ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಪ್ರತಿಷ್ಟಿತ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಪ್ರಧಾನ ಕಚೇರಿ ವಠಾರದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಮಾನ್ಯ ಅಧ್ಯಕ್ಷರಾದ ಎಸ್. ಶೀನ ಪೂಜಾರಿ ಅವರು ವಹಿಸಿ, ಮಾತನಾಡಿ, ಸಂಘದಿಂದ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿಯನ್ನು ನೀಡುವುದರೊಂದಿಗೆ 2025-26ನೇ ಸಾಲಿನಲ್ಲಿ ಸಂಘವು 105.23 ಕೋಟಿಯಷ್ಟು ಸಾಲ ನೀಡಿ ಸಂಘವು ಗಳಿಸಿದ ಲಾಭ ರೂ.2.53 ಕೋಟಿಯಲ್ಲಿ ವಿವಿಧ ಖಾತೆಗಳಿಗೆ ಹಂಚಿಕೆ ಮಾಡಿದ ಮೇಲೆ ಪಾಲುದಾರ ಸದಸ್ಯರಿಗೆ ಶೇ.17 ಡಿವಿಡೆಂಡನ್ನು ಘೋಷಿಸಿದರು. ಸಂಘವು ವರದಿ ಸಾಲಿನಲ್ಲಿ ಸುಮಾರು 502 ಕೋಟಿಗೂ ಮಿಕ್ಕಿದ ವ್ಯವಹಾರವನ್ನು ನಡೆಸಿದ್ದು ಲಾಭವನ್ನು ಗಳಿಸಲು ಸಂಘದ ನೌಕರರ ಸಾಧ್ಯವಾಗಿರುವುದಕ್ಕೆ ಮತ್ತು ಸದಸ್ಯರ ಸಹಕಾರದಿಂದ ಗಮನಾರ್ಹವಾದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.
ಸುಧಾ ಸಿ. ಶೆಟ್ಟಿ , ಸಂಧ್ಯಾರಾಣಿ ಶೆಟ್ಟಿ ಮತ್ತು ಸುಷ್ಮಿತಾ ಇವರ ಪ್ರಾರ್ಥನೆಯೊಂದಿಗೆ ಸಭೆಯ ಕಲಾಪಗಳು ಪ್ರಾರಂಭವಾಯಿತು. ಮಹಾಸಭೆಯ ನಡವಳಿಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಾಗೂ ಸಂಘದ ವರದಿಯನ್ನು ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾದ ಸಬಿತಾ ಅವರು ನೀಡಿದರು.
ಇತ್ತೀಚಿಗೆ ಸೇವಾ ನಿವೃತ್ತಿಗೊಂಡ ಸಂಘದ ಸಿಬ್ಬಂದಿಯವರಾದ ನಾರಾಯಣ ಬಿ., ರಾಜ್ಯ ಮಟ್ಟದ ಕರಾಟೆ ಸ್ಫರ್ಧೆಯಲ್ಲಿ ವಿಜೇತರಾದ ಅವನಿ ಎ. ಪೂಜಾರಿ , ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕರುಣಾಕರ ಗಾಣಿಗ , 2025-26ನೇ ಸಾಲಿನಲ್ಲಿ SSLC alfli ರಾಜ್ಯಕ್ಕೆ ದ್ವೀತಿಯ ಸ್ಥಾನವನ್ನು ಪಡೆದ ಅನ್ವರ್ಥ ಪೂಜಾರಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು
ಕ್ಲಪ್ತ ಸಮಯಕ್ಕೆ ಸರಿಯಾಗಿ ಕೃಷಿ ಪೂರಕ ಸಾಲ ಮರುಪಾವತಿ ಮಾಡಿರುವ ರೈತ ಸದಸ್ಯರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು . ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಕ್ರಮವಾಗಿ 7ನೇ ತರಗತಿ ಹಾಗೂ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ 2025-26ನೇ ಸಾಲಿನಲ್ಲಿ SSLC ಹಾಗೂ PUC ಅಂತಿಮ ಪರೀಕ್ಷೆಯಲ್ಲಿ ಶೇಕಡಾ 95 ಮತ್ತು ಅದಕ್ಕಿಂತ ಜಾಸ್ತಿ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಗೌರವ ಧನ ನೀಡಿ ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಸಂಜೀವ ಪೂಜಾರಿ, ನಿರ್ದೇಶಕರಾದ ಕೆ ಮಹಾಲಿಂಗ, ಕೆ.ವಿಕಾಸ ಹೆಗ್ಡೆ , ರಾಮ ಕಿಶನ್ ಹೆಗ್ಡೆ ಬಿವಿ, ಅಶೋಕ ಪೂಜಾರಿ, ಅನುಪಮ ಶೆಟ್ಟಿ, ಸವಿತಾ ಪೂಜಾರಿ, ವೀರಾ, ಸುರೇಶ ಪೂಜಾರಿ ಉಪಸ್ಥಿತರಿದ್ದರು.
ನಿರ್ದೇಶಕರಾದ ರಾಮ ಕಿಶನ್ ಹೆಗ್ಡೆ ಸ್ವಾಗತಿಸಿದರು. ನಿರ್ದೇಶಕರಾದ.ವಿಕಾಸ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕರಾದ ಅಶೋಕ ಪೂಜಾರಿ ಧನ್ಯವಾದ ಸಮರ್ಪಿಸಿದರು. ಉಪ ನಿರ್ವಹಣಾದಿಕಾರಿರವರಾದ ಕೆ ಎನ್ ಗೌತಮ ಅವರು ಕಾರ್ಯಕ್ರಮ ನಿರೂಪಿಸಿದರು.
















