ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಪ್ರಕ್ರಿಯೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು.
ಈ ಜಮಾಬಂದಿ ಕಾರ್ಯಕ್ರಮದಲ್ಲಿ ವಾರ್ಷಿಕ ಲೆಕ್ಕಪತ್ರಗಳ ಪರಿಶೀಲನೆಯನ್ನು ಜಮಾಬಂದಿ ಅಧಿಕಾರಿ ಜಿಲ್ಲಾ ಯೋಜನಾಧಿಕಾರಿ ಉದಯ್ ಶೆಟ್ಟಿ ನಿರ್ವಹಿಸಿ ಹಿಂದೆ ಪಂಚಾಯತ್ ಜಮಾಬಂದಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಪರಿಶೀಲಿಸುವ ಕಾಲಘಟ್ಟ ಇದಿತು ಆದರೆ ಇಂದು ಮಾಹಿತಿ ಹಕ್ಕಿನಲ್ಲೆ ಸ್ಥಳೀಯಾಡಳಿತದ ಕದ ತಟ್ಟುತ್ತಾರೆ ಈ ಹಿನ್ನಲೆಯಲ್ಲಿ ಜಮಾಬಂದಿ ಔಪಚಾರಿಕವಾಗಿ ನಡಯುತ್ತಿದೆ ಎಂದರು.
ಜಮಾಬಂದಿ ಸಹಾಯಕ ಅಧಿಕಾರಿಗಳಾಗಿ ಆನಂದ್ ನಾಯ್ಕ್ ವರದಿ ವಾಚಿಸಿದರು.ಸಹಾಯಕಾಗಿ ಸುಧಾಕರ್ ಆಚಾರ ಸಹಕರಿಸಿದರು. ಪಂಚಾಯತ್ ರಾಜ್ ಇಂಜಿನಿಯರ್ ಹರ್ಷಿತ್, ಆಡಳಿತಾಧಿಕಾರಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪಂಚಾಯತ್ ಮಾಜಿ ಅಧ್ಯಕ್ಷರು, ಸದಸ್ಯರು, ಸಂಜೀವಿನ ಸಂಘಟನೆ ಪದಾಧಿಕಾರಿಗಳು, ಗ್ರಾಮಸ್ಥರು ಭಾಗಿಯಾದರು. ಜಮಾಬಂದಿಯನ್ನು ಪಂಚಾಯತ್ ಪಿಡಿಒ ಉಮೇಶ್ ನಿರ್ವಹಿಸಿದರು.
















