ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ. ಹಾಲಾಡಿ ಶಂಕರನಾರಾಯಣ ಘಟಕ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ ಇವರ ನೇತೃತ್ವದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಯಿತು.
ಸುಮಾರು 24 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಂಕರನಾರಾಯಣ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಾಗರಾಜ್ ಪುತ್ರನ್ ಹದ್ದೂರು ಮತ್ತು ಜ್ಯೋತಿ ಎನ್. ಪುತ್ರನ್ ಅವರನ್ನು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ರಾಗಿರುವ ಶರತ್ ಸೌಡ, ಕಾರ್ಯದರ್ಶಿ ರಂಜಿತ್ ಬೈಲೂರು, ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಶಂಕರನಾರಾಯಣ, ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರು ಗಣೇಶ್ ಕಾಂಚನ್, ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಶೇಖರ್ ತೋಳಾರ್, ಬಿ. ಕೆ. ಶ್ರೀನಿವಾಸ್ ಸೌಡ, ರಂಜಿತ್ ಸೌಡ, ಜಗದೀಶ್ ಬಿದ್ಕಲ್ ಕಟ್ಟೆ, ನರಸಿಂಹ ಮೊಗವೀರ ಕೊಂಡಳ್ಳಿ, ಸಂತೋಷ್ ಮೊಗವೀರ ಎಣ್ಣೆಮಕ್ಕಿ, ಸಂದೀಪ್ ಮೊಗವೀರ ಮರ್ಜಿ, ಸುರೇಂದ್ರ ಮೊಗವೀರ ಬೈಲೂರು, ಆನಂದ್ ಮೊಗವೀರ ಬೈಲೂರು, ಗಣೇಶ ಮೊಗವೀರ ನೆಲ್ಲಿಕಟ್ಟೆ, ಕೃಷ್ಣ ಕಾಂಚನ್ ಮೊಳಹಳ್ಳಿ, ಜಯರಾಮ್ ಮೊಗವೀರ ಬೈಲೂರು, ಮಂಜುನಾಥ್ ಮೊಗವೀರ ಬೈಲೂರು, ಶರತ್ ಮೊಗವೀರ ಎಣ್ಣೆಮಕ್ಕಿ, ಶೇಖರ್ ಮೊಗವೀರ ಬೈಲೂರು, ಅಜಿತ್ ಮೊಗವೀರ ನೆಲ್ಲಿಕಟ್ಟೆ, ರಾಜೇಶ್ ಮೊಗವೀರ ಕಾಡಿನಬೆಟ್ಟು, ಕೃಷ್ಣ ಮೊಗವೀರ ಹದ್ದೂರು, ಸೃಜನ್ ಮೊಗವೀರ ಬೈಲೂರು, ಅಜಿತ್ ಕುಮಾರ್ ಬೈಲೂರು, ಹರ್ಷೇಂದ್ರ ಮೊಗವೀರ, ಜಿತೇಂದ್ರ ಮೊಗವೀರ, ದರ್ಶನ್ ಮೊಗವೀರ ನೂಜಿ, ಅಕ್ಷಯ ಮೊಗವೀರ ನೂಜಿ, ಸುಬ್ರಮಣ್ಯ ಮೊಗವೀರ ಶಾನ್ಕಟ್ಟು, ಮಂಜುನಾಥ ಮೊಗವೀರ ಜನ್ನಾಡಿ, ದೀಕ್ಷಿತ್ ಮೊಗವೀರ ಶಾನ್ಕಟ್ಟು, ಸ್ಕಂದ ಮೊಗವೀರ ಕುವೆಟ್, ದೀಪ ಕುಮಾರಿ ಕುವೇಟ್ ಮುಂತಾದವರು ಉಪಸ್ಥಿತರಿದ್ದರು.











