ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬೆಂಗಳೂರಿನ ಪಿಸಿಪಿಎ ಸಭಾಂಗಣದಲ್ಲಿ ನಡೆದ ಸಂಜೋಗ್ ಸಂಗೀತ ಮಹೋತ್ಸವ- ಗುರುವಂದನಾ ಕಾರ್ಯಕ್ರಮದಲ್ಲಿ ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ಕೊಳಲು ವಾದನದಲ್ಲಿ ಅತ್ಯುತ್ತಮ ಪ್ರತಿಭೆ ಹಾಗೂ ಶ್ರೇಷ್ಠತೆಗಾಗಿ ಗಂಗೊಳ್ಳಿಯ ಎಸ್.ವಿ. ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶಾಮ್ ಅವರಿಗೆ ಈಶಾನ್ ಭಾರದ್ವಾಜ್ ಸ್ಮಾರಕ ವಿದ್ಯಾರ್ಥಿವೇತನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾವೇರಿ ಭಾರದ್ವಾಜ್ ಅವರು ಶಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಸಿದ್ಧ ಕೊಳಲು ವಾದಕ ಡಾ. ಪಂಡಿತ್ ಪ್ರವೀಣ್ ಗೋಡ್ಕಿಂಡಿ, ಸಾರಿಕಾ ಪ್ರವೀಣ್ ಗೋಡ್ಕಿಂಡಿ, ಡಾ.ಪಂಡಿತ್ ಕಿರಣ್ ಗೋಡ್ಕಿಂಡಿ, ರಾಧಿಕಾ ಕಿರಣ್ ಗೋಡ್ಕಿಂಡಿ, ಪದ್ಮಜಾ ಗೋಡ್ಕಿಂಡಿ ಹಾಗೂ ಭಾರದ್ವಾಜ್ ಕುಟುಂಬದವರು ಉಪಸ್ಥಿತರಿದ್ದರು. ಶಾಮ್ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ ಹಾಗೂ ಮಾಲತಿ ದಂಪತಿ ಪುತ್ರ.











