Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸವಾಲುಗಳನ್ನು ಎದುರಿಸಲು ಶಿಕ್ಷಕರು ಸದಾ ತಯಾರಾಗಿರಬೇಕು: ಉಪನಿರ್ದೇಶಕ ಲೋಕೇಶ್
    ಊರ್ಮನೆ ಸಮಾಚಾರ

    ಸವಾಲುಗಳನ್ನು ಎದುರಿಸಲು ಶಿಕ್ಷಕರು ಸದಾ ತಯಾರಾಗಿರಬೇಕು: ಉಪನಿರ್ದೇಶಕ ಲೋಕೇಶ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಇಂದಿನ ಸ್ಪರ್ಧಾತ್ಮಕ ಶಿಕ್ಷಣ ರಂಗದಲ್ಲಿ ಶಿಕ್ಷಕರ ಎದುರು ಹಲವಾರು ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಲು ನಮ್ಮ ನಮ್ಮ ಶಿಕ್ಷಕರು ಸಮರ್ಥರಾಗಿದ್ದರೂ ಕೂಡ, ಸವಾಲಿನ ಒಳಮಿಡಿತಗಳನ್ನು ಅರ್ಥಮಾಡಿಕೊಂಡು ಆ ದಿಸೆಯಲ್ಲಿ ಸಾಗಿ ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸಿ ಶೈಕ್ಷಣಿಕ ರಂಗವನ್ನು ಬಲಪಡಿಸಬೇಕು. ಜೊತೆಗೆ ಹೊಸ ಹೊಸ ಶೈಕ್ಷಣಿಕ ಸಾಧ್ಯತೆಗಳ ಬಗ್ಗೆ ತೆರೆದುಕೊಳ್ಳುತ್ತಾ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಲೋಕೇಶ್ ಸಿ. ತಿಳಿಸಿದರು.

    Click Here

    Call us

    Click Here

    ಅವರು ಶನಿವಾರ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಏಸ್‌ಕ್ರೀಟ್ ಅಡೇಷನ್ಸ್ ಇಂಡಿಯಾ ಪ್ರೈ.ಲಿ, ಉಸಿರು ಕೋಟ ಅವರ ಆಶ್ರಯದಲ್ಲಿ ನಡೆದ ೫ನೆಯ ವರ್ಷದ ಡಾ| ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಸಮಾರಂಭದ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಶಿಕ್ಷಣ ರಂಗದ ಸೂಕ್ಷ್ಮ ಒಳತೋಟಿಗಳನ್ನು ಅರಿತು ಶಿಕ್ಷಕರು ಸಾಧನೆ ಮಾಡುತ್ತಿರುವುದು ಶ್ಲಘನೀಯ. ಇಂತಹ ಶ್ಲಾಘನೀಯ ಕಾರ್ಯಗಳಿಗೆ ಸದಾ ಪ್ರೋತ್ಸಾಹ ಕೊಡುವ ದಾನಿಗಳು, ಪ್ರೇರಕರು ದಾರಿದೀಪಗಳು ಬಹಳ ಮುಖ್ಯ ಆಗುತ್ತದೆ. ಆ ದಿಸೆಯಲ್ಲಿ ನಮ್ಮೆಲ್ಲ ಶೈಕ್ಷಣಿಕ ರಂಗಕ್ಕೆ ಬೆಂಬಲವಿಟ್ಟ ಆನಂದ ಸಿ ಕುಂದರ್‌ರವರ ಕಾರ್ಯ ನಿಜವಾಗಿಯೂ ಕೂಡ ಅನುಕರಣೀಯ ಎಂದರು.

    ವೇದಿಕೆಯಲ್ಲಿ ಗೀತಾನಂದ ಫೌಂಡೇಶನ್‌ನ ಆನಂದ ಸಿ ಕುಂದರ್ ಶಿಕ್ಷಕರ ಜವಾಬ್ದಾರಿ ಗುರುತರವಾದದ್ದು ಇಡೀ ದೇಶದ ಭವಿಷ್ಯ ನಿಂತಿರುವುದು ಶಿಕ್ಷಣ ರಂಗದಲ್ಲಿ. ಹಾಗಾಗಿ ಅಂತಹ ಶಿಕ್ಷಕರನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ನುಡಿದರು.

    ವೇದಿಕೆಯಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಶೋಕ ತೆಕ್ಕಟ್ಟೆ ನಿವೃತ್ತ ಅಧಿಕಾರಿಯಾಗಿರುವ ಶಿವರಾಮ್, ಟ್ರಸ್ಟಿಗಳಾದ ಸುಬ್ರಾಯ್ ಆಚಾರ್, ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಸ್ಥರಾದ ಪ್ರೇಮಾನಂದ ಉಪಸ್ಥಿತರಿದ್ದರು.

    Click here

    Click here

    Click here

    Call us

    Call us

    ಸಮಾರಂಭದ ಅಧ್ಯಕ್ಷತೆಯನ್ನು ಕೋಟತಟ್ಟು ಪಂಚಾಯತ್ ಪಿಡಿಓ ರವೀಂದ್ರ ರಾವ್ ವಹಿಸಿದ್ದರು. ಶಿಕ್ಷಕ, ಸಂಯೋಜಕ ಸತೀಶ ವಡ್ಡರ್ಸೆ ಸ್ವಾಗತಿಸಿದರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ವಂದಿಸಿದರು.

    ಈ ಕಾರ್ಯಕ್ರಮವನ್ನು ಶಿಕ್ಷಕಿ ನಾಗರತ್ನ ಗುಂಡ್ಮಿ ನಿರೂಪಿಸಿದರು. ಬಳಿಕ ಪ್ರಾಥಮಿಕ ಶಾಲೆಯ 11 ಶಿಕ್ಷಕರು ಹಾಗೂ ಪ್ರೌಢಶಾಲೆಯ 13 ಶಿಕ್ಷಕರನ್ನು ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಲಾಯಿತು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ಚೇರ್‌ ವಿತರಣೆ

    28/09/2026

    ಪಾಂಡೇಶ್ವರ: ಕಲ್ಪತರು ಸ್ವ – ಸಹಾಯ ಸಂಘಗಳ ವಾರ್ಷಿಕ ಸಭೆ

    28/09/2026

    ಮೂಡ್ಲಕಟ್ಟೆ: ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

    28/09/2026
    Leave A Reply Cancel Reply

    five − 4 =

    Call us

    Click Here

    Call us

    Call us

    Call us
    Highest Viewed Recently
    • ಸವಾಲುಗಳನ್ನು ಎದುರಿಸಲು ಶಿಕ್ಷಕರು ಸದಾ ತಯಾರಾಗಿರಬೇಕು: ಉಪನಿರ್ದೇಶಕ ಲೋಕೇಶ್
    • ಕುಂದಾಪುರ: ‘ಡಾ.ಎಚ್. ಶಾಂತರಾಮ್ ಯಕ್ಷಗಾನ ಪುರಸ್ಕಾರʼ  – ಪೂರ್ವಭಾವಿ ಸಭೆ
    • ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ಚೇರ್‌ ವಿತರಣೆ
    • ಪಾಂಡೇಶ್ವರ: ಕಲ್ಪತರು ಸ್ವ – ಸಹಾಯ ಸಂಘಗಳ ವಾರ್ಷಿಕ ಸಭೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ಚೆಸ್ ಪಂದ್ಯಾಟದಲ್ಲಿ ಪುರುಷರ ವಿಭಾಗ ಎರಡನೇ ಬಾರಿ ಚಾಂಪಿಯನ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.