ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವದ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಗಾಗಿ ಕಾರಂತರ ಬದುಕು-ಬರಹಗಳ ಕುರಿತಾದ ರಸಪ್ರಶ್ನೆ ಸ್ಪರ್ಧೆಯು ಅ. 09 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಪ್ರತಿ ಕಾಲೇಜಿನಿಂದ ಎರಡು ವಿದ್ಯಾರ್ಥಿಗಳ ಒಂದು ತಂಡವು ಭಾಗವಹಿಸಬಹುದಾಗಿದೆ. ಪ್ರಶ್ನೆಗಳು ಕಾರಂತರ ಬದುಕು-ಬರಹದ ಕುರಿತಾಗಿರುತ್ತದೆ. ವಿಜೇತರಿಗೆ ನಗದು ರೂಪದ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಭಾಗವಹಿಸಲು ಆಸಕ್ತಿ ಹೊಂದಿರುವ ತಂಡಗಳು ಲಿಖಿತವಾಗಿ ಅಥವಾ ಮೊಬೈಲ್ ಸಂಖ್ಯೆ: 6362517472 ಅಥವಾ ಇ-ಮೈಲ್ dr.karanthatrustudupi@smail.qom ಇದಕ್ಕೆ ದಿನಾಂಕ ಅ.08ರ ಒಳಗೆ ಹೆಸರನ್ನು ನೋಂದಾಯಿಸುವಂತೆ ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.











