ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯವರು ಗಣೇಶ ಚತುರ್ಥಿಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ಸಾಂಸ್ಕçತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 9 ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ವಿಜೇತ ವಿದ್ಯಾರ್ಥಿಗಳ ವಿವರ ಇಂತಿದೆ:
ಇಂಗ್ಲೀಷ್ ಭಾಷಣ – ಸ್ಪರ್ಶ, ಪ್ರಥಮ, ಹಿಂದಿ ಭಾಷಣ – ತೃಪ್ತಿ ಶೆಟ್ಟಿ, ದ್ವಿತೀಯ, ಹಿಂದಿ ಭಾಷಣ – ಡಿ. ಸಾನ್ವಿ – ತೃತೀಯ, ದೇಶ ಭಕ್ತಿ ಗೀತೆ – ಸುಮೇಧ ತುಂಗಾ, ದ್ವಿತೀಯ, ಪ್ರತ್ಯುಶ್ – ರೋಪ್ ಸ್ಕಿಪ್ಪಿಂಗ್ – ಪ್ರಥಮ, ಸುಡೊಕೊ – ವನ್ಮಯಿ ದ್ವಿತೀಯ, ಯೋಗ – ಅಕ್ಷತ ಪೈ – ಪ್ರಥಮ, ಗೂಡು ದೀಪ ಧ್ಯಾನ್ – ತೃತೀಯ, ರೂಬಿಕ್ಸ್ ಕ್ಯೂಬ್ – ಪ್ರಜ್ವಲ್ – ತೃತೀಯ.
ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ನಿರ್ದೇಶಕ ಹರೀಶ್ ಮರವಂತೆ, ಶಾಲಾ ಪ್ರಾಂಶುಪಾಲರಾದ ಸಂದೀಪ್ ಪುತ್ರನ್, ಅಭಿನಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.











