ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಲಿನ ಅಂಗಡಿಯ ಮಾಡಿನ ತಗಡು ಒಡೆದು ಒಳನುಗ್ಗಿದ ಕಳ್ಳರು 1.10 ಲಕ್ಷ ರೂ. ನಗದು ಕಳವು ಮಾಡಿದ ಘಟನೆ ವಡೇರಹೋಬಳಿ ಗ್ರಾಮದ ಬನ್ನೂರು ಮೂಕೈಯಲ್ಲಿ ಶನಿವಾರ ಮಧ್ಯರಾತ್ರಿ ಸಂಭವಿಸಿದೆ.
ದೂರುದಾರ ವಡೇರಹೋಬಳಿ ನಿವಾಸಿ ಹಾಗೂ ಅಂಗಡಿ ಮಾಲಕ ಸುರೇಂದ್ರ ಅವರು ಸೆ.6ರ ರಾತ್ರಿ 10.30ರ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಸೆ.7ರ ಬೆಳಗ್ಗೆ 6 ಗಂಟೆಗೆ ಅಂಗಡಿ ತೆರೆಯಲು ಬಂದಾಗ, ಅಂಗಡಿಯ ಮಾಡಿನ ತಗಡು ಒಡೆದಿರುವುದು ಹಾಗೂ ಕ್ಯಾಶ್ ಡ್ರಾವರ್‌ನಲ್ಲಿದ್ದ ನಗದು ಹಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











