ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾವುದೇ ಭಾಷೆಯಲ್ಲಿ ಮಾತನಾಡಿದರು ಅದು ಹೃದಯ ಗೆಲ್ಲುವಂತಿರಬೇಕು. ಮನಸುಗಳನ್ನು ಕಟ್ಟುವಂತಿರಬೇಕು. ಆ ಮುಖೇನ ಮನೆ, ಸಮಾಜ, ದೇಶ ಸ್ವಸ್ಥವಾಗಲು ಭಾಷೆ ಕಾರಣವಾಗುತ್ತದೆ. ಅಂತಹ ಭಾಷೆಯ ಮೂಲಕ ಸಂಸ್ಕೃತಿಯನ್ನು ತಿಳಿಯುವಂತಾಗಬೇಕು ಎಂದು ಸಿದ್ದಾಪುರದ ಜ್ಞಾನಸರಸ್ವತಿ ಪದವಿ-ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಸುಜನ್ ಕುಮಾರ್ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಭಾಷಾ ಸಂಘ ಲಿಂಗ ಕಲ್ಪವೃಕ್ಷ ಇದರ ವಾರ್ಷಿಕ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಆಲಿಸುವಿಕೆ, ಓದುಗಾರಿಕೆ, ಮಾತುಗಾರಿಕೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಮೂಲಕ ಎಲ್ಲಾ ಭಾಷೆಗಳನ್ನು ಕಲಿತು ಬಳಸಿರಿ ಎಂದರು.
ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮ ಸಂಯೋಜಕರಾದ ಸ್ವಾತಿ ಜಿ. ರಾವ್, ಪ್ರವೀಣಾ ಎಮ್. ಪೂಜಾರಿ, ಮೇಘಾ ಎಸ್. ಭಟ್, ಸರೋಜಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಿಶಿಕಾ ಅತಿಥಿಗಳನ್ನು ಪರಿಚಯಿಸಿದರು. ಸೈಮಾ ಶೇಖ್ ಸ್ವಾಗತಿಸಿ, ಸಿರಿ ನಿರೂಪಿಸಿ, ನವ್ಯ ವಂದಿಸಿದರು.
















