ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೀನು ಹಿಡಿಯಲೆಂದು ಹೋದ ಯುವಕ ಬಲೆ ಸಮೇತ ಕೆರೆಗೆ ಬಿದ್ದು, ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಆನಗಳ್ಳಿ ಗ್ರಾಮದ ಆಗರಕಟ್ಟು ಎಂಬಲ್ಲಿನ ಕೆರೆಯಲ್ಲಿ ಗುರುವಾರ ಸಂಭವಿಸಿದೆ.
ಆನಗಳ್ಳಿ ಗ್ರಾಮದ ಗಾಣಿಗರಬೆಟ್ಟು ನಿವಾಸಿ ಉದಯ (30) ಮೃತರು.
ಅವರು ಬೆಳಗ್ಗೆ ಮನೆಯಿಂದ ಬಲೆ ತೆಗೆದುಕೊಂಡು ಮೀನು ಹಿಡಿಯಲು ಹೋಗಿದ್ದು, ಆಗರಕಟ್ಟೆಯ ಕೆರೆಗೆ ಮೀನು ಹಿಡಿಯಲು ಬಲೆ ಹಾಕಿದ ಸಮಯ ಆಕಸ್ಮಿಕವಾಗಿ ಬಲೆ ಸಮೇತ ಕೆರೆಗೆ ಬಿದ್ದಿರುವುದಾಗಿ,
ಅವರ ಸಹೋದರ ಮನೋಜ್ ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















