ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ನೇತೃತ್ವದಲ್ಲಿ ಕಲ್ಪತರು ಸ್ವ – ಸಹಾಯ ಸಂಘಗಳ ವಾರ್ಷಿಕ ಸಭೆ ಪಾಂಡೇಶ್ವರ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಕೋಟ ಠಾಣೆಯ ಕ್ರೈಂ ವಿಭಾಗದ ಪಿಎಸ್‌ಐ ಮಹಾಂತೇಶ್ ಅವರು ಪ್ರಸ್ತುತ ಮೊಬೈಲ್ ಅಪರಾಧ ಬಗ್ಗೆ ಮಹಿಳಾ ಸುರಕ್ಷಿತೆ ಬಗ್ಗೆ ಮಾಹಿತಿ ಒದಗಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ನರೇಂದ್ರ ಕುಮಾರ್ ಕೋಟ ಒಟ್ಟಾರೆ ಸಾಮಾಜಿಕ ವ್ಯವಸ್ಥೆ ಅಡಿಯಲ್ಲಿ ಎಲ್ಲರೂ ಒಗ್ಗಟ್ಟು ಒಮ್ಮತ ದಲ್ಲಿ ಬಾಳಬೇಕು ಎಂಬುದನ್ನು ಸೂಚಿಸಿದರು.
ಸಾಹಿತಿ ನರೇಂದ್ರ ಕುಮಾರ್, ಕೋಟ ಆರಕ್ಷರ ಕ್ರೈಂ ವಿಭಾಗದ ಠಾಣಾಧಿಕಾರಿ ಮಹಾಂತೇಶ್ ಜಬಾಗೌಡ ಇವರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ರವಿಕಿರಣ್ ಪೂಜಾರಿ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಸ್ತಾನ ಬಿಲ್ಲವ ಸಂಘದ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಪಾಂಡೇಶ್ವರ ಪಂಚಾಯತ್ ಮಾಜಿ ಸದಸ್ಯೆ ಸುಜಾತಾ ವೆಂಕಟೇಶ್ ಪೂಜಾರಿ ಉಸ್ಥಿತಸಿದ್ದರು.
ಕಲ್ಪತರು ಸಂಘದ ಸೀಮಾ ವಿಜಯ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರೆ, ಉಷಾ ಗಣೇಶ್ ಪೂಜಾರಿ ಸ್ವಾಗತಿಸಿದರು. ಸುರೇಶ್ ಪೂಜಾರಿ ಪ್ರಸ್ತಾವನೆ ಸಲ್ಲಿಸಿದರು. ಜ್ಯೋತಿ ಕೃಷ್ಣ ಪೂಜಾರಿ ವಂದಿಸಿದರು.
















