ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವೆಂಬರ್ 1ರ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಹಾಗೂ ‘ಡಾ.ಎಚ್. ಶಾಂತರಾಮ್ ಯಕ್ಷಗಾನ ಪುರಸ್ಕಾರ’ ಕಾರ್ಯಕ್ರಮದ ಕುರಿತ ಆಯ್ಕೆ ಸಮಿತಿಯ ಪೂರ್ವಭಾವಿ ಸಭೆಯು ಡಾ.ಎಚ್. ಶಾಂತರಾಮ್ ಅವರ ಸ್ವಗೃಹದಲ್ಲಿ ನಡೆಯಿತು.
ಯಕ್ಷಗಾನ ಪುರಸ್ಕಾರಕ್ಕೆ ಬಡಗು ತಿಟ್ಟಿನ ಖ್ಯಾತ ಹಾಸ್ಯಗಾರರಾದ ಮಹಾಬಲೇಶ್ವರ ಭಟ್, ಕ್ಯಾದಗಿ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀರಂಗ ತುಲಾಭಾರ ಪ್ರಸಂಗದ ತಾಳಮದ್ದಲೆ ಮಾಡಲು ನಿರ್ಧರಿಸಲಾಯಿತು.
ಹಿಮ್ಮೇಳದ ಭಾಗವತರಾಗಿ ಚಂದ್ರಕಾಂತ, ಮೂಡುಬೆಳ್ಳೆ, ಮದ್ದಲೆಯಲ್ಲಿ ಎನ್.ಜಿ ಹೆಗಡೆ,ಯಲ್ಲಾಪುರ, ಚಂಡೆಯಲ್ಲಿ ರಾಮಕೃಷ್ಣ,ಮಂದಾರ್ತಿ. ಅರ್ಥಧಾರಿಗಳಾಗಿ ರಾಧಾಕೃಷ್ಣ,ಕಲ್ಚಾರ್, ಪವನ್,ಕಿರಣಕೆರೆ, ಹರೀಶ್, ಬಲಂತಿಮೊಗರು, ಸುಜಯೇಂದ್ರ ಹಂದೆ ಕೋಟ, ಸ್ಫೂರ್ತಿ ಶಾನುಭಾಗ್, ಮಂದಾರ್ತಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪೂರ್ವಭಾವಿ ಸಭೆಯಲ್ಲಿ ಡಾ.ಎಚ್. ಶಾಂತರಾಮ್, ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ. ಶಾಂತರಾಮ್ ಪ್ರಭು, ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಪುರಸ್ಕಾರ ಸಮಿತಿಯ ಸದಸ್ಯರಾದ ಕಿಶನ್ ಹೆಗ್ಡೆ, ಪಳ್ಳಿ, ಮುರಳಿ, ಕಡೆಕಾರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮತ್ತು ಕಾಲೇಜಿನ ಲಲಿತ ಕಲಾ ಸಂಘದ ಸಂಚಾಲಕರಾದ ಶಶಾಂಕ್ ಪಟೇಲ್, ಕೆಳಮನೆ ಉಪಸ್ಥಿತರಿದ್ದರು.
















