Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಡಾ. ರಾಜೇಶ್ ಬಾಯರಿ ಅವರಿಗೆ ಆಯುರ್ಭೂಷಣ ಪ್ರಶಸ್ತಿ
    ಊರ್ಮನೆ ಸಮಾಚಾರ

    ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಡಾ. ರಾಜೇಶ್ ಬಾಯರಿ ಅವರಿಗೆ ಆಯುರ್ಭೂಷಣ ಪ್ರಶಸ್ತಿ

    Updated:28/09/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಭಾರತೀಯ ಪಾರಂಪರಿಕ ಆಯುರ್ವೇದ ವೈದ್ಯಕೀಯ ಪದ್ಧತಿಯ ಸಂರಕ್ಷಣೆ, ಔಷಧ ಸಂಶೋಧನೆ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿರುವ ತಾಲೂಕಿನ ಜನಪ್ರಿಯ ಆಯುರ್ವೇದ ವೈದ್ಯ, ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಅವರು ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ನೀಡುವ ಪ್ರತಿಷ್ಠಿತ ಆಯುರ್ಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

    Click Here

    Call us

    Click Here

    ಅವರು ಕುಂದಾಪುರದ ಆಲೂರಿನ ಅತ್ಯಂತ ಗ್ರಾಮೀಣ ಪ್ರದೇಶವಾದ ಕಳಿಯಲ್ಲಿ ಆಯುರ್ವೇದ ಚಿಕಿತ್ಸಾಲಯ ಆರಂಭಿಸುತ್ತೇನೆ ಎಂದಾಗ ಆರಂಭದಲ್ಲಿ ಹಲವರು ಅಪಹಾಸ್ಯ ಮಾಡಿದ್ದರು. ಆದರೆ ಹಿರಿಯರು, ಪರಂಪರೆ ಮತ್ತು ಪ್ರಕೃತಿಗೆ ಗೌರವ ನೀಡುವ ಮನೋಭಾವದ ಡಾ. ರಾಜೇಶ್ ಬಾಯರಿಯವರ ಇಚ್ಛಾಶಕ್ತಿ ಅಚಲವಾಗಿತ್ತು. 2008ರ ಜೂನ್ 5ರಂದು ಗಿಡ ನೆಟ್ಟು ಸಂಕಲ್ಪ ಮಾಡಿ, ತಂದೆ ಮಹಾಬಲ ಬಾಯರಿ ಹಾಗೂ ತಾಯಿ ಕಲಾವತಿ ಅವರ ಆಶೀರ್ವಾದದೊಂದಿಗೆ 2010ರಲ್ಲಿ ತಮ್ಮ ಜಮೀನಿನಲ್ಲೇ ಕೆಲವೇ ಸಾವಿರ ರೂಪಾಯಿ ಬಂಡವಾಳದಲ್ಲಿ ಒಂದು ಕೋಣೆಯ ಚಿಕಿತ್ಸಾಲಯಕ್ಕೆ ನಾಂದಿ ಹಾಡಿದರು. ಆರಂಭದಲ್ಲಿ ರೋಗಿಗಳನ್ನು ಪರೀಕ್ಷಿಸುವುದರಿಂದ ಹಿಡಿದು ಔಷಧಿ-ಕಷಾಯ ತಯಾರಿಯವರೆಗಿನ ಎಲ್ಲಾ ಕಾಯಕಗಳನ್ನು ಅವರೊಬ್ಬರೇ ನಿಭಾಯಿಸುತ್ತಿದ್ದರು.

    ಬೆಂಗಳೂರಿನಲ್ಲಿ ಸೆ.26ರಂದು ನಡೆಯಲಿರುವ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಡಾ. ರಾಜೇಶ್ ಬಾಯರಿ ಅವರಿಗೆ ಈ ಪ್ರತಿಷ್ಠಿತ ಗೌರವ ಪ್ರದಾನ ಮಾಡಲಾಗುತ್ತದೆ.

