ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ತೆಕ್ಕಟ್ಟೆ ಕೊಮೆ ನಿವಾಸಿ ಹದಿನಾಲ್ಕು ವರ್ಷ ಪ್ರಾಯದ ಬಾಲಕನೋರ್ವನಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ಚೇರ್ ಮತ್ತು ಆರ್ಥಿಕ ನೆರವನ್ನು ಭಾನುವಾರ ನೀಡಲಾಯಿತು. ಅಲ್ಲದೇ ಬಾಲಕನ ಸಹೋದರಿಯ ಪಿ.ಯು.ಸಿ.ವರೆಗಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚವನ್ನು ಕ್ಲಬ್ ವತಿಯಿಂದ ಬರಿಸುವ ಬಗ್ಗೆ ಆಶ್ವಾಸನೆ ನೀಡಲಾಯಿತು.

ಈ ಸಂದರ್ಭ ಮಾಜಿ ಸಹಾಯಕ ಗವರ್ನರ್ ಹಾಗೂ ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ, ಜೋನಲ್ ಲೆಫ್ಟಿನೆಂಟ್ ದಯಾನಂದ್ ಆಚಾರ್, ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ. ಮೆಂಡನ್, ಮಾಜಿ ಅಧ್ಯಕ್ಷರಾದ ಡಾ. ಗಣೇಶ್ ಯು, ಸುರೇಶ್ ಆಚಾರ್, ಪ್ರಕಾಶ್ ಹಂದಟ್ಟು, ಸದಸ್ಯರಾದ ಭಾಸ್ಕರ್ ಪೂಜಾರಿ, ರಾಘವೇಂದ್ರ ಪೂಜಾರಿ, ವಸಂತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.











