ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಯುವಕರ ತಂಡ ಸೇರಿ ಒಂದು ವಿನೂತನ ಪ್ರಯತ್ನವಾಗಿ ಮೊಟ್ಟ ಮೊದಲ ಬಾರಿಗೆ ಒಂದು web series ತಯಾರಿಸಿದ್ದಾರೆ. ಮನುಷ್ಯನ ಬದುಕಿನ ಪ್ರತಿಯೊಂದು ಪ್ರತಿಫಲವು ಭೂಮಿಯ ಮೇಲೆ ಅನುಭವಿಸಿಯೇ ತೀರುವಂಥದ್ದು ಇದಕ್ಕೆ ಕರ್ಮ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಕರ್ಮ ಎಂಬ ಶೀರ್ಷಿಕೆಯನ್ನು ಇಟ್ಟು ಮನುಷ್ಯ ತಾನು ಮಾಡುವ ಪಾಪ ಕೃತ್ಯಗಳಿಗೆ ಭೂಮಿಯ ಮೇಲೆ ಅದರ ಎಲ್ಲಾ ಪ್ರಾಯಶ್ಚಿತವನ್ನು ಅನುಭವಿಸುತ್ತಾನೆ.

ಹೆಣ್ಣು ಹೊನ್ನು ಮಣ್ಣು ಇವುಗಳಿಗೆ ನಡೆಯುವ ಅತಿಯಾದ ವ್ಯಾಮೋಹ ಮನುಷ್ಯನನ್ನ ಯಾವ ಮಟ್ಟಕ್ಕೆ ಬೇಕಾದರೂ ಇಳಿಸಬಹುದು ಆದರೆ ಮುಂದಿನ ಕರ್ಮಫಲದ ಯೋಚನೆ ಆತನಿಗಿರುವುದಿಲ್ಲ ಆದರೆ ಮನುಷ್ಯನ ಪಾಪ ಪುಣ್ಯಗಳನ್ನ ದೇವರು ತನ್ನದೇ ಆದ ತಕ್ಕಡಿಯಲ್ಲಿ ಅಳೆದು ತೂಗುತ್ತಿರುತ್ತಾನೆ.
ಮಿತಿಮೀರಿದ ವರ್ತನೆ ವಿಕೃತವಾದ ಮನಸ್ಸುಗಳು ಯಾವ ಮಟ್ಟಿಗೆ ಭೂಮಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುವ ಕಥೆಯನ್ನು ಬಹಳ ಸಂಕ್ಷಿಪ್ತವಾಗಿ ಎಳೆ ಎಳೆಯಾಗಿ 8 ಎಪಿಸೋಡ್ ಗಳ ಮೂಲಕ ಬರಲಿದೆ.
ಕುಂದಾಪುರದಲ್ಲಿ ಮೊಟ್ಟಮೊದಲ ಬಾರಿಗೆ ಅಕ್ಟೋಬರ್ 10ನೇ ತಾರೀಕು ಸಂಜೆ 6:10 ಕ್ಕೆ, KA-20 media ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ. ಇದರ ಚಿತ್ರಕಥೆ ಸಂಭಾಷಣೆ ನಿರ್ದೇಶನದ ಸಂಪೂರ್ಣ ಜವಾಬ್ದಾರಿಯನ್ನ ಕುಂದಾಪುರ ಭಾಗದಲ್ಲಿ ಹಾಸ್ಯ ತುಣುಕುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಶೈಲಿಯಲ್ಲಿ ನಗೆ ಕಚಗುಳಿಯನ್ನ ಇಟ್ಟು ನಗಿಸುತ್ತಾ ಬಂದಿರುವ ಲಕ್ಕಿ ನಾಗೇಶ್ ಇವರು ನಿರ್ವಹಿಸಿದ್ದಾರೆ ಹಾಗೆ ಇದಕ್ಕೆ ಕೆ ಆರ್ ರಾಜೇಶ್ ಭಟ್ ಬಂಡವಾಳವನ್ನ ಹೂಡಿದ್ದು ಶರತ್ ಶೆಟ್ಟಿ ಬಿಜೂರು ಕಥೆ ಈ web series ಗೆ ಇದೆ.
ಸನತ್ ಉಪ್ಪುಂದ ಇವರ ಛಾಯಾಗ್ರಹಣ ಅದ್ಬುತವಾಗಿ ಮೂಡಿ ಬಂದಿದೆ. ನಿರ್ವಹಣೆ ಅರುಣ್ ಶೆಟ್ಟಿ ಬಿಜೂರು ಅವರು ಮಾಡಿರುತ್ತಾರೆ. ಕುಂದಾಪುರ ಭಾಗದ ಅನೇಕ ರಂಗಭೂಮಿ ಕಲಾವಿದರು ದಂಡೆ ಬಣ್ಣ ಹಚ್ಚಿದ್ದಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ವೆಬ್ ಸೀರೀಸ್ ಅಕ್ಟೋಬರ್ 10 ಕ್ಕೆ ಸಂಜೆ ಬಿಡುಗಡೆಗೊಳ್ಳಲಿದೆ.
















