಡೆಯಿತು. ರಾಜೇಶ ಗುನಗ, ಉದಯ ಗಣಪತಿ ಗುನಗ, ರಾಜು ಗಣಪತಿ ಗುನಗ, ನಾಗರಾಜ ರಮಾಕಾಂತ ಗುನಗ ಸೇರಿದಂತೆ ಗುರುಬಂಧುಗಳು ಉಪಸ್ಥಿತರಿದ್ದರು.


    ಅಡುಗೆ ಮಾಡುವಾಗ ಒರಳು ಗುಂಡು ಹಾಗೂ ಸೌಟನ್ನು ಎಡದಿಂದ ಬಲಕ್ಕೆ ತಿರುಗಿಸಬೇಕು. ಇದು ಆಹಾರವನ್ನು ಸ್ವೀಕರಿಸುವವರ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಅಪ್ರಪಕ್ಷಿಣಾಕಾರವಾಗಿ ಸೌಟನ್ನು ತಿರುಗಿಸಿ ಅಡುಗೆ ಮಾಡುವುದರಿಂದ ರಾಕ್ಷಸರಿಗೆ ಸಲ್ಲಿಕೆಯಾದಂತಾಗುತ್ತದೆ ಎಂದು ಆಪಸ್ತಂಬರ ಗೃಹ್ಯಸೂತ್ರದಲ್ಲಿ ಹೇಳಿದ್ದಾರೆ – ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ ಕನ್ನಡ ಪ್ರತಿಷ್ಠಾನ ಬೈಂದೂರು: ʼಕೆಸ್ರಲೊಂದಿನ ಗಮ್ಮತ್ತ್ʼ ಕಾರ್ಯಕ್ರಮ ಸಂಪನ್ನ

    24/08/2026

    ಬೈಂದೂರು ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ: ಸಂಸದ ಬಿ.ವೈ. ರಾಘವೇಂದ್ರ

    24/08/2026

    ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ತಂದೆ-ತಾಯಿಯನ್ನು ಕೊಲೆಗೈದ ಪುತ್ರ

    24/08/2026
    Leave A Reply Cancel Reply

    two × four =

    Call us

    Click Here

    Call us

    Call us

    Call us
    Highest Viewed Recently
    • ಸೀತೆಯ ಅಗ್ನಿಜಯಕ್ಕೆ ಆಕೆಯ ಆಹಾರ ಕ್ರಮವೇ ಕಾರಣ: ಶ್ರೀ ರಾಘವೇಶ್ವರ
    • ಕುಂದಾಪುರ ಕನ್ನಡ ಪ್ರತಿಷ್ಠಾನ ಬೈಂದೂರು: ʼಕೆಸ್ರಲೊಂದಿನ ಗಮ್ಮತ್ತ್ʼ ಕಾರ್ಯಕ್ರಮ ಸಂಪನ್ನ
    • ಬೈಂದೂರು ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ: ಸಂಸದ ಬಿ.ವೈ. ರಾಘವೇಂದ್ರ
    • ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ತಂದೆ-ತಾಯಿಯನ್ನು ಕೊಲೆಗೈದ ಪುತ್ರ
    • ರೋಟರಿ ಕುಂದಾಪುರ ಆತಿಥ್ಯದಲ್ಲಿ ಯಶಸ್ವಿಯಾದ ವಲಯ ಮಟ್ಟದ ರ‍್ಯಾಲಿ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.