ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನದಲ್ಲಿ 37ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾರಂಭವು ಅ.17ರಿಂದ ಅ.19ರ ತನಕ ನಡೆಯಲಿದೆ.
ಅ.17ರ ಬೆಳಿಗ್ಗೆ 11:25ಕ್ಕೆ ಶ್ರೀ ಶಾರದಾಂಬೆಯ ಮೂರ್ತಿ ಪ್ರತಿಷ್ಠಾಪನೆ, ಬೆಳಿಗ್ಗೆ 11:30 ರಿಂದ ಶ್ರೀ ಲಕ್ಷೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ ತಗ್ಗರ್ಸೆ ಇವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.30ಕ್ಕೆ ದುರ್ಗಾ ಹೋಮ, ಮಧ್ಯಾಹ್ನ 12:45ಕ್ಕೆ ಅಕ್ಷರಭ್ಯಾಸ, ರಾತ್ರಿ 07:30ಕ್ಕೆ ರಾತ್ರಿ ಪೂಜೆ ಮತ್ತು ಮಂಗಳಾರತಿ, ರಾತ್ರಿ 11:30ರಿಂದ ಶ್ರೀ ತಿರುಮಲ ವೆಂಕಟರಮಣ ಭಜನಾ ಮಂಡಳಿ ತಗ್ಗರ್ಸೆ ಇವರ ನೇತ್ರತ್ವದಲ್ಲಿ ಅಹೋರಾತ್ರಿ ಭಜನಾ ಸಂಕಿರ್ತನೆ ನಡೆಯಲಿದೆ.
ಅದೇ ದಿನ ಸಂಜೆ 06:30 ಕ್ಕೆ ಕಿರಿಯರು ಮತ್ತು ಹಿರಿಯರಿಗಾಗಿ ಭಕ್ತಿ ಗೀತೆ ಮತ್ತು ಆಶು ಭಾಷಣ ಸ್ಪರ್ಧೆ, ಸಂಜೆ 07:30 ರಿಂದ ಹರ್ಷೇಂದ್ರ ಆಚಾರ್ಯ ನಿರ್ದೇಶನದಲ್ಲಿ ಡ್ಯಾನ್ಸ್ ಗ್ರೂಪ್ ಮಕ್ಕಿಗದ್ದೆ ತಗ್ಗರ್ಸೆ ಇವರಿಂದ ನೃತ್ಯ ವೈಭವ ನಡೆಯಲಿದೆ. ಹಾಗೂ 08:30ಕ್ಕೆ ಗಣ್ಯರಿಗೆ ಹಾಗೂ ಸಾಧಕರಿಗೆ ಸನ್ಮಾನ, ರಾತ್ರಿ 09:00ಕ್ಕೆ ಕಲಾಚಿಗುರು ಕಲಾತಂಡ ಹಳ್ಳಾಡಿ ತ್ರಿವಳಿ ಚೇತನ್ ಅಭಿನಯದ ಹೆಂಗ್ಸ್ರ್ ಪಂಚೈತಿ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 10:00ಕ್ಕೆ ಯಕ್ಷಪಲ್ಲವಿ ಟ್ರಸ್ಟ್ ರಿ. ಯಕ್ಷಗಾನ ಮಂಡಳಿ ಮಾಳಕೋಡ್ ಮೇಳದವರಿಂದ ಯಕ್ಷ ಮಾಣಿಕ್ಯ ಚಿಂತನಾ ಹೆಗೆಡೆ ಮಾಳಕೋಡರ ಗಾನ ಸಾರಥ್ಯದಲ್ಲಿ ಕೃಷ್ಣಾರ್ಜುನ ಕಾಳಗ ಯಕ್ಷಗಾನ ನಡೆಯಲಿದೆ.
ಅ.18ರ ಬೆಳಿಗ್ಗೆ ಸರಸ್ವತಿ ಹೋಮ, ಮಧ್ಯಾಹ್ನ ಪೂಜೆ, ಮಂಗಳಾರತಿ, ಸರ್ವಸೇವಾ ಪೂಜೆ ಮತ್ತು ಮಹಾ ಪೂಜೆ, ರಾತ್ರಿ 7.30ಕ್ಕೆ ರಾತ್ರಿ ಪೂಜೆ, ಮಂಗಳಾರತಿ ನಡೆಯಲಿದೆ. ಅ.19ರ ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿರುವುದು.
ಅದೇ ದಿನ 5:30ಕ್ಕೆ ಹಿರಿಯರಿಗಾಗಿ ಮತ್ತು ಕಿರಿಯರಿಗಾಗಿ ಸಂಗೀತ ಕುರ್ಚಿ, ಸಂಜೆ 06:00ಕ್ಕೆ ಸ್ಥಳೀಯ ಶಾಲೇ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಸಂಜೆ 07:00ಕ್ಕೆ ತಗ್ಗರ್ಸೆ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ರಸ ಸಂಜೆ ಹಾಗೂ ರಾತ್ರಿ 08:00ರಿಂದ ಬಹುಮಾನ ವಿತರಣೆ ನಡೆಯಲಿದೆ.
ರಾತ್ರಿ 09:30ರಿಂದ ಮಂಗಳೂರು ಅರೆಹೊಳೆ ಪ್ರತಿಷ್ಠನಾದ ನಂದಗೋಕುಲ ಕಲಾವಿದರಿಂದ ʼಧರ್ಮಸಂಸ್ಥಾಪನಾರ್ಥಾಯʼ ಧರ್ಮಸ್ಥಳ ಕ್ಷೇತ್ರ ಮಹಿಮೆಯ ನೃತ್ಯರೂಪಕ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
















