Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಾಪತ್ತೆಯಾಗಿದ್ದ ಯುವಕ‌ ಶವವಾಗಿ ತೋಟದಲ್ಲಿ ಪತ್ತೆ
    ಊರ್ಮನೆ ಸಮಾಚಾರ

    ನಾಪತ್ತೆಯಾಗಿದ್ದ ಯುವಕ‌ ಶವವಾಗಿ ತೋಟದಲ್ಲಿ ಪತ್ತೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಸ್ನೇಹಿತನ ಮನೆಗೆ ತೆರಳಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಯುವಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿ, ಮೂರು ದಿನಗಳ ಬಳಿಕ ತೋಟವೊಂದರಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ನಡೆದಿದೆ.

    Click Here

    Call us

    Click Here

    ಮೃತ ಯುವಕನನ್ನು ಹೊಸಂಗಡಿ ನಿವಾಸಿ ಕವೀನಾ ನಾಯ್ಕ (26) ಎಂದು ಗುರುತಿಸಲಾಗಿದೆ. ಹಾಲ್ಕಲ್‌ ಬಳಿ ಸ್ವಂತ ಟಿಪ್ಪರ್ ಹೊಂದಿದ್ದ ಅವರು ಕಳೆದ 3–4 ವರ್ಷಗಳಿಂದ ಟಿಪ್ಪರ್ ವ್ಯವಹಾರ ನಡೆಸಿಕೊಂಡು ಬರುತ್ತಿದ್ದರು.

    ಅ.2ರಂದು ‘ತಾರ್ಕಿಮಕ’ ಎಂಬಲ್ಲಿಗೆ ತೆರಳಿ ಬರುವುದಾಗಿ ಮನೆಯವರಿಗೆ ತಿಳಿಸಿ ಕವೀನಾ ನಾಯ್ಕ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಅವರು ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹಾಗೂ ಪರಿಚಿತರು ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ.

    ಈ ನಡುವೆ, ಹೊಸಂಗಡಿಯ ಮಾತಿನಮಠದಲ್ಲಿ ಶೇಖರ ನಾಯ್ಕ ಎಂಬವರ ಮನೆಯ ತೋಟದ ಬಳಿ ಅ.5ರಂದು ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಅದು ಕವೀನಾ ನಾಯ್ಕ ಅವರದ್ದೆಂದು ಗುರುತಿಸಲಾಗಿದೆ. ಶವವು ಅಂಗಾತ ಸ್ಥಿತಿಯಲ್ಲಿ ಬಿದ್ದಿದ್ದು, ಕೊಳೆತ ಸ್ಥಿತಿಯಲ್ಲಿತ್ತು ಎಂದು ತಿಳಿದುಬಂದಿದೆ.

    ಶವ ಪತ್ತೆಯಾದ ಸ್ಥಳವು ಸಾಮಾನ್ಯವಾಗಿ ಮನೆಗೆ ತೆರಳುವ ದಾರಿಯಾಗಿರಲಿಲ್ಲ. ಅಲ್ಲದೆ, ಮೃತದೇಹದ ಕಾಲಿನಲ್ಲಿ ಚಪ್ಪಲಿ ಇರದಿರುವುದು ಸೇರಿದಂತೆ ಕೆಲವು ಅನುಮಾನಾಸ್ಪದ ಸಂಗತಿಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕವೀನಾ ನಾಯ್ಕ ಅವರ ಸಾವಿನ ಕುರಿತು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

    Click here

    Click here

    Click here

    Call us

    Call us

    ಈ ಕುರಿತು ಮೃತರ ಸಹೋದರ ಪ್ರವೀಣ ನಾಯ್ಕ ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಯುವಕನ ಸಾವಿನ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವಂಡ್ಸೆ ಶಾಲೆ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣಾ ಕಾರ್ಯಕ್ರಮ

    06/10/2026

    ಹಂಗಾರಕಟ್ಟೆ ಕಲಾಕೇಂದ್ರದ ಯಕ್ಷ ವಿದ್ಯಾರ್ಥಿಗಳ ಸಮಾವೇಶ ಸಮ್ಮಿಲನ ಕಾರ್ಯಕ್ರಮ

    06/10/2026

    ಟೇಬಲ್ ಟೇನಿಸ್ ಸ್ಪರ್ಧೆಯಲ್ಲಿ ಎಸ್.ವಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

    06/10/2026
    Leave A Reply Cancel Reply

    three × five =

    Call us

    Click Here

    Call us

    Call us

    Call us
    Highest Viewed Recently
    • ವಂಡ್ಸೆ ಶಾಲೆ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣಾ ಕಾರ್ಯಕ್ರಮ
    • ನಾಪತ್ತೆಯಾಗಿದ್ದ ಯುವಕ‌ ಶವವಾಗಿ ತೋಟದಲ್ಲಿ ಪತ್ತೆ
    • ಹಂಗಾರಕಟ್ಟೆ ಕಲಾಕೇಂದ್ರದ ಯಕ್ಷ ವಿದ್ಯಾರ್ಥಿಗಳ ಸಮಾವೇಶ ಸಮ್ಮಿಲನ ಕಾರ್ಯಕ್ರಮ
    • ವೈದ್ಯಕೀಯ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಕಠಿಣ ಪರಿಶ್ರಮ ಅಗತ್ಯ: ಡಾ. ಅರ್ಪಿತಾ ಪ್ರತಾಪ್ ಸಿಂಹ
    • ಟೇಬಲ್ ಟೇನಿಸ್ ಸ್ಪರ್ಧೆಯಲ್ಲಿ ಎಸ್.ವಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.