ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ (ಜಿ.ಪಿ.ಟಿ) ಸಂಘದ ಉಡುಪಿ ಜಿಲ್ಲಾ ಶಾಖೆಗೆ 2026-31ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು.
ಜಿಲ್ಲಾಧ್ಯಕ್ಷರಾಗಿ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಚೈತ್ರ ಕೆ. ಪಿ̧. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಾರಿಕಾ ಹಾಗೂ ಖಜಾಂಚಿಯಾಗಿ ಪದ್ಮಾವತಿ ಬಿಲ್ಲವ ಆಯ್ಕೆಯಾದರು. ತಾಲೂಕು ಅಧ್ಯಕ್ಷರುಗಳಾಗಿ ಸಂದೀಪ್ ನಾಯ್ಕ (ಬೈಂದೂರು), ಜಯಪ್ಪ ಟಿ (ಕುಂದಾಪುರ), ರವೀಂದ್ರ ಶೆಟ್ಟಿ (ಕಾರ್ಕಳ), ವೀಣಾ (ಬ್ರಹ್ಮಾವರ), ಶಬಾನಾ ಫರ್ವಿನ್ ಶೇಕ್ (ಉಡುಪಿ) ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಪದಾಧಿಕಾರಿಗಳು ಮತ್ತು ನಿರ್ದೇಶಕರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು.











