ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ವಡ್ಡರ್ಸೆ ಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಮ್ಮುಖದಲ್ಲಿ ವಂದೇ ಮಾತರಂ ಕಾಲ್ನಡಿಗೆ ಜಾಥಾದ ಪೂರ್ವಭಾವಿ ಸಭೆಯನ್ನು ಶಕ್ತಿ ಕೇಂದ್ರದ ಅಧ್ಯಕ್ಷ ಮಾನಂಬಳ್ಳಿ ಗುಂಡು ಶೆಟ್ಟಿ ನಿವಾಸದಲ್ಲಿ ಜರಗಿತು.
ಸೆ.07 ಸೋಮವಾರದಂದು ಕುಂದಾಪುರ ಬಸ್ ನಿಲ್ದಾಣದಿಂದ ಸಾಸ್ತಾನದವರೆಗಿನ ವಂದೇ ಮಾತರಂ ಕಾಲ್ನಡಿಗೆ ಜಾಥಾ ಕಾರ್ಯಕ್ರಮದ ಕುರಿತು ಉಡುಪಿ ಚಿಕ್ಕ ಮಂಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾ ಅವರು ಭಾಗವಹಿಸಿ ಜಾಥಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಗುಂಡು ಶೆಟ್ಟಿ, ಕಾರ್ಯದರ್ಶಿ ದಯಾನಂದ ಆಚಾರ ,ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ವಿಠಲ ಪೂಜಾರಿ ,ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಪ್ರಸಾದ ಬಿಲ್ಲವ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ ಮಾನಂಬಳ್ಳಿ, ಕಿರಣ ಪೂಜಾರಿ ಅಚ್ಲಾಡಿ,ಪ್ರಕಾಶ ಆಚಾರ್ ಮಧುವನ, ರಾಜು ಶ್ರೀಯಾನ ವಡ್ಡರ್ಸೆ, ಬಿಜೆಪಿ ಮುಖಂಡರಾದ ಪ್ರದೀಪ ಶಾಂತಿ ನಗರ, ಅಶೋಕ ಶೆಟ್ಟಿ ಕಾವಡಿ,ಶರತ್ ಶೆಟ್ಟಿ ಕಾವಡಿ, ರಾಘವ ಶೆಟ್ಟಿ ಮಾನಂಬಳ್ಳಿ, ರಾಘವೇಂದ್ರ ಕಾಮತ್, ರೂಪೇಶ ಶೆಟ್ಟಿ, ಗುಂಡು ಶೆಟ್ಟಿ ಪಡುಮಾನಂಬಳ್ಳಿ, ಕುಶಲ ಶೆಟ್ಟಿ ಮಾನಂಬಳ್ಳಿ ಭಾಗವಹಿಸಿದ್ದರು.
ವಡ್ಡರ್ಸೆ ಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಆಚಾರ ಸ್ವಾಗತಿಸಿ, ಕೋಟ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಕೊತ್ತಾಡಿ ವಂದಿಸಿದರು.
















