ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಇದರ 99ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾ ಭವನದಲ್ಲಿ ಜರಗಿತು.

ಸಂಘದ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿ 2025-26ನೇ ಸಾಲಿನ ವರದಿಯನ್ನು ವಾಚಿಸಿ, ಸಂಘವು 13 ಶಾಖೆಗಳನ್ನು ಹೊಂದಿ ಉತ್ತಮ ಪ್ರಗತಿ ಸಾಧಿಸಿ, ವರದಿ ಸಾಲಿನಲ್ಲಿ ರೂ. 329.20 ಕೋಟಿ ಠೇವಣಿ, ರೂ. 263.57 ಕೋಟಿ ಸಾಲ ಹೊರಬಾಕಿಯಿದ್ದು, ರೂ. 2061.00 ಕೋಟಿ ವ್ಯವಹಾರ ಮಾಡಿ ರೂ.5.88 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.16ರ ಡಿವಿಡೆಂಡ್ ಘೋಷಿಸಿರುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ 2026ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ(ಪಡು) ಇಲ್ಲಿನ ಮುಖ್ಯ ಶಿಕ್ಷಕಿಯಾದ ಪಾರ್ವತಿ ಎಮ್, ಶ್ರೀ ಗುರುಭ್ಯೋ ನಮಃ ಪುರಸ್ಕೃತ ನರೇಂದ್ರ ಕುಮಾರ್, 2026ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಶಿಕ್ಷಕ ಪುರಸ್ಕೃತ ಸುಜಯೀಂದ್ರ ಹಂದೆ, 2024-25ನೇ ಸಾಲಿನ ಪುರುಷರ ವಿಭಾಗದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಯರಾಮ ಶೆಟ್ಟಿ, 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 600 ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಗಳಿಸಿದ ಪ್ರಥ್ವೀಧರ ಎಲ್ ಕಾರಂತ, 2025-26ನೇ ಸಾಲಿಸ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ರ‍್ಯಾಂಕ್ ಪಡೆದ ಕುಮಾರಿ ತಕ್ಷ ಪಿ ಶೆಟ್ಟಿ, ಫುಟ್ಬಾಲ್ ಕ್ರೀಡೆಯಲ್ಲಿ ಭಾರತದ ಅಂಡರ್ 19 ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಹರ್ಷಿತ್ ಬಿ ಇವರುಗಳನ್ನು ಸಭೆಯಲ್ಲಿ ಸನ್ಮಾಸಿ, ಸಂಘದ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಸಂಘದಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ಶಾಖೆಗಳನ್ನು ಘೋಷಿಸಲಾಯಿತು.
ಸಂಘದ ಕಾರ್ಯವ್ಯಾಪ್ತಿಯ ಶಾಲೆಗಳ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ , ಅಂಗವಿಕಲ ದತ್ತಿನಿಧಿ ಮತ್ತು ಕೃಷಿ ಆವರ್ತನಾ ನಿಧಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಗೀತಾನಂದ ಪೌಂಡೇಶನ್ ಮಣೂರು ಪ್ರವರ್ತಕ ಆನಂದ ಸಿ. ಕುಂದರ್ ,ಸಂಘದ ಉಪಾಧ್ಯಕ್ಷರಾದ ರವೀಂದ್ರ ಕಾಮತ್, ನಿರ್ದೇಶಕರುಗಳಾದ ಜಿ. ತಿಮ್ಮ ಪೂಜಾರಿ, ಕೆ. ಉದಯ ಕುಮಾರ್ ಶೆಟ್ಟಿ, ಮಹೇಶ ಶೆಟ್ಟಿ, ರಶ್ಮಿತಾ, ರಂಜಿತ್ ಕುಮಾರ್, ಚಂದ್ರ ಪೂಜಾರಿ ಪಿ., ವಸಂತಿ ಪೂಜಾರಿ, ಜಿ. ಅಜಿತ್ ದೇವಾಡಿಗ, ಪ್ರೇಮಾ, ರಾಘವೇಂದ್ರ ಮಧ್ಯಸ್ಥ, ದಿನಕರ ಶೆಟ್ಟಿ, ಪಿ. ಶೇಖರ ಮರಕಾಲ, ರಾಜಾರಾಮ ಶೆಟ್ಟಿ ಇವರು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಟಿ. ಮಂಜುನಾಥ ಸ್ವಾಗತಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕುಮಾರಿ ನಿಶಾ ಆರ್. ಪೂಜಾರಿ ಪ್ರಾರ್ಥಿಸಿದರು. ಸಂಘದ ಸಿಬ್ಬಂದಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
