    ಇದನ್ನೂ ಓದಿ ► ಅ.4ರಂದು ಆಲೂರು ಚಿತ್ರಕೂಟದಲ್ಲಿ ʼಚಿತ್ರಕೂಟ ಆಯುರ್ವೇದ ಹಬ್ಬʼ ವಿವಿಧ ಸ್ಪರ್ಧೆಗಳ ಆಯೋಜನೆ – https://kundapraa.com/?p=102025 .

    ಜಾಗತಿಕ ಮಟ್ಟದಲ್ಲಿ ಚಿತ್ರಕೂಟದ ಹೆಗ್ಗುರುತು:
    2011ರಲ್ಲಿ ಪತ್ನಿ ಡಾ. ಅನುಲೇಖಾ ಬಾಯರಿ ಅವರ ಸಾಥ್ ದೊರೆತ ಬಳಿಕ ಈ ಪ್ರಯತ್ನ ಮತ್ತಷ್ಟು ವಿಸ್ತಾರಗೊಂಡಿತು. ನೈಸರ್ಗಿಕ ಚಿಕಿತ್ಸೆ ಮತ್ತು ಪರಿಣಾಮಕಾರಿ ಕೈಗುಣದ ಫಲವಾಗಿ ಚಿತ್ರಕೂಟದ ಕೀರ್ತಿ ದೇಶ-ವಿದೇಶಗಳಿಗೆ ಹಬ್ಬಿತು. ಪ್ರಸ್ತುತ ಈ ಪುಟ್ಟ ಹಳ್ಳಿಯ ಚಿಕಿತ್ಸಾಲಯವನ್ನು ಹುಡುಕಿಕೊಂಡು ಅಮೆರಿಕ, ಯುರೋಪ್ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿರುವುದು ಇವರ ನಿಸ್ವಾರ್ಥ ಸೇವೆಗೆ ಸಾಕ್ಷಿ.

    Click here

    Click here

    Click here

    Call us

    Call us

    18 ಎಕರೆಯಲ್ಲಿ ಪರಿಸರಸ್ನೇಹಿ ಆರೋಗ್ಯಧಾಮ:
    ಚಿತ್ರಕೂಟವು ಇಂದು 18 ಎಕರೆ ವಿಸ್ತಾರವಾದ ಹಸಿರಿನ ಮಡಿಲಲ್ಲಿ ಪಾರಂಪರಿಕ ಚಿಕಿತ್ಸಾ ತಾಣವಾಗಿ ಕಂಗೊಳಿಸುತ್ತಿದೆ. ಇಲ್ಲಿ 30ಕ್ಕೂ ಹೆಚ್ಚು ತಳಿಗಳ ದೇಸಿ ಹಸುಗಳಿರುವ ಗೋಶಾಲೆಯಿದ್ದು, ಚಿಕಿತ್ಸೆಗೆ ಅಗತ್ಯವಿರುವ ತುಪ್ಪವನ್ನು ಸ್ಥಳದಲ್ಲೇ ಸಿದ್ಧಪಡಿಸಲಾಗುತ್ತದೆ. ಜೊತೆಗೆ 250ಕ್ಕೂ ಹೆಚ್ಚು ಪ್ರಭೇದದ ಅಪರೂಪದ ಗಿಡಮೂಲಿಕೆಗಳಿರುವ ಔಷಧ ವನವಿದ್ದು, ರಾಸಾಯನಿಕ ಮುಕ್ತವಾಗಿ ಪಾರಂಪರಿಕ ರೀತಿಯಲ್ಲಿ ಔಷಧಿ ತಯಾರಿಸಲಾಗುತ್ತದೆ.

