Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಿ.ಎಸ್. ಪ್ರೊಫೆಷನಲ್ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
    alvas nudisiri

    ಸಿ.ಎಸ್. ಪ್ರೊಫೆಷನಲ್ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜೂನ್‌ನಲ್ಲಿ ನಡೆದ ಕಂಪನಿ ಸೆಕ್ರೆಟರೀಸ್ (ಸಿ.ಎಸ್.) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.

    Click Here

    Call us

    Click Here

    ಕಂಪನಿ ಸೆಕ್ರೆಟರಿ ವೃತ್ತಿಪರ ಅರ್ಹತೆಯ ಅಂತಿಮ ಹಂತದ ಪರೀಕ್ಷೆಯಾದ ಸಿ.ಎಸ್. ಪ್ರೊಫೆಷನಲ್‌ನ ಗ್ರೂಪ್–1 ಮತ್ತು ಗ್ರೂಪ್–2 ಪರೀಕ್ಷೆಗಳಲ್ಲಿ ಆಳ್ವಾಸ್ ಬಿ.ಕಾಂ. ವಿದ್ಯಾರ್ಥಿಗಳಾದ ಅನನ್ಯ ಕೆ.ಎ. (382 ಅಂಕ), ಪ್ರತೀಕ್ಷಾ (373)  ಹಾಗೂ ನಾಗನಾಥ್ (353 ಅಂಕ) ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ.

    ಇವರಲ್ಲಿ ಅನನ್ಯ ಹಾಗೂ ನಾಗನಾಥ್ ಮೊದಲ ಪ್ರಯತ್ನದಲ್ಲೆ ಉತ್ತೀರ್ಣರಾಗಿದ್ದಾರೆ.  ಇದರೊಂದಿಗೆ ಮೂವರು ಕಂಪನಿ ಸೆಕ್ರೆಟರಿ ವೃತ್ತಿಗೆ ಅಗತ್ಯವಾದ ವೃತ್ತಿಪರ ಅರ್ಹತೆಯನ್ನು ಗಳಿಸಿದ್ದಾರೆ. ಸಿ.ಎಸ್. ಪ್ರೊಫೆಷನಲ್‌ನ – ಗ್ರೂಪ್–1 ಪರೀಕ್ಷೆಯಲ್ಲಿ ಬಿ. ಸುಹಾಸ್ ರಾವ್ (248), ನಿಶಿತಾ ಸಿ. ಶೆಟ್ಟಿ (200) ಹಾಗೂ ತಸ್ಮಯ್ ಎಂ. ಬಪ್ಪಣವರ್ (200) ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

    ಸಿ.ಎಸ್. ಎಕ್ಸಿಕ್ಯೂಟಿವ್‌ನಲ್ಲೂ ಸಾಧನೆ:
    ಕಂಪನಿ ಸೆಕ್ರೆಟರಿ ವೃತ್ತಿಪರ ಪಯಣದ ಎರಡನೇ ಹಂತವಾದ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿಯೂ ಆಳ್ವಾಸ್ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಜೇನ್ ಡಿಸೋಜಾ (204) ಹಾಗೂ ವೀಣಾ ನಾಯಕ್ (202) ಮಾಡ್ಯೂಲ್–1ರಲ್ಲಿ, ದೀಕ್ಷಾ (166) ಮಾಡ್ಯೂಲ್–2ರಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.

    ವಿಶೇಷ ಸಾಧನೆ ಮೆರೆದ ಅನನ್ಯ:
    ಅನನ್ಯ ಕೆ.ಎ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಉಚಿತವಾಗಿ ಪೂರ್ಣಗೊಳಿಸಿದ್ದಾರೆ. 2023ರಲ್ಲಿ ನಡೆದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿದ ಮೊದಲ ವಿದ್ಯಾರ್ಥಿನಿ ಎಂಬ ಅಪೂರ್ವ ಸಾಧನೆಗೆ ಪಾತ್ರರಾಗಿದ್ದರು.

    Click here

    Click here

    Click here

    Call us

    Call us

    ಇದೀಗ ಸಿ.ಎಸ್. ಪ್ರೊಫೆಷನಲ್ ಪರೀಕ್ಷೆಯ ಗ್ರೂಪ್–1 ಮತ್ತು ಗ್ರೂಪ್–2 ಎರಡರಲ್ಲೂ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಕಂಪನಿ ಸೆಕ್ರೆಟರಿ ವೃತ್ತಿಪರ ಅರ್ಹತೆ ಗಳಿಸಿರುವುದು ಅವರ ಶೈಕ್ಷಣಿಕ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

    ಸಾಧನೆಗೈದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ. 

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಚೆನ್ನಿಮಣಿ 2026 ಅಂತರ್ ತರಗತಿ ಕುಂದಗನ್ನಡ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

    28/08/2026

    ಭಂಡಾರ್ಕಾರ್ಸ್ ಕಾಲೇಜು: ಸಾಂಪ್ರದಾಯಿಕ ದಿನಾಚರಣೆ

    28/08/2026

    ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಯುವ ಮನಸ್ಸು ಮತ್ತು ಡಿಜಿಟಲ್ ಪ್ರಪಂಚ ವಿಶೇಷ ಕಾರ್ಯಾಗಾರ

    28/08/2026
    Leave A Reply Cancel Reply

    2 × 1 =

    Call us

    Click Here

    Call us

    Call us

    Call us
    Highest Viewed Recently
    • ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಪದಗ್ರಹಣ
    • ಚೆನ್ನಿಮಣಿ 2026 ಅಂತರ್ ತರಗತಿ ಕುಂದಗನ್ನಡ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ
    • ಭಂಡಾರ್ಕಾರ್ಸ್ ಕಾಲೇಜು: ಸಾಂಪ್ರದಾಯಿಕ ದಿನಾಚರಣೆ
    • ದೃಢ ಸಂಕಲ್ಪದಿಂದ ದುರ್ಲಭವನ್ನೂ ಸಾಧಿಸಬಹುದು: ಶ್ರೀ ರಾಘವೇಶ್ವರ
    • ಗಂಗೊಳ್ಳಿ: ದೋಣಿ ಆಯತಪ್ಪಿ ಬಿದ್ದು ಮೀನುಗಾರ ಸಾವು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.