ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬಾಳ್ಕುದ್ರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ಸಂಘದ ಅಧ್ಯಕ್ಷ ಶ್ರೀಪತಿ ಅಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರುಗಿತು.
ವರದಿ ಸಾಲಿನ ಲಾಭಾಂಶ ವಿಂಗಡನೆಯಲ್ಲಿ ಸಂಘದ ಹಾಲು ಉತ್ಪಾದಕ ಸದಸ್ಯರಿಗೆ ಶೇಕಡಾ 65 ಪರ್ಸೆಂಟ್ ಬೋನಸ್ ವಿತರಿಸಲಾಯಿತು. ಸದಸ್ಯರ ಷೇರಿಗೆ ಶೇಕಡಾ 25 ಶೇ. ಡೆವಿಡೆಂಟ್ ಘೋಷಿಸಲಾಯಿತು.
ಸಂಘಕ್ಕೆ ವಾರ್ಷಿಕವಾಗಿ ಅತಿಹೆಚ್ಚು ಹಾಲು ನೀಡಿದ ಸದಸ್ಯೆ ಸಾವಿತ್ರಿ ಹಾಗೂ ಹಿರಿಯ ಹಾಲು ಉತ್ಪಾದಕ ಸದಸ್ಯೆ ಲಲಿತಾ ಇವರುಗಳನ್ನು ಗೌರವಿಸಲಾಯಿತು.
ಒಕ್ಕೂಟದ ವಿಸ್ತರಣಾಧಿಕಾರಿ ಉಮೇಶ ಕುಂದರ್ ಹಸು ಸಾಕಾಣಿಕೆ ಹಾಗೂ ಪಶುಗಳ ಆರೋಗ್ಯದ ಬಗ್ಗೆ ಹಾಲು ಉತ್ಪಾದಕರಿಗೆ ವಿವರವಾಗಿ ತಿಳಿಸಿದರು.
ಸಂಘದ ನಿರ್ದೇಶಕರುಗಳಾದ ಬಾಬು ರಾಜೇಂದ್ರ ಐತಾಳ, ಅನಂತಯ್ಯ ನಾಯಕ್, ಸೈಮನ್ ಡಿ ಆಲ್ಮೇಡ, ವಲೇರಿಯನ್ ಡಿಸೋಜ, ಸಾವಿತ್ರಿ , ಗೋಪಾಲ ಗಾಣಿಗ, ರೇಖಾ ಭಂಡಾರಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ನಾಗರತ್ನ ಗಾಣಿಗ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ನಾಗರತ್ನ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಜಯರಾಮ ಐತಾಳರು ವಂದನಾರ್ಪಣೆ ಮಾಡಿದರು.
















