ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬಾಳ್ಕುದ್ರು-ಹಂಗಾರಕಟ್ಟೆ ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಇದರ ಆಶ್ರಯದಲ್ಲಿ ಶ್ರೀ ಬ್ರಹ್ಮ ಶ್ರೀ ನಾರಾಯಣಗುರುಗಳ 172ನೇ ಜನ್ಮ ಜಯಂತಿ ಉತ್ಸವವನ್ನು ಶುಕ್ರವಾರದಂದು ವೈಭವದಿಂದ ಆಚರಿಸಲಾಯಿತು.
ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 09.೦೦ರಿಂದ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ, ತದನಂತರ ವೇ.ಮೂ ವೆಂಕಟರಣಸೂರ್ಯ ಇವರಿಂದ ಧಾರ್ಮಿಕ ವಿಧಿವಿಧಾನದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ ಜರಗಿತು.
ಸಂಘದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.ಅಪರಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲ.ವಿ.ಕೋಟ್ಯಾನ್, ಪ್ರಮುಖರಾದ ವಾಸುದೇವ ಕೋಟ್ಯಾನ್, ಉದೇಶ್ ಪೂಜಾರಿ, ಗುರಿಕಾರ ಕುಷ್ಟ ಪೂಜಾರಿ,ಕರುಣಾಕರ ಪೂಜಾರಿ, ರೇಖಾ ಪಿ. ಸುವರ್ಣ, ಕಲಾವತಿ ಆನಂದ್, ಜ್ಯೋತಿ ರವೀಂದ್ರ ಸುವರ್ಣ, ಪ್ರೇಮ ಸತೀಶ್ ಪೂಜಾರಿ, ಸಂಘದ ಪ್ರಮುಖರಾದ ನಾರಾಯಣ ಪೂಜಾರಿ, ಶಂಕರ್ ಪೂಜಾರಿ, ಆನಂದ್ ಪೂಜಾರಿ ಮತ್ತಿತರರು ಇದ್ದರು.
















