ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಸದಸ್ಯರು ವಿವೇಕ ಪದವಿಪೂರ್ವ ಕಾಲೇಜಿನ ವಿಶ್ರಾಂತ ಹಿಂದಿ ಉಪನ್ಯಾಸಕ ಶ್ರೀನಿವಾಸ ಸೋಮಯಾಜಿ ದಂಪತಿಗಳಿಗೆ ಅವರ ಪಾರಂಪಳ್ಳಿ ಗೆಂಡೆ ಕೆರೆಯ ಮನೆಗೆ ತೆರಳಿ ಗೌರವ ಸಮರ್ಪಣೆ ನಡೆಸಿದರು.
ರೋಟರಿ ಅಧ್ಯಕ್ಷೆ ಕುಸುಮಾ ಮನೋಜ್, ರೋಟರಿ ಸದಸ್ಯರುಗಳಾದ ಸಿ. ಚಂದ್ರ ನಾಯರಿ, ಮುರಳೀಧರ ನಾಯರಿ, ಬಾಲಕೃಷ್ಣ ಪೂಜಾರಿ, ಲೀಲಾವತಿ ಗಂಗಾಧರ, ಜಿ ಗಣೇಶ್, ಸಿ. ವೆಂಕಟೇಶ್ ಭಟ್, ಮನೋಜ್ ಕುಮಾರ್, ಕೆ. ಸುನಿಲ್, ಕಾರ್ಯದರ್ಶಿ ಕೆ. ರಾಜಾರಾಮ ಐತಾಳ ಮತ್ತಿತರರು ಉಪಸ್ಥಿತರಿದ್ದರು.