    ರೋಗಿಯ ನಾಡಿ ಪರೀಕ್ಷೆ, ದೈಹಿಕ ಪ್ರಕೃತಿ ಹಾಗೂ ಜೀವನಶೈಲಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ವೈಯಕ್ತಿಕ ಚಿಕಿತ್ಸಾ ಕ್ರಮ ಹಾಗೂ ಪಂಚಕರ್ಮ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಸಮೀಪದಲ್ಲೇ ಕೊಲ್ಲೂರು ಮೂಕಾಂಬಿಕಾ ಮತ್ತು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯಗಳಿರುವುದರಿಂದ ಆಧ್ಯಾತ್ಮಿಕ ನೆಮ್ಮದಿಯೂ ಲಭ್ಯ. ಚಿಕಿತ್ಸಾಲಯದ ಮೂಲಕ ಆಲೂರು ಸುತ್ತಮುತ್ತಲಿನ ಗ್ರಾಮದ ಹತ್ತಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿ, ಗ್ರಾಮೀಣ ಭಾಗದ ಆರ್ಥಿಕ ಚಿತ್ರಣವನ್ನೇ ಬದಲಿಸಿದ್ದಾರೆ.

    ಗ್ರಾಮೀಣ ಭಾಗದಲ್ಲೇ ನೆಲೆನಿಂತು ಪ್ರಾಚೀನ ಆಯುರ್ವೇದ ಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ಡಾ. ರಾಜೇಶ್ ಬಾಯರಿ ಅವರ ನಿಸ್ವಾರ್ಥ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಂಸ್ಥೆಗಳು ಈ ಬಾರಿಯ ಆಯುರ್ಭೂಷಣ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಕರಾವಳಿ ಭಾಗಕ್ಕೆ ಸಂದ ಮಹಾನ್ ಗೌರವವಾಗಿದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಐಎಂಜೆಐಎಸ್‍ಸಿ ವಿದ್ಯಾರ್ಥಿಗಳಿಗೆ ವೇಗದ ಗಣಿತ ಲೆಕ್ಕಾಚಾರದ ಸ್ಮಾರ್ಟ್ ವಿಧಾನಗಳ ಕುರಿತು ಸಂವಾದ

    28/09/2026

    ಬಹುಮುಖ ಪ್ರತಿಭೆಗಳಿಗೆ ಪ್ರೋತ್ಸಾಹವೇ ಸಾಧನೆಯ ಮೆಟ್ಟಿಲು: ಸುರೇಶ್ ಬೆಟ್ಟಿನ್

    28/09/2026

    ವಲಯ ಮಟ್ಟದ ಕ್ರೀಡಾಕೂಟ: ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

    28/09/2026
    Leave A Reply Cancel Reply

    3 × 4 =

    Call us

    Click Here

    Call us

    Call us

    Call us
    Highest Viewed Recently
    • ಐಎಂಜೆಐಎಸ್‍ಸಿ ವಿದ್ಯಾರ್ಥಿಗಳಿಗೆ ವೇಗದ ಗಣಿತ ಲೆಕ್ಕಾಚಾರದ ಸ್ಮಾರ್ಟ್ ವಿಧಾನಗಳ ಕುರಿತು ಸಂವಾದ
    • ಬಹುಮುಖ ಪ್ರತಿಭೆಗಳಿಗೆ ಪ್ರೋತ್ಸಾಹವೇ ಸಾಧನೆಯ ಮೆಟ್ಟಿಲು: ಸುರೇಶ್ ಬೆಟ್ಟಿನ್
    • ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ: ಆಳ್ವಾಸ್‌ನ 8 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
    • ವಲಯ ಮಟ್ಟದ ಕ್ರೀಡಾಕೂಟ: ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
    • ಭಾರ ಎತ್ತುವ ಸ್ಪರ್ಧೆಯಲ್ಲಿ ವಿಶ್ವ ವಿನಾಯಕ ಕಾಲೇಜಿನ ವಿದ್ಯಾರ್ಥಿ ಶಮಂತ್‌ಗೆ ಬೆಳ್ಳಿ ಪದಕ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.